ಬಿಗ್ ಬಾಸ್ ರಿಯಾಲಿಟಿ ಶೋ ಗೆಲ್ಲಬೇಕು ಅಂಥಲೇ ಎಲ್ಲರೂ ದೊಡ್ಮನೆಗೆ ಕಾಲಿಡುತ್ತಾರೆ. ಆದರೆ ಎಲ್ಲರಿಗೂ ಗೆಲ್ಲುವ ಅದೃಷ್ಟ ಇರುವುದಿಲ್ಲ. ವೀಕ್ಷಕರಿಂದ ಕಡಿಮೆ ವೋಟ್ ಪಡೆದರೆ ಹಿನ್ನಡೆ ಆಗುತ್ತದೆ. ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಕನ್ನಡದ ‘ಬಿಗ್ ಬಾಸ್’ (Bigg Boss Kannada OTT) ಶೋ ಪ್ರಸಾರ ಆಯಿತು. ಈ ಶೋನಲ್ಲಿ ಟಾಪ್ 4 ಸ್ಥಾನ ಪಡೆದವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಎಂಟ್ರಿ ನೀಡುವ ಚಾನ್ಸ್ ಸಿಗುತ್ತದೆ ಎಂದು ಮೊದಲೇ ಹೇಳಲಾಗಿತ್ತು. ಆದರೆ ಫಿನಾಲೆ ವಾರದವರೆಗೂ ಬಂದ 8 ಜನರ ಪೈಕಿ ನಾಲ್ವರು ಕೊನೇ ಕ್ಷಣದಲ್ಲಿ ಮುಗ್ಗರಿಸಿದ್ದಾರೆ. ಜಯಶ್ರೀ ಆರಾಧ್ಯ (Jayashree Aradhya), ಜಶ್ವಂತ್ ಬೋಪಣ್ಣ, ಸೋಮಣ್ಣ ಮಾಚಿಮಾಡ ಮತ್ತು ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಫಿನಾಲೆ ವಾರದಲ್ಲಿ ಔಟ್ ಆಗಿದ್ದಾರೆ. ಇನ್ನುಳಿದ ಸ್ಪರ್ಧಿಗಳಾದ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಮತ್ತು ಸಾನ್ಯಾ ಅಯ್ಯರ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಹೋಗುವ ಚಾನ್ಸ್ ಪಡೆದಿದ್ದಾರೆ.
ಜಯಶ್ರೀ ಆರಾಧ್ಯ ಅವರು ಸತತ 5 ವಾರವೂ ನಾಮಿನೇಟ್ ಆಗಿದ್ದರು. ಆದರೆ ವೀಕ್ಷಕರ ವೋಟ್ ಪಡೆಯುವ ಮೂಲಕ ತಮ್ಮ ಸ್ಥಾನ ಉಳಿಸಿಕೊಂಡಿದ್ದರು. ಹಾಗಂತ ಫಿನಾಲೆ ವಾರದಲ್ಲಿ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ವೋಟ್ ಸಿಕ್ಕಿಲ್ಲ. ಹಾಗಾಗಿ ಅವರ ಬಿಗ್ ಬಾಸ್ ಪಯಣ ಅಂತ್ಯವಾಗಿದೆ. ಹೆಚ್ಚೇನೂ ಬೇಸರ ಇಲ್ಲದೇ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.
ಕನ್ನಡ ಸರಿಯಾಗಿ ಬರಲ್ಲ ಎಂಬ ಕಾರಣಕ್ಕೆ ಜಶ್ವಂತ್ ಬೋಪಣ್ಣ ಅವರನ್ನು ವೀಕ್ಷಕರು ಹೆಚ್ಚಾಗಿ ಇಷ್ಟಪಟ್ಟಿಲ್ಲ ಎನಿಸುತ್ತದೆ. ಆದರೂ ಕೂಡ ಅವರು ಫಿನಾಲೆ ವಾರದವರೆಗೂ ಪೈಪೋಟಿ ನೀಡಿದರು. ಅಂತಿಮವಾಗಿ ಅವರು ಕೂಡ ಹೆಚ್ಚಿನ ವೋಟ್ ಪಡೆಯದ ಕಾರಣ ಬಿಗ್ ಬಾಸ್ ಆಟ ಮುಗಿಸಿದ್ದಾರೆ. ಅದೇ ರೀತಿ ಸೋಮಣ್ಣ ಮಾಚಿಮಾಡ ಕೂಡ ಕೊನೇ ವಾರದಲ್ಲಿ ಔಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚು ಮನರಂಜನೆ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಅದೇ ಕಾರಣಕ್ಕಾಗಿ ಅವರಿಗೆ ಹೆಚ್ಚು ವೋಟ್ ಸಿಕ್ಕಿಲ್ಲದೇ ಇರಬಹುದು.
ವೈರಲ್ ಹುಡುಗಿ ಸೋನು ಶ್ರೀನಿವಾಸ್ ಗೌಡ ಅವರು ಕೊನೇ ಹಂತದವರೆಗೂ ಆತ್ಮವಿಶ್ವಾಸ ಉಳಿಸಿಕೊಂಡಿದ್ದರು. ಫೈನಲ್ ರೌಂಡ್ನಲ್ಲಿ ಅವರ ಮತ್ತು ಸಾನ್ಯಾ ಐಯ್ಯರ್ ನಡುವೆ ಹಣಾಹಣಿ ನಡೆಯಿತು. ಕಡೆಗೂ ಸೋನು ಗೌಡ ಅವರಿಗೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಟಿವಿ ಸೀಸನ್ಗೆ ಹೋಗಬೇಕು ಎಂದುಕೊಂಡಿದ್ದ ಅವರು ಕನಸು ಚೂರಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:11 am, Sat, 17 September 22