AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mayilsamy: ತಮಿಳು ಚಿತ್ರರಂಗದ ಹಾಸ್ಯ ನಟ ಮಯಿಲ್​ಸಾಮಿ ಇನ್ನಿಲ್ಲ; ಕಂಬನಿ ಮಿಡಿದ ಕಮಲ್​ ಹಾಸನ್​

Comedy Actor Mayilsamy | Heart Attack: ಮಯಿಲ್​ಸಾಮಿ ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇತ್ತು. ನೂರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಮನೆಮಾತಾಗಿದ್ದರು.

Mayilsamy: ತಮಿಳು ಚಿತ್ರರಂಗದ ಹಾಸ್ಯ ನಟ ಮಯಿಲ್​ಸಾಮಿ ಇನ್ನಿಲ್ಲ; ಕಂಬನಿ ಮಿಡಿದ ಕಮಲ್​ ಹಾಸನ್​
ಮಯಿಲ್​ಸಾಮಿ
ಮದನ್​ ಕುಮಾರ್​
|

Updated on:Feb 19, 2023 | 3:47 PM

Share

ತಮಿಳು ಚಿತ್ರರಂಗದ ಪಾಲಿಗೆ ಕಹಿ ಸುದ್ದಿ ಕೇಳಿಬಂದಿದೆ. ಕಾಲಿವುಡ್​ನಲ್ಲಿ ಜನಪ್ರಿಯರಾಗಿದ್ದ ಹಾಸ್ಯ ಕಲಾವಿದ ಮಯಿಲ್​ಸಾಮಿ (Comedy Actor Mayilsamy) ಅವರು ನಿಧನರಾಗಿದ್ದಾರೆ. ಭಾನುವಾರ (ಫೆ.19) ಬೆಳಗ್ಗೆ ಅವರು ಕೊನೆಯುಸಿರು ಎಳೆದರು ಎಂದು ತಿಳಿದು ಬಂದಿದೆ. ಅವರ ಸಾವಿನ ಸುದ್ದಿಯನ್ನು ಕಲಾವಿದರ ಸಂಘವು ಖಚಿತಪಡಿಸಿದೆ. ಹೃದಯಾಘಾತದಿಂದ (Heart Attack) ಮಯಿಲ್​ಸಾಮಿ ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಖ್ಯಾತ ಕಲಾವಿದನ ನಿಧನಕ್ಕೆ ತಮಿಳು ಚಿತ್ರರಂಗದ ಅನೇಕರು ಕಂಬಿನಿ ಮಿಡಿದಿದ್ದಾರೆ. ನಟ ಕಮಲ್​ ಹಾಸನ್​ (Kamal Haasan), ಆರ್​. ಶರತ್​ಕುಮಾರ್​, ಸಾಕ್ಷಿ ಅಗರ್​​ವಾಲ್​ ಮುಂತಾದವರು ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಯಿಲ್​ಸಾಮಿ ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇತ್ತು. ನೂರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಮನೆಮಾತಾಗಿದ್ದರು. ಅಜಿತ್​ ಕುಮಾರ್​, ಕಮಲ್​ ಹಾಸನ್​, ದಳಪತಿ ವಿಜಯ್​ ಸೇರಿಂದ ಅನೇಕ ಸ್ಟಾರ್​ ಹೀರೋಗಳ ಜೊತೆ ಅವರು ನಟಿಸಿದ್ದರು. ಕಿರುತೆರೆಯ ಅನೇಕ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸಿದ್ದರು. ತಮಿಳು ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.

ಇದನ್ನೂ ಓದಿ
Image
Rahul Koli Death: ಆಸ್ಕರ್​ಗೆ ಭಾರತದಿಂದ ಆಯ್ಕೆ ಆದ ‘ಚೆಲ್ಲೋ ಶೋ’ ಚಿತ್ರದ ಬಾಲ ನಟ ಕ್ಯಾನ್ಸರ್​ನಿಂದ ನಿಧನ
Image
Breaking News: ಖ್ಯಾತ ನಟ ಅರುಣ್​ ಬಾಲಿ ನಿಧನ; ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿದ ಚಿತ್ರರಂಗ
Image
Raju Srivastava Death: ಹಾಸ್ಯ ನಟ ರಾಜು ಶ್ರೀವಾಸ್ತವ​ ನಿಧನ; ಕಡೆಗೂ ಫಲಿಸಲಿಲ್ಲ ಅಭಿಮಾನಿಗಳ ಪ್ರಾರ್ಥನೆ
Image
Pradeep Patwardhan: ಹೃದಯಾಘಾತದಿಂದ ನಟ ಪ್ರದೀಪ್​ ಪಟವರ್ಧನ್​ ನಿಧನ; ಸಂತಾಪ ಸೂಚಿಸಿದ ಮಹಾರಾಷ್ಟ್ರ ಸಿಎಂ

