Prabhas: ಪ್ರಭಾಸ್​ ಅಭಿಮಾನಿಯ ಸೂಸೈಡ್​ ಲೆಟರ್​ ವೈರಲ್​; ‘ರಾಧೆ ಶ್ಯಾಮ್​’ ತಂಡಕ್ಕೆ ಹೊಸ ಕಿರಿಕಿರಿ

Radhe Shyam: ಸ್ಟಾರ್​ ನಟರಿಗೆ ಈ ರೀತಿಯ ಕೆಲವು ಹುಚ್ಚು ಅಭಿಮಾನಿಗಳು ಇರುತ್ತಾರೆ. ಈಗ ಪ್ರಭಾಸ್​ ಅಭಿಮಾನಿ ಈ ರೀತಿ ಸೂಸೈಡ್​ ಮಾಡಿಕೊಳ್ಳುವುದಾಗಿ ಹೇಳಿರುವುದು ತುಂಬ ಕ್ಷುಲ್ಲಕ ಕಾರಣಕ್ಕೆ.

Prabhas: ಪ್ರಭಾಸ್​ ಅಭಿಮಾನಿಯ ಸೂಸೈಡ್​ ಲೆಟರ್​ ವೈರಲ್​; ‘ರಾಧೆ ಶ್ಯಾಮ್​’ ತಂಡಕ್ಕೆ ಹೊಸ ಕಿರಿಕಿರಿ
‘ರಾಧೆ ಶ್ಯಾಮ್’​ ಸಿನಿಮಾದಲ್ಲಿ ಪೂಜಾ ಹೆಗ್ಡೆ, ಪ್ರಭಾಸ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 13, 2021 | 8:13 AM

ನಟ ಪ್ರಭಾಸ್​ (Prabhas) ಅವರು ‘ಬಾಹುಬಲಿ’ ಚಿತ್ರದ ಯಶಸ್ಸಿನ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಆ ನಂತರ ಅವರು ಅಭಿನಯಿಸಿದ ‘ಸಾಹೋ’ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಹಾಗಾಂತ ಅವರ ಫ್ಯಾನ್​ ಬೇಸ್​ ಕಿಂಚಿತ್ತೂ ಕಡಿಮೆ ಆಗಲಿಲ್ಲ. ಈಗ ಪ್ರಭಾಸ್​ ಹಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಓಂ ರಾವುತ್​ ನಿರ್ದೇಶನದ ‘ಆದಿಪುರುಷ್​’, ಪ್ರಶಾಂತ್ ನೀಲ್​ ನಿರ್ದೇಶನದ ‘ಸಲಾರ್​’, ರಾಧಾ ಕೃಷ್ಣ ಕುಮಾರ್​ ನಿರ್ದೇಶನದ ‘ರಾಧೆಶ್ಯಾಮ್​’ (Radhe Shyam) ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿವೆ. 2022ರ ಜ.14ರಂದು ‘ರಾಧೆ ಶ್ಯಾಮ್​’ ಬಿಡುಗಡೆ ಆಗಲಿದೆ. ಆದರೆ ಈಗ ಚಿತ್ರತಂಡಕ್ಕೆ ಕಿರಿಕಿರಿ ಆಗುವಂತಹ ಘಟನೆಯೊಂದು ನಡೆದಿದೆ. ಪ್ರಭಾಸ್​ ಅವರ ಹುಚ್ಚು ಅಭಿಮಾನಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಆತ ಬರೆದಿರುವ ಸೂಸೈಡ್​ ​ನೋಟ್ (Suicide Note)​ ಸಹ ವೈರಲ್​ ಆಗಿದೆ.

