ರಾಜಕೀಯದಲ್ಲಿ ಪವನ್ ಕಲ್ಯಾಣ್ ಬ್ಯುಸಿ, ಮಗನ ಸಿನಿಮಾ ಎಂಟ್ರಿಗೆ ಸಜ್ಜಾಗುತ್ತಿದೆ ವೇದಿಕೆ

ಪವನ್ ಕಲ್ಯಾಣ್ ಆಂಧ್ರದ ಉಪ ಮುಖ್ಯಮಂತ್ರಿ ಆಗಿದ್ದು ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದರ ನಡುವೆ ಪವನ್ ಕಲ್ಯಾಣ್​ರ ಪುತ್ರನ ಚಿತ್ರರಂಗದಲ್ಲಿ ಎಂಟ್ರಿಗೆ ವೇದಿಕೆ ಸಜ್ಜಾಗುತ್ತಿದೆ. ಪವನ್ ಪುತ್ರನಿಗಾಗಿ ನಿರ್ದೇಶಕರೊಬ್ಬರು ಕತೆ ರೆಡಿ ಮಾಡುತ್ತಿದ್ದಾರೆ.

ರಾಜಕೀಯದಲ್ಲಿ ಪವನ್ ಕಲ್ಯಾಣ್ ಬ್ಯುಸಿ, ಮಗನ ಸಿನಿಮಾ ಎಂಟ್ರಿಗೆ ಸಜ್ಜಾಗುತ್ತಿದೆ ವೇದಿಕೆ
Follow us
|

Updated on: Jul 09, 2024 | 3:37 PM

ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಪಂಚಾಯತ್ ರಾಜ್ ಸೇರಿದಂತೆ ಕೆಲವು ಪ್ರಮುಖ ಖಾತೆಗಳನ್ನು ಸಹ ಪವನ್ ಕಲ್ಯಾಣ್ ಸಂಭಾಳಿಸುತ್ತಿದ್ದಾರೆ. ರಾಜಕೀಯ ಪಕ್ಷವೊಂದರ ಅಧ್ಯಕ್ಷರೂ ಆಗಿ, ರಾಜ್ಯವೊಂದರ ಉಪ ಮುಖ್ಯ ಮಂತ್ರಿಯೂ ಆಗಿರುವ ಪವನ್ ಕಲ್ಯಾಣ್​ಗೆ ಈಗ ಜವಾಬ್ದಾರಿ ಹೆಚ್ಚಿದ್ದು ಸಿನಿಮಾಗಳಿಂದ ತುಸು ಅಂತರ ಕಾಯ್ದುಕೊಳ್ಳಲಿದ್ದಾರೆ. ಪವನ್ ಗೆದ್ದು ಡಿಸಿಎಂ ಆಗಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾದರೂ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದರ ನಡುವೆ ತಂದೆಯ ಕೊರತೆಯನ್ನು ನೀಗಿಸಲು ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಪವನ್ ಕಲ್ಯಾಣ್​ರ ಎರಡನೇ ಪತ್ನಿ ರೇಣು ದೇಸಾಯಿ ಅವರ ಪುತ್ರ ಅಕಿರಾ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ಕೆಲ ತಿಂಗಳುಗಳಿಂದಲೂ ಈ ಕುರಿತು ಚರ್ಚೆ ಜಾರಿಯಲ್ಲಿದೆ. ಅಕಿರ ಸಿನಿಮಾ ರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಇದೀಗ ನಿರ್ದೇಶಕರೊಬ್ಬರು ಅಕಿರಾಗಾಗಿ ಕತೆ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಹೇಳಿಕೊಂಡಿದ್ದಾರೆ.

ಪವನ್ ಕಲ್ಯಾಣ್​ರ ಹಿಟ್ ಸಿನಿಮಾ ‘ಗಬ್ಬರ್ ಸಿಂಗ್’ ನಿರ್ದೇಶನ ಮಾಡಿದ್ದ ಹರೀಶ್ ಶಂಕರ್, ಪವನ್​ರ ಪುತ್ರ ಅಕಿರಾಗಾಗಿ ಕತೆ ರೆಡಿ ಮಾಡುತ್ತಿದ್ದಾರಂತೆ. ಆದಷ್ಟು ಬೇಗ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಅದೇ ‘ಗಬ್ಬರ್ ಸಿಂಗ್’ ಸೇರಿದಂತೆ ಇನ್ನೂ ಕೆಲ ಪವನ್ ಕಲ್ಯಾಣ್ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಪವನ್​ರ ಆಪ್ತ ಬಂಡ್ಲ ಗಣೇಶ್, ತಾವು ಅಕಿರಾ ಸಿನಿಮಾಕ್ಕೆ ಬಂಡವಾಳ ಹೂಡುವುದಾಗಿ ಘೋಷಣೆ ಮಾಡಿದ್ದರು. ಬಹುಷಃ ಅವರೇ ಅಕಿರಾರ ಸಿನಿಮಾಕ್ಕೆ ಬಂಡವಾಳ ಹೂಡುವ ಸಾಧ್ಯತೆ ಇದೆ.