ಇದನ್ನೂ ಓದಿ: Heart Attack: ತೆಂಗಿನಕಾಯಿ ಕೀಳಲು ಮರ ಏರಿದ್ದ ವ್ಯಕ್ತಿಗೆ ಮರದಲ್ಲೇ ಹೃದಯಾಘಾತ, ಸಾವು

ಮಯಿಲ್​ಸಾಮಿ ಬಗ್ಗೆ ಕಮಲ್​ ಹಾಸನ್​, ಶರತ್​ ಕುಮಾರ್​ ಟ್ವೀಟ್​:

‘ತಮ್ಮದೇ ಶೈಲಿಯಲ್ಲಿ ಹಾಸ್ಯ ನಟನೆ ಮಾಡುವುದರಲ್ಲಿ ನನ್ನ ಸ್ನೇಹಿತ ಮಯಿಲ್​ಸಾಮಿ ಅವರು ಯಶಸ್ವಿ ಆಗಿದ್ದರು. ಎಲ್ಲರಿಗೂ ಅವರು ಸಹಕಾರ ನೀಡುತ್ತಿದ್ದರು. ಅವರಿಗೆ ನನ್ನ ನಮನಗಳು’ ಎಂದು ಕಮಲ್​ ಹಾಸನ್​ ಅವರು ಟ್ವೀಟ್​ ಮಾಡಿದ್ದಾರೆ. ಅದೇ ರೀತಿ ಇನ್ನೋರ್ವ ಫೇಮಸ್ ನಟ ಆರ್​. ಶರತ್​ ಕುಮಾರ್​ ಕೂಡ ಸಂತಾಪ ಸೂಚಿಸಿದ್ದಾರೆ. ‘ಉತ್ತಮ ಸ್ನೇಹಿತ, ಒಳ್ಳೆಯ ಮನುಷ್ಯ, ಪರೋಪಕಾರಿ ಆಗಿದ್ದ ಮಯಿಲ್​ಸಾಮಿ ನಿಧನದ ಸುದ್ಧಿ ತಿಳಿದು ಆಘಾತ ಆಯಿತು. ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಚಿತ್ರರಂಗದ ಸಹೋದ್ಯೋಗಿಗಳಿಗೆ ನನ್ನ ಸಂತಾಪಗಳು’ ಎಂದು ಶರತ್​ ಕುಮಾರ್​ ಟ್ವೀಟ್​ ಮಾಡಿದ್ದಾರೆ.

ನಟಿ ಸಾಕ್ಷಿ ಅಗರ್​ವಾಲ್​ ಕೂಡ ಮಯಿಲ್​ಸಾಮಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘ಈ ಸುದ್ದಿ ಕೇಳಿ ಆಘಾತ ಆಯಿತು. ನಿಮ್ಮ ಹಾಸ್ಯ ಪ್ರಜ್ಞೆ ಮತ್ತು ಪಾಸಿಟಿವ್​ ಗುಣದಿಂದಾಗಿ ಶೂಟಿಂಗ್​ ಸ್ಥಳದಲ್ಲಿ ಯಾವಾಗಲೂ ನಗು ಮತ್ತು ಖುಷಿ ತುಂಬಿರುತ್ತಿತ್ತು. ಮಯಿಲ್​ಸಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಸಂತಾಪಗಳು’ ಎಂದು ಸಾಕ್ಷಿ ಅಗರ್​ವಾಲ್​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Anekal: ಕಾಲೇಜಿನಲ್ಲಿ ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

‘ವೀರಂ’, ‘ಕಾಂಚನ’, ‘ವಸೀಗಾರ’, ‘ಗಿರಿ’, ‘ಗಿಲ್ಲಿ’ ಮುಂತಾದ ಸಿನಿಮಾಗಳಲ್ಲಿ ಮಯಿಲ್​ಸಾಮಿ ನಟಿಸಿದ್ದರು. ತಮಿಳುನಾಡು ಸರ್ಕಾರ ನೀಡುವ ‘ಅತ್ಯುತ್ತಮ ಹಾಸ್ಯನಟ’ ರಾಜ್ಯ ಪ್ರಶಸ್ತಿ ಕೂಡ ಅವರಿಗೆ ಸಿಕ್ಕಿತ್ತು. ರಂಗಭೂಮಿ ಕಲಾವಿದನಾಗಿ, ಸ್ಟ್ಯಾಂಡಪ್​ ಕಾಮಿಡಿಯನ್​ ಆಗಿಯೂ ಅವರು ಗುರುತಿಸಿಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:47 pm, Sun, 19 February 23