ರಿಲೀಸ್​ಗೆ ಸಿದ್ಧವಾಗುತ್ತಿದೆ ‘ಹತ್ಯ’ ಸಿನಿಮಾ; ರಿಯಲ್​ ಘಟನೆಗಳ ಆಧಾರಿತ ಪ್ಯಾನ್​ ಇಂಡಿಯಾ ಚಿತ್ರ

| Updated By: ರಾಜೇಶ್ ದುಗ್ಗುಮನೆ

Updated on: May 29, 2023 | 7:01 AM

Hatya Movie: ವಿಕಾಸ್ ಗೌಡ, ಕಾಮಿಕಾ ಆಂಚಲ್, ಹ್ಯಾರಿ ಜೋಶ್, ಸಂತೋಷ್ ಮೇದಪ್ಪ, ಶ್ಯಾಮ್, ನಾಗೇಶ್ ಮಯ್ಯ ಮುಂತಾದವರು ‘ಹತ್ಯ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಇದು ಪ್ಯಾನ್​ ಇಂಡಿಯಾ ಸಿನಿಮಾ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.

ರಿಲೀಸ್​ಗೆ ಸಿದ್ಧವಾಗುತ್ತಿದೆ ‘ಹತ್ಯ’ ಸಿನಿಮಾ; ರಿಯಲ್​ ಘಟನೆಗಳ ಆಧಾರಿತ ಪ್ಯಾನ್​ ಇಂಡಿಯಾ ಚಿತ್ರ
ಹತ್ಯ ಸಿನಿಮಾ ಪೋಸ್ಟರ್​
Follow us on

ನೈಜ ಘಟನೆ ಆಧಾರಿತ ಸಿನಿಮಾಗಳು ಬಂದಾಗ ಜನರಿಗೆ ಕೌತುಕ ಹೆಚ್ಚುತ್ತದೆ. ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್​ ಫೈಲ್ಸ್​’ ಮುಂತಾದ ಸಿನಿಮಾಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿದವು. ಸಮಾಜವನ್ನು ಆತಂಕಕ್ಕೆ ಒಳಗಾಗಿಸಿದ ಅನೇಕ ಘಟನೆಗಳು ಇವೆ. ಅವುಗಳನ್ನು ಕುರಿತು ಸಿನಿಮಾ ಸಿದ್ಧವಾಗುತ್ತಲೇ ಇವೆ. ಇದು ಪ್ಯಾನ್​ ಇಂಡಿಯಾ ಚಿತ್ರಗಳ (Pan India Movie) ಜಮಾನಾ. ಹಾಗಾಗಿ ದೇಶವ್ಯಾಪಿಯಾಗಿ ಸಂಚಲನ ಮೂಡಿಸಿದ ಘಟನೆಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿವೆ. ಈಗ ‘ಹತ್ಯ’ ಶೀರ್ಷಿಕೆಯ ಸಿನಿಮಾ ಕೂಡ ಇದೇ ಕಾರಣಕ್ಕೆ ಕೌತುಕ ಮೂಡಿಸಿದೆ. ದೆಹಲಿಯಲ್ಲಿ ನಡೆದ ನಿರ್ಭಯ ಹತ್ಯೆ, ಹೈದರಾಬಾದ್ ಮರ್ಡರ್ ಮತ್ತು ಅತ್ಯಾಚಾರ, ಇತ್ತೀಚೆಗೆ ದೆಹಲಿಯಲ್ಲಿ ಯುವತಿಯ (Shraddha Walker) ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಟ್ಟಿದ್ದ ಘಟನೆಗಳು ಸೇರಿದಂತೆ ಇಂತಹ ಹಲವು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ ಎಂಬುದು ವಿಶೇಷ. ‘ಹತ್ಯ’ ಸಿನಿಮಾ (Hatya Movie) ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..

ಈ ಸಿನಿಮಾದ ಕಥೆ ಏನು?