ಇದನ್ನೂ ಓದಿ:ನಟನೆ ಮುಂದುವರೆಸುತ್ತಾರಾ ಆಂಧ್ರ ಡಿಸಿಎಂ ಪವನ್ ಕಲ್ಯಾಣ್? ಕೊಟ್ಟರು ಸ್ಪಷ್ಟನೆ

ಅಕಿರಾ ನಂದ, ಪವನ್​ ಹಾಗೂ ರೇಣು ದೇಸಾಯಿಯ ಮೊದಲ ಪುತ್ರ. ಇತ್ತೀಚೆಗೆ ಪವನ್ ಕಲ್ಯಾಣ್ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದಾಗ ಅಕಿರಾ ನಂದ ಅವರನ್ನು ಪವನ್ ಜೊತೆಗೆ ಕರೆದೊಯ್ದು ಚಂದ್ರಬಾಬು ನಾಯ್ಡುಗೆ ಶುಭಾಶಯ ತಿಳಿಸಿದ್ದರು. ಪ್ರಧಾನಿ ಮೋದಿಯನ್ನೂ ಸಹ ಅಕಿರಾಗೆ ಭೇಟಿ ಮಾಡಿಸಿದ್ದರು. ಮಗನನ್ನು ಚಿತ್ರರಂಗಕ್ಕೆ ಕರೆತರಬೇಕೆನ್ನುವ ಆಸೆ ಪವನ್ ಕಲ್ಯಾಣ್​ ಗೆ ಹಾಗೂ ರೇಣು ದೇಸಾಯಿಗೂ ಸಹ ಇದೆ. ಈಗ ಅದಕ್ಕೆ ತಕ್ಕಂತೆ ಕತೆ ಸಹ ರೆಡಿಯಾಗುತ್ತಿದ್ದು ಆದಷ್ಟು ಬೇಗ ಅಕಿರಾ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕೊಲೆ ಕೇಸ್​ನಲ್ಲಿ 11 ವರ್ಷ ಜೈಲು ಶಿಕ್ಷೆ ಬಗ್ಗೆ ಖೈದಿ ಹೇಳಿದ್ದೇನು?
ಕೊಲೆ ಕೇಸ್​ನಲ್ಲಿ 11 ವರ್ಷ ಜೈಲು ಶಿಕ್ಷೆ ಬಗ್ಗೆ ಖೈದಿ ಹೇಳಿದ್ದೇನು?
‘ನನ್ನ ಕ್ಷೇತ್ರದ ಅನುದಾನ ನೀವು ಕಿತ್ಕೊಂಡ್ರಿ; ಮಾಜಿ MLA ಮಂಜುನಾಥ್‌ ಕಿಡಿ
‘ನನ್ನ ಕ್ಷೇತ್ರದ ಅನುದಾನ ನೀವು ಕಿತ್ಕೊಂಡ್ರಿ; ಮಾಜಿ MLA ಮಂಜುನಾಥ್‌ ಕಿಡಿ
ಸಭಾಧ್ಯಕ್ಷ ಯುಟಿ ಖಾದರ್ ಪಕ್ಷಾಪಾತ ದೋರಣೆ ಪ್ರದರ್ಶಿಸುತ್ತಿದ್ದಾರೆ ; ಅಶೋಕ
ಸಭಾಧ್ಯಕ್ಷ ಯುಟಿ ಖಾದರ್ ಪಕ್ಷಾಪಾತ ದೋರಣೆ ಪ್ರದರ್ಶಿಸುತ್ತಿದ್ದಾರೆ ; ಅಶೋಕ
ಆಸ್ಪತ್ರೆಗೆ ಬಂದು ಅಜ್ಜನೆದುರು ಮಂಡಿಯೂರಿದ ಆನೆ; ಎಮೋಷನಲ್ ವಿಡಿಯೋ ಇಲ್ಲಿದೆ
ಆಸ್ಪತ್ರೆಗೆ ಬಂದು ಅಜ್ಜನೆದುರು ಮಂಡಿಯೂರಿದ ಆನೆ; ಎಮೋಷನಲ್ ವಿಡಿಯೋ ಇಲ್ಲಿದೆ
ಹೇಮಾವತಿ ಜಲಾಶಯದಿಂದ ಸಿಡಿದ ತುಂತುರು ಹನಿಗಳಲ್ಲಿ ಮಿಂದ ಯುವಕ ಯುವತಿಯರು
ಹೇಮಾವತಿ ಜಲಾಶಯದಿಂದ ಸಿಡಿದ ತುಂತುರು ಹನಿಗಳಲ್ಲಿ ಮಿಂದ ಯುವಕ ಯುವತಿಯರು
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ ಸಾಲಿ ಮಂಜಪ್ಪ ವಸೂಲಿ ಮಂಜಪ್ಪನಾದ ವಿಡಿಯೋ!
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ ಸಾಲಿ ಮಂಜಪ್ಪ ವಸೂಲಿ ಮಂಜಪ್ಪನಾದ ವಿಡಿಯೋ!
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?