ಪವನ್​ ಕಲ್ಯಾಣ್ ನಿರ್ಧಾರಕ್ಕೆ ಬೇಸರ; ಸಿನಿಮಾದಿಂದಲೇ ಹೊರ ನಡೆದ ಪೂಜಾ ಹೆಗ್ಡೆ

TV9 Digital Desk

| Edited By: Rajesh Duggumane

Updated on:Jun 02, 2022 | 3:49 PM

ಚಿತ್ರದ ಶೂಟಿಂಗ್ ವಿಳಂಬವಾಗುತ್ತಿರುವುದರಿಂದ ಪೂಜಾ ಹೆಗ್ಡೆ ಅವರಿಗೆ ಕಿರಿಕಿರಿ ಆಗಿದೆ. ಹೀಗಾಗಿ, ಅವರು ಚಿತ್ರವನ್ನು ಕೈಬಿಟ್ಟಿದ್ದಾರಂತೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಪವನ್​ ಕಲ್ಯಾಣ್ ನಿರ್ಧಾರಕ್ಕೆ ಬೇಸರ; ಸಿನಿಮಾದಿಂದಲೇ ಹೊರ ನಡೆದ ಪೂಜಾ ಹೆಗ್ಡೆ
ಪೂಜಾ-ಪವನ್​ ಕಲ್ಯಾಣ್

ಕೆಲ ಹೀರೋ/ಹೀರೋಯಿನ್​ಗಳು ಕಥೆ ಅಥವಾ ಪಾತ್ರ ಇಷ್ಟವಾಗಿ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಆದರೆ, ಅಂದುಕೊಂಡ ದಿನಾಂಕದಂದು ಸಿನಿಮಾ ಸೆಟ್ಟೇರುವುದಿಲ್ಲ. ಈ ಕಾರಣ ನೀಡಿ ಕಲಾವಿದರು ಚಿತ್ರದಿಂದ ಹೊರ ನಡೆದ ಸಾಕಷ್ಟು ಉದಾಹರಣೆ ಇದೆ. ಈಗ ಪೂಜಾ ಹೆಗ್ಡೆ (Pooja Hegde) ವಿಚಾರದಲ್ಲೂ ಹೀಗೆಯೇ ಆಗಿದೆ. ‘ಭವದೀಯುಡು ಭಗತ್​ ಸಿಂಗ್​’ ಚಿತ್ರದಲ್ಲಿ (Bhavadeeyudu Bhagat Singh) ಪವನ್​ ಕಲ್ಯಾಣ್​ಗೆ (Pawan Kalyan) ಜತೆಯಾಗಿ ಅವರು ನಟಿಸಬೇಕಿತ್ತು. ಆದರೆ, ಸಿನಿಮಾ ಪದೇಪದೇ ವಿಳಂಬ ಆಗುತ್ತಿರುವುದರಿಂದ ಪೂಜಾ ಹೆಗ್ಡೆ ಮುನಿಸಿಕೊಂಡಿದ್ದಾರೆ. ಅವರು ಸಿನಿಮಾದಿಂದಲೇ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ.

ಹರೀಶ್ ಶಂಕರ್ ಅವರು ಭವದೀಯುಡು ಭಗತ್​ ಸಿಂಗ್​’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಈ ಮೊದಲೇ ಸೆಟ್ಟೇರಬೇಕಿತ್ತು. ಆದರೆ, ಚಿತ್ರದ ಕೆಲಸಗಳು ತಡವಾದವು. ಪವನ್ ಕಲ್ಯಾಣ್ ಅವರು ಬೇರೆಬೇರೆ ಕಾರಣ ನೀಡಿ ಸಿನಿಮಾ ಸೆಟ್ಟೇರುವುದು ಮುಂದೂಡುತ್ತಲೇ ಬಂದಿದ್ದಾರೆ. ಈಗ ಪವನ್ ಕಲ್ಯಾಣ್ ಅವರು ‘ವಿನೋದಯಾ ಸೀತಂ​’ ಚಿತ್ರ ರಿಮೇಕ್ ಮಾಡುವುದರ ಮೇಲೆ ಆಸಕ್ತಿ ತೋರಿದ್ದಾರೆ. ಇದರಿಂದ ಹರೀಶ್ ಶಂಕರ್ ಚಿಂತೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ: ಹ್ಯಾಟ್ರಿಕ್ ಸೋಲಿನ ಬಗ್ಗೆ ಪೂಜಾ ಹೆಗ್ಡೆಗೆ ಇಲ್ಲ ಬೇಸರ; ಮೊದಲ ಬಾರಿಗೆ ಮೌನ ಮುರಿದ ನಟಿ

ಇದನ್ನೂ ಓದಿ

‘ಭವದೀಯುಡು ಭಗತ್​ ಸಿಂಗ್​’ ಚಿತ್ರದ ಕೆಲಸಗಳು ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ನಿರ್ದೇಶಕರಿಗೇ ಸರಿಯಾದ ಸ್ಪಷ್ಟತೆ ಇಲ್ಲ. ಈ ಕಾರಣಕ್ಕೆ ಪೂಜಾ ಹೆಗ್ಡೆ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ. ಅನೇಕ ಚಿತ್ರಗಳ ಕೆಲಸದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಸಿನಿಮಾ ನಂಬಿಕೊಂಡು ಅವರು ಕೆಲ ಪ್ರಾಜೆಕ್ಟ್​​ಗಳನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಈಗ ಈ ಚಿತ್ರದ ಶೂಟಿಂಗ್ ವಿಳಂಬವಾಗುತ್ತಿರುವುದರಿಂದ ಅವರಿಗೆ ಕಿರಿಕಿರಿ ಆಗಿದೆ. ಹೀಗಾಗಿ, ಅವರು ಚಿತ್ರವನ್ನು ಕೈಬಿಟ್ಟಿದ್ದಾರಂತೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಒಂದೊಮ್ಮೆ ಇದು ನಿಜವೇ ಆದಲ್ಲಿ ಮತ್ತೊಂದು ಹೀರೋಯಿನ್​ಅನ್ನು ಚಿತ್ರತಂಡ ಹುಡುಕಬೇಕಿದೆ.

ಇದನ್ನೂ ಓದಿ: ಸಾಂಪ್ರದಾಯಿಕ ಲುಕ್​ನಲ್ಲಿ ಫ್ಯಾನ್ಸ್​​ ಮನಗೆದ್ದ ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಅವರು ಮಹೇಶ್ ಬಾಬು-ತ್ರಿವಿಕ್ರಂ ಸಿನಿಮಾಗೆ ಆಯ್ಕೆ ಆಗಿದ್ದಾರೆ. ಸಲ್ಮಾನ್ ಖಾನ್ ಜತೆ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡು ಚಿತ್ರಗಳ ಕೆಲಸಗಳಿಗೆ ಅವರು ಹೈದರಾಬಾದ್ ಹಾಗೂ ಮುಂಬೈ ನಡುವೆ ಪ್ರಯಾಣ ಬೆಳೆಸಬೇಕಿದೆ. ಇನ್ನು, ಜ್ಯೂ.ಎನ್​ಟಿಆರ್ ಹಾಗೂ ಕೊರಟಾಲ ಶಿವ ಒಟ್ಟಾಗಿ ಕೆಲಸ ಮಾಡುತ್ತಿರುವ ಸಿನಿಮಾಗೆ ಇವರೇ ನಾಯಕಿ ಆಗುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada