ಜೂನ್​ 21ರಿಂದ ‘ಬಿಗ್​ ಬಾಸ್​ ಒಟಿಟಿ’ ಹೊಸ ಸೀಸನ್​; ಇಲ್ಲಿದೆ ಅಧಿಕೃತ ಮಾಹಿತಿ

ನಟ ಸಲ್ಮಾನ್​ ಖಾನ್​ ಅವರು ‘ಸಿಕಂದರ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆದ್ದರಿಂದ ‘ಬಿಗ್​ ಬಾಸ್​ ಒಟಿಟಿ 3’ ಶೋಗಾಗಿ ಸಮಯ ಹೊಂದಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಹಾಗಾಗಿ ಸಲ್ಮಾನ್​ ಖಾನ್​ ಅವರ ಬದಲು ಅನಿಲ್​ ಕಪುರ್​ ಅವರನ್ನು ಆಯ್ಕೆ ಮಾಡಲಾಗಿದೆ. ಜೂನ್​ 21ರಂದು ಈ ಕಾರ್ಯಕ್ರಮದ ಪ್ರಸಾರ ಆರಂಭ ಆಗಲಿದೆ.

ಜೂನ್​ 21ರಿಂದ ‘ಬಿಗ್​ ಬಾಸ್​ ಒಟಿಟಿ’ ಹೊಸ ಸೀಸನ್​; ಇಲ್ಲಿದೆ ಅಧಿಕೃತ ಮಾಹಿತಿ
ಅನಿಲ್​ ಕಪೂರ್​
Follow us
ಮದನ್​ ಕುಮಾರ್​
|

Updated on: Jun 06, 2024 | 7:12 PM

ಈಗಾಗಲೇ ಹಿಂದಿಯಲ್ಲಿ ಎರಡು ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿರುವ ಬಿಗ್​ ಬಾಸ್​ ಒಟಿಟಿ’ (Bigg Boss OTT) ಶೋ ಮತ್ತೆ ಬರುತ್ತಿದೆ. ಇದರ ಮೂರನೇ ಆವೃತ್ತಿ ಬಗ್ಗೆ ಪ್ರೇಕ್ಷಕರಲ್ಲಿ ಸಖತ್​ ನಿರೀಕ್ಷೆ ಮೂಡಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ‘ಬಿಗ್​ ಬಾಸ್​ ಒಟಿಟಿ 3’ (Bigg Boss OTT 3) ಪ್ರಸಾರ ಆಗಲಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ವಿಶೇಷ ಏನೆಂದರೆ, ಈ ಬಾರಿ ನಿರೂಪಕರ ಬದಲಾವಣೆ ಆಗಿದೆ. ‘ಬಿಗ್ ಬಾಸ್​ ಒಟಿಟಿ 3’ ಶೋಗೆ ಅನಿಲ್​ ಕಪೂರ್​ (Anil Kapoor) ನಿರೂಪಣೆ ಮಾಡಲಿದ್ದಾರೆ.

ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ಗೆ ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು. 2ನೇ ಸೀಸನ್​ ಅನ್ನು ಸಲ್ಮಾನ್​ ಖಾನ್​ ನಡೆಸಿಕೊಟ್ಟಿದ್ದರು. ಈಗ ಮೂರನೇ ಸೀಸನ್​ಗೆ ಆ್ಯಂಕರ್​ ಬದಲಾಗಲಿದ್ದಾರೆ ಎಂಬುದನ್ನು ತಿಳಿಸಲು ಈ ಮೊದಲೇ ವಿಶೇಷ ಪ್ರೋಮೋಗಳನ್ನು ಹರಿಬಿಡಲಾಗಿತ್ತು. ಆದರೆ ಅದರಲ್ಲಿ ಅನಿಲ್​ ಕಪೂರ್​ ಅವರ ಮುಖ ಕಾಣಿಸಿರಲಿಲ್ಲ. ಈಗ ಅಧಿಕೃತವಾಗಿ ‘ಜಿಯೋ ಸಿನಿಮಾ’ ಸೋಶಿಯಲ್​ ಮೀಡಿಯಾ ಖಾತೆಯ ಮೂಲಕ ‘ಬಿಗ್​ ಬಾಸ್​ ಒಟಿಟಿ 3’ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಅನಿಲ್​ ಕಪೂರ್​ ಅವರಿಗೆ ಬಾಲಿವುಡ್​ನಲ್ಲಿ ಸಖತ್​ ಡಿಮ್ಯಾಂಡ್​ ಇದೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್​ ಆಗಿರುವ ಅವರು ಈಗಲೂ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಬಿಗ್​ ಬಾಸ್​ ಒಟಿಟಿ 3’ ನಿರೂಪಕನ ಸೀಟ್​ಗೆ ಅವರೀಗ ಆಗಮಿಸುತ್ತಿದ್ದಾರೆ. ಈ ಹೊಸ ಜವಾಬ್ದಾರಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ಫ್ಯಾನ್ಸ್​ ಕಾತರರರಾಗಿದ್ದಾರೆ.

ಇದನ್ನೂ ಓದಿ: ಹುಟ್ಟೂರಿನ ಜನರಿಂದ ಬಿಗ್​ ಬಾಸ್​ ಸಂಗೀತಾಗೆ ಸಿಕ್ತು ಸಿಕ್ಕಾಪಟ್ಟೆ ಪ್ರೀತಿ

ಸಲ್ಮಾನ್​ ಖಾನ್​ ಅವರು ಬಿಗ್​ ಬಾಸ್​ ನಡೆಸಿಕೊಡುವ ಗತ್ತೇ ಬೇರೆ. ಟಿವಿ ವರ್ಷನ್​ಗೆ ಅವರೇ ನಿರೂಪಕನಾಗಿ ಮುಂದುವರಿಯಲಿದ್ದಾರೆ. ಆದರೆ ಈಗ ಅವರು ‘ಸಿಕಂದರ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ಒಟಿಟಿ ವರ್ಷನ್​ ನಡೆಸಿಕೊಡಲು ಸಮಯ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಆ ಕಾರಣದಿಂದ ಅವರ ಸ್ಥಾನಕ್ಕೆ ಅನಿಲ್​ ಕಪುರ್​ ಅವರನ್ನು ಆಯ್ಕೆ ಮಾಡಲಾಗಿದೆ. ಸ್ಪರ್ಧಿಗಳ ಹೆಸರನ್ನು ಈಗಲೇ ಬಹಿರಂಗ ಮಾಡಿ ಎಂದು ಅನೇಕರು ಕಮೆಂಟ್​ ಮೂಲಕ ಬೇಡಿಕೆ ಇಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