
ವೀಕೆಂಡ್ನಲ್ಲಿ ವೆಬ್ ಸೀರಿಸ್ ಅಥವಾ ಸಿನಿಮಾ ಸಿಕ್ಕರೆ ಟೈಮ್ಪಾಸ್ ಆಗುತ್ತದೆ. ಸಂಜೆ ಮೇಲೆ ಹೇಗೂ ಐಪಿಎಲ್ ಇರುತ್ತದೆ. ಬೆಳಿಗ್ಗೆ/ಮಧ್ಯಾಹ್ನವನ್ನು ದೂಡೋಕೆ ಒಂದೊಳ್ಳೆಯ ಸಿನಿಮಾ ಅಥವಾ ಸೀರಿಸ್ ಸಿಕ್ಕರೆ ಸಾಕು ಎಂದು ಕಾಯುತ್ತಾ ಕೂತವರಿಗೆ ಒಂದು ಸಿಹಿ ಸುದ್ದಿ. ಜೀ5 ಒಟಿಟಿಯಲ್ಲಿ ಈಗ ವೆಬ್ ಸೀರಿಸ್ (Web Series) ಒಂದು ಬಿಡುಗಡೆ ಕಂಡಿದೆ. ಈ ವೆಬ್ ಸೀರಿಸ್ ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ನಿಂದ ಕೂಡಿದೆ. ಇದನ್ನು ನೀವು ವೀಕೆಂಡ್ ವಾಚ್ಲಿಸ್ಟ್ನಲ್ಲಿ ಇಟ್ಟುಕೊಳ್ಳಬಹುದು.
ಹಲವು ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ ಅನುಭವ ಇರುವ ಶ್ರುತಿ ನಾಯ್ಡು ನಿರ್ಮಾಣದಲ್ಲಿ ‘ಅಯ್ಯನ ಮನೆ’ ಸರಣಿ ಮೂಡಿ ಬಂದಿದೆ. ಇದು ವೆಬ್ ಸರಣಿ ಎನ್ನುವುದಕ್ಕಿಂತ ಮಿನಿ ವೆಬ್ ಸರಣಿ ಎನ್ನಬಹುದು. ಏಕೆಂದರೆ ಇದರಲ್ಲಿ ಇರೋದು ಕೇವಲ ಆರು ಎಪಿಸೋಡ್ಗಳು ಮಾತ್ರ. ಅವೆಲ್ಲವೂ 18-20 ನಿಮಿಷಗಳ ಅಂತರ ಹೊಂದಿರುವವು. ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಈ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನಿಂದ (ಏಪ್ರಿಲ್ 25) ಈ ಸರಣಿ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
Ayyana Mane Kannada Web Series Na Nodde. Very refreshing and Gripping story with outstanding performances from Kushee Ravi of Dia. Climax was ultimate 🥵
The way it is written and executed impressed me a lot #AyyanaMane @ZEE5Kannada Thank you this seriesDont miss this 🔥 pic.twitter.com/EkI9JuPEjj
— ಹೆಸರಲ್ಲೇನಿದೆ ಬಿಡಿ (@Naneyidupakka) April 25, 2025
#AyyanaMane is a new Kannada series on ZEE5 with a thrilling story. It’s about a young bride, Jaaji, who finds strange things in her husband’s old house. The acting, especially by Kushee Ravi and Manasi Sudhir, is really good. The story is full of mystery and keeps you hooked. A… pic.twitter.com/gZfsOTuv3w
— ಗುಗ್ಗು | GuGGu (@GuGGu_07) April 25, 2025
ವೆಬ್ ಸೀರಿಸ್ಗಳನ್ನು ಜನರು ಹೆಚ್ಚೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಸಸ್ಪೆನ್ಸ್ ಥ್ರಿಲ್ಲರ್ ವಿಚಾರಗಳು ಇದ್ದರೆ ಜನರಿಗೆ ಮತ್ತಷ್ಟು ಇಷ್ಟ ಆಗುತ್ತದೆ. ‘ಅಯ್ಯನ ಮನೆ’ ಕೂಡ ಇಂಥದ್ದೇ ಕಥಾ ಹಂದರವನ್ನು ಹೊಂದಿದೆ. ವಿವಾಹ ಆಗಿ ಬರುವ ಕಥಾ ನಾಯಕಿ ಆ ಮನೆಯಲ್ಲಿ ಸಾಕಷ್ಟು ವಿಚಿತ್ರಗಳನ್ನು ಅನುಭವಿಸುತ್ತಾಳೆ. ಇದರ ಜಾಡು ಹಿಡಿದು ಹೋಗುವಾಗ ಕಥೆ ತೆರೆದುಕೊಳ್ಳುತ್ತದೆ. ರಮೇಶ್ ಇಂದಿರಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಜೀ5ನಲ್ಲಿ ಬರ್ತಿದೆ ಕನ್ನಡ ಮಿನಿ ಸೀಸನ್; ‘ಅಯ್ಯನ ಮನೆ’ ಹೆಸರಿನ ಹೊಸ ಪ್ರಯತ್ನ
ಈ ಸೀರಿಸ್ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ. ‘ನಿರೂಪಣೆ ಗ್ರಿಪ್ಪಿಂಗ್ ಆಗಿದೆ’, ‘ನೋಡಲೇ ಬೇಕಾದ ಸೀರಿಸ್’ ಎಂಬಿತ್ಯಾದಿ ಪಾಸಿಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ಸರಣಿಯಲ್ಲಿ ಕರ್ನಾಟಕದ ಸಂಸ್ಕೃತಿಯ ಅನಾವರಣ ಕೂಡ ಆಗಿದೆ ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:46 pm, Fri, 25 April 25