ಪೂಜಾ ಹೆಗ್ಡೆ ಕೈಯಲ್ಲಿ ಇಲ್ಲ ಒಂದೇ ಒಂದು ಸಿನಿಮಾ; ಅನುಮಾನ ಮೂಡಿಸಿದೆ ನಡೆ
ಹಲವು ಸಿನಿಮಾಗಳಲ್ಲಿ ನಟಿಸಿದ ಪೂಜಾ ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಒಪ್ಪಿಕೊಂಡ ಚಿತ್ರದಿಂದ ಅವರು ಹೊರ ನಡೆದಿದ್ದಾರೆ. ಈ ಮಧ್ಯೆ ಪೂಜಾ ಹೆಗ್ಡೆ ನಡೆ ಸಾಕಷ್ಟು ಅನುಮಾನ ಮೂಡಿಸಿದೆ. ಪೂಜಾ ಹೆಗ್ಡೆ ಅವರು ಮದುವೆ ಆಗುತ್ತಾರಾ ಎನ್ನುವ ಅನುಮಾನ ಕೆಲವರಲ್ಲಿ ಹುಟ್ಟಿದೆ.

ನಟಿ ಪೂಜಾ ಹೆಗ್ಡೆ (Pooja Hegde) ಅವರು ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಇದ್ದ ನಟಿ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಹಲವು ಸಿನಿಮಾಗಳಲ್ಲಿ ನಟಿಸಿದ ಅವರು ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಒಪ್ಪಿಕೊಂಡ ಚಿತ್ರದಿಂದ ಅವರು ಹೊರ ನಡೆದಿದ್ದಾರೆ. ಈ ಮಧ್ಯೆ ಪೂಜಾ ಹೆಗ್ಡೆ ನಡೆ ಸಾಕಷ್ಟು ಅನುಮಾನ ಮೂಡಿಸಿದೆ. ಪೂಜಾ ಹೆಗ್ಡೆ ಅವರು ಮದುವೆ ಆಗುತ್ತಾರಾ ಎನ್ನುವ ಅನುಮಾನ ಕೆಲವರಲ್ಲಿ ಹುಟ್ಟಿದೆ.
ಪೂಜಾ ಹೆಗ್ಡೆ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2012ರಲ್ಲಿ. ಅವರು ನಟಿಸಿದ ಮೊದಲ ಸಿನಿಮಾ ತಮಿಳಿನಲ್ಲಿ. ನಂತರ ತೆಲುಗಿನಲ್ಲಿ ‘ಒಕ ಲೈಲಾ ಕೋಸಂ’ ಸಿನಿಮಾದಲ್ಲಿ ಅವರು ನಟಿಸಿದರು. 2016ರಲ್ಲಿ ‘ಮೊಹೆಂಜೋ ದಾರೋ’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ಸೋತಿತು. ಆದರೆ, ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. 2017ರಲ್ಲಿ ಅವರು ನಟಿಸಿದ ‘ಡಿಜೆ: ದುವ್ವಾಡ ಜಗನ್ನಾಥಂ’ ಸಿನಿಮಾದಲ್ಲಿ ನಟಿಸಿದರು.
2018ರಲ್ಲಿ ರಿಲೀಸ್ ಆದ ‘ಅರವಿಂದ ಸಮೇದ ವೀರ ರಾಘವ’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಜೊತೆ ಅವರು ತೆರೆ ಹಂಚಿಕೊಂಡರು. ಬಳಿಕ ಮಹೇಶ್ ಬಾಬು ಜೊತೆ ‘ಮಹರ್ಷಿ’, ಅಕ್ಷಯ್ ಕುಮಾರ್ ಜೊತೆ ‘ಹೌಸ್ಫುಲ್ 4’, ‘ಅಲಾ ವೈಕುಂಟಪುರಮುಲೋ’ ಸಿನಿಮಾದಲ್ಲಿ ಅವರು ಅಲ್ಲು ಅರ್ಜುನ್ ಜೊತೆ ಬಣ್ಣ ಹಚ್ಚಿದ್ದಾರೆ.
‘ರಾಧೆ ಶ್ಯಾಮ್’, ‘ಬೀಸ್ಟ್’, ‘ಸರ್ಕಸ್’, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸೋತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋತಿದ್ದರಿಂದ ಪೂಜಾ ಹೆಗ್ಡೆ ಬೇಸರಗೊಂಡರು. ಆದರೆ, ಅವರಿಗೆ ಆಫರ್ ಕಡಿಮೆ ಆಗಿಲ್ಲ. ಈಗ ಪೂಜಾ ಹೆಗ್ಡೆ ಅವರೇ ಸಿನಿಮಾ ಆಫರ್ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಒಪ್ಪಿಕೊಂಡ ಸಿನಿಮಾಗಳಿಂದಲೂ ಅವರು ಹೊರ ಬಂದಿದ್ದಾರೆ.
ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಹಾಗೂ ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅವರು ಡೇಟ್ ಕಾರಣ ನೀಡಿ ‘ಗುಂಟೂರು ಖಾರಂ’ ಸಿನಿಮಾದಿಂದ ಹೊರ ನಡೆದರು. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗೂ ಇದೇ ಕಾರಣ ನೀಡಿದ್ದಾರೆ. ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳದೇ ಇದ್ದರೂ ಅವರು ಡೇಟ್ ಕಾರಣ ನೀಡುತ್ತಿರುವುದು ಏಕೆ ಎಂಬುದು ಅನೇಕರ ಪ್ರಶ್ನೆ.
ಇದನ್ನೂ ಓದಿ: ಫೋಟೊಶೂಟ್ ಹಿಂದಿನ ಕಷ್ಟಗಳನ್ನು ಚಿತ್ರಗಳ ಮೂಲಕ ತೋರಿಸಿದ ಪೂಜಾ ಹೆಗ್ಡೆ
ಪೂಜಾ ಹೆಗ್ಡೆ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಬಳಿಕ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಇದು ಏಕೆ ಎನ್ನುವ ಪ್ರಶ್ನೆ ಮೂಡಿದೆ. ಒಂದು ಬ್ರೇಕ್ ತೆಗೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ಅವರು ಈ ರೀತಿ ಮಾಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