‘ಹತ್ಯ’ ಚಿತ್ರದ ನಾಯಕಿ ತನ್ನ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಆ ಘಟನೆಯನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ ಮನಸ್ಸಿನಲ್ಲೇ ನೋವು ಅನುಭವಿಸುತ್ತಾಳೆ. ಈ ಘಟನೆಯಿಂದ ಆಕೆಯ ಮನಸ್ಥಿತಿ ಬದಲಾಗುತ್ತದೆ. ಆನಂತರ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ. ಇದೇ ಚಿತ್ರದ ಕಥಾಹಂದರ. ಇದೊಂದು ಮಹಿಳಾ ಪ್ರಧಾನ ಚಿತ್ರ ಎಂದು ಹೇಳಿದ್ದಾರೆ ಗಂಗಾಧರ್ (ಗಂಗು). ಅವರೇ ಈ ಚಿತ್ರದ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಈ ಸಿನಿಮಾಗೆ ವರುಣ್ ‌.ಜಿ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಇಂಥ ಕಥಾವಸ್ತುವನ್ನು ಅವರು ಆಯ್ಕೆ ಮಾಡುಕೊಂಡಿದ್ದಾರೆ.

ಇದನ್ನೂ ಓದಿ: Tipu Sultan: ಟಿಪ್ಪು ಸುಲ್ತಾನ್​ ಕುರಿತು ಪ್ಯಾನ್​ ಇಂಡಿಯಾ ಸಿನಿಮಾ; ಮೋಷನ್​ ಪೋಸ್ಟರ್​ನಲ್ಲೇ ಹಲವು ಆರೋಪ

ಸಾಗರಂ ವರ್ಲ್ಡ್​ ಸಿನಿಮಾ ಲಾಂಛನದಲ್ಲಿ ರಾಮಲಿಂಗಂ, ಶ್ಯಾಮ್ ಹಾಗೂ ಗಂಗಾಧರ್ ಅವರು ‘ಹತ್ಯ’ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಿರಿಯ ಕ್ಯಾಮೆರಾಮ್ಯಾನ್​ ಪಿ.ಕೆ.ಹೆಚ್ ದಾಸ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಅಲೆನ್ ಕ್ರಿಸ್ಟ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಸಿನಿಮಾದ ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ. ಪಾತ್ರವರ್ಗದಲ್ಲಿ ಅನೇಕ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ: Radhika Kumaraswamy: ಪ್ಯಾನ್‌ ಇಂಡಿಯಾ ನಾಯಕಿಯಾಗಿ ಸ್ಯಾಂಡಲ್​ವುಡ್ ಸ್ವೀಟಿ

ವಿಕಾಸ್ ಗೌಡ, ಕಾಮಿಕಾ ಆಂಚಲ್, ಹ್ಯಾರಿ ಜೋಶ್, ಸಂತೋಷ್ ಮೇದಪ್ಪ, ಶ್ಯಾಮ್, ನಾಗೇಶ್ ಮಯ್ಯ ಮುಂತಾದವರು ‘ಹತ್ಯ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಮೊದಲೇ ಹೇಳಿದಂತೆ ಇದು ಪ್ಯಾನ್​ ಇಂಡಿಯಾ ಸಿನಿಮಾ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸದ್ಯಕ್ಕೆ ಇದರ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ದೆಹಲಿಯಲ್ಲಿ ನಡೆದ ನಿರ್ಭಯ ಹತ್ಯೆ, ಹೈದರಾಬಾದ್ ಮರ್ಡರ್ ಮತ್ತು ಅತ್ಯಾಚಾರ, ದೆಹಲಿ ಯುವತಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಟ್ಟಿದ್ದ ಘಟನೆಗಳು ಈ ಸಿನಿಮಾದಲ್ಲಿ ಹೇಗೆ ಮೂಡಿಬರಲಿವೆ ಎಂಬುದನ್ನು ತಿಳಿಯುವ ಕೌತುಕ ಸೃಷ್ಟಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:06 pm, Sun, 28 May 23