AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ‘ಧುರಂಧರ್ 2’ ಯಾವಾಗ ನೋಡಬಹುದು? ಇಲ್ಲಿದೆ ಮಾಹಿತಿ

Dhurandhar 2 movie: ‘ಧುರಂಧರ್ 2’ ಸಿನಿಮಾದ ಅಬ್ಬರಕ್ಕೆ ಹಲವು ಹಳೆಯ ದಾಖಲೆಗಳೆಲ್ಲ ದೂಳಿಪಟವಾಗಿವೆ. ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬಂದಿದ್ದು, ಇದೀಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಆದರೆ ಭಾರತೀಯರಿಗಲ್ಲ ಬದಲಿಗೆ ವಿದೇಶಿಗರಿಗೆ ಮಾತ್ರ. ‘ಧುರಂಧರ್ 2’ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ, ಆದರೆ ಭಾರತದಲ್ಲಿ ಅಲ್ಲ. ಇದೀಗ ಸಿನಿಮಾವನ್ನು ಭಾರತದಲ್ಲಿ ಯಾವಾಗ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಭಾರತದಲ್ಲಿ ‘ಧುರಂಧರ್ 2’ ಯಾವಾಗ ನೋಡಬಹುದು? ಇಲ್ಲಿದೆ ಮಾಹಿತಿ
ಧುರಂಧರ್ 2
ಮಂಜುನಾಥ ಸಿ.
|

Updated on: May 15, 2026 | 7:12 PM

Share

ರಣ್ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದೆ. ‘ಧುರಂಧರ್ 2’ ಸಿನಿಮಾದ ಅಬ್ಬರಕ್ಕೆ ಹಲವು ಹಳೆಯ ದಾಖಲೆಗಳೆಲ್ಲ ದೂಳಿಪಟವಾಗಿವೆ. ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬಂದಿದ್ದು, ಇದೀಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಆದರೆ ಭಾರತೀಯರಿಗಲ್ಲ ಬದಲಿಗೆ ವಿದೇಶಿಗರಿಗೆ ಮಾತ್ರ. ‘ಧುರಂಧರ್ 2’ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ, ಆದರೆ ಭಾರತದಲ್ಲಿ ಅಲ್ಲ. ಇದೀಗ ಸಿನಿಮಾವನ್ನು ಭಾರತದಲ್ಲಿ ಯಾವಾಗ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಕಳೆದೊಂದು ತಿಂಗಳಿನಿಂದಲೂ ‘ಧುರಂಧರ್ 2’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಸಾಕಷ್ಟು ಗೊಂದಲಗಳಿತ್ತು. ಸಿನಿಮಾ ಯಾವ ಒಟಿಟಿಯಲ್ಲಿ ಬರುತ್ತದೆ ಎಂಬ ಬಗ್ಗೆ ಖಾತ್ರಿ ಇರಲಿಲ್ಲ. ಏಕೆಂದರೆ ‘ಧುರಂಧರ್’ ಮೊದಲ ಭಾಗ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿತ್ತು. ಆದರೆ ಎರಡನೇ ಭಾಗಕ್ಕೆ ಹಲವು ಒಟಿಟಿಗಳಿಂದ ಭಾರಿ ಬೇಡಿಕೆ ಬಂದಿತ್ತು. ಇದೀಗ ಚಿತ್ರತಂಡವು ಭಾರತದ ಹೊರಗೆ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಇದೇ ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

‘ಧುರಂಧರ್ 2’ ನೆಟ್​​ಫ್ಲಿಕ್ಸ್​ನಲ್ಲಿ ಈಗಾಗಲೇ ಬಿಡುಗಡೆ ಆಗಿದೆ. ಆದರೆ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗುವ ದಿನಾಂಕ ಖಾತ್ರಿ ಆಗಿರಲಿಲ್ಲ. ಇದೀಗ ಜಿಯೋ ಹಾಟ್​​ಸ್ಟಾರ್ ‘ಧುರಂಧರ್ 2’ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ‘ಧುರಂಧರ್ 2’ ಸಿನಿಮಾ ಜೂನ್ 04 ರಂದು ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಲಿದೆ. ಜಿಯೋ ಹಾಟ್​​ಸ್ಟಾರ್​​ನಲ್ಲಿ ಪ್ರಸ್ತುತ ಐಪಿಎಲ್ ನೇರ ಪ್ರಸಾರ ನಡೆಯುತ್ತಿದ್ದು, ಐಪಿಎಲ್ ಮುಗಿದ ಬಳಿಕ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಒಟಿಟಿ ವೇದಿಕೆಯದ್ದು.

ಇದನ್ನೂ ಓದಿ:‘ಧುರಂಧರ್ 2’ ಒಟಿಟಿ ಬಿಡುಗಡೆ ದಿನಾಂಕ ನಿಗದಿ, ಇರಲಿದೆ ಟ್ವಿಸ್ಟ್

ಗಮನಿಸಬೇಕಾದ ಅಂಶವೆಂದರೆ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಯ್ತು. ಅದೇ ದಿನ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಬೇಕಿತ್ತು ಆದರೆ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಲಾಯ್ತು. ಬಳಿಕ ಜೂನ್ 4 ರ ದಿನಾಂಕ ಪ್ರಕಟಿಸಲಾಯ್ತು. ಈಗ ಅದನ್ನೂ ಮುಂದಕ್ಕೆ ಹಾಕಲಾಗಿದೆ. ಇದೀಗ ‘ಧುರಂಧರ್ 2’ ಸಿನಿಮಾ ಜೂನ್ 4 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಭಾರತದ ಗೂಢಚಾರಿಯ ಕತೆ ಒಳಗೊಂಡಿರುವ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 1800 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಅನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್ ಜೊತೆಗೆ ಆರ್ ಮಾಧವನ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್ ಇನ್ನೂ ಕೆಲವು ಪ್ರಮುಖ ನಟರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ
ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ
ಸಚಿವರ ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ: ಯತೀಂದ್ರ ಕೊಟ್ರು ಕಾರಣ
ಸಚಿವರ ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ: ಯತೀಂದ್ರ ಕೊಟ್ರು ಕಾರಣ
ಮೃತ ಕೋತಿಗೆ ವೈಕುಂಠ ಸಮಾರಾಧನೆ: ನೂರಾರು ಜನರಿಗೆ ಅನ್ನಸಂತರ್ಪಣೆ
ಮೃತ ಕೋತಿಗೆ ವೈಕುಂಠ ಸಮಾರಾಧನೆ: ನೂರಾರು ಜನರಿಗೆ ಅನ್ನಸಂತರ್ಪಣೆ
‘ಅಮೆರಿಕಾ ಅಮೆರಿಕಾ’ ಸೀಕ್ವೆಲ್​ನಲ್ಲಿ ಮನೋಮೂರ್ತಿ ಸಂಯೋಜನೆಯಲ್ಲಿ ಐದು ಹಾಡು
‘ಅಮೆರಿಕಾ ಅಮೆರಿಕಾ’ ಸೀಕ್ವೆಲ್​ನಲ್ಲಿ ಮನೋಮೂರ್ತಿ ಸಂಯೋಜನೆಯಲ್ಲಿ ಐದು ಹಾಡು