ಸ್ಟಾರ್​ ನಟರಿಗೆ ಈ ರೀತಿಯ ಕೆಲವು ಹುಚ್ಚು ಅಭಿಮಾನಿಗಳು ಇರುತ್ತಾರೆ. ವಿವೇಚನೆ ಇಲ್ಲದ ಕೆಲಸಕ್ಕೆ ಅಂಥವರು ಕೈ ಹಾಕುತ್ತಾರೆ. ಅಷ್ಟಕ್ಕೂ ಈಗ ಪ್ರಭಾಸ್​ ಅಭಿಮಾನಿ ಈ ರೀತಿ ಸೂಸೈಡ್​ ಮಾಡಿಕೊಳ್ಳುವುದಾಗಿ ಹೇಳಿರುವುದು ತುಂಬ ಕ್ಷುಲ್ಲಕ ಕಾರಣಕ್ಕೆ. ಪ್ರಭಾಸ್​ ನಟನೆಯ ‘ರಾಧೆಶ್ಯಾಮ್​’ ಚಿತ್ರತಂಡದಿಂದ ಯಾವುದೇ ಅಪ್​ಡೇಟ್​ ಸಿಗುತ್ತಿಲ್ಲ ಎಂಬ ಕಾರಣ ತಾನು ಸೂಸೈಡ್​ ಮಾಡಿಕೊಳ್ಳುವುದಾಗಿ ಆತ ಹೇಳಿದ್ದಾನೆ. ಈ ಚಿತ್ರಕ್ಕೆ ಪ್ರತಿಷ್ಠಿತ ‘ಯುವಿ ಕ್ರಿಯೇಷನ್ಸ್​’ ಸಂಸ್ಥೆ ಬಂಡವಾಳ ಹೂಡಿದೆ. ತನ್ನ ಈ ಆತ್ಮಹತ್ಯೆ ನಿರ್ಧಾರಕ್ಕೆ ‘ಯುವಿ ಕ್ರಿಯೇಷನ್ಸ್​’ ಮತ್ತು ನಿರ್ದೇಶಕ ರಾಧಾ ಕೃಷ್ಣ ಕುಮಾರ್​ ಅವರೇ ಕಾರಣ ಎಂದು ಆತ ಸೂಸೈಡ್​​ ನೋಟ್​ನಲ್ಲಿ ಬರೆದಿದ್ದಾನೆ.

‘ಈವರೆಗೆ ನಾನು ಯಾವುದೇ ಲೆಟರ್​ ಬರೆದಿಲ್ಲ. ಆದರೆ ಸೂಸೈಡ್​ ಲೆಟರ್​ ಬರೆಯುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಕೊನೇ ಪಕ್ಷ ನನ್ನ ಸಾವನ್ನು ನೋಡಿದ ಬಳಿಕವಾದರೂ ರಾಧೆ ಶ್ಯಾಮ್​ ತಂಡದವರು ಅಪ್​ಡೇಟ್​ ನೀಡುತ್ತಾರೆ ಎಂದುಕೊಂಡಿದ್ದೇನೆ. ಸಾಕಾಗಿ ಹೋಗಿದೆ. ಇನ್ಮೇಲೆ ಕೇಳುವುದಿಲ್ಲ’ ಎಂದು ಆತ ಈ ಪತ್ರದಲ್ಲಿ ಬರೆದಿದ್ದಾನೆ.

ಈಗಾಗಲೇ ಈ ಸಿನಿಮಾದ ಟೀಸರ್​ಗಳು ರಿಲೀಸ್​ ಆಗಿದ್ದು, ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿವೆ. ವಿಕ್ರಮಾದಿತ್ಯ ಎಂಬ ಪಾತ್ರವನ್ನು ಪ್ರಭಾಸ್​ ನಿಭಾಯಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಖ್ಯಾತ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ಪ್ರಭಾಸ್​ ಅವರ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ‘ರಾಧೆ ಶ್ಯಾಮ್​’ ಭಿನ್ನವಾಗಿ ಮೂಡಿಬಂದಿದೆ ಎಂಬುದಕ್ಕೆ ಟೀಸರ್​ಗಳೇ ಸಾಕ್ಷಿ ಒದಗಿಸುತ್ತಿವೆ. ಲವರ್​ ಬಾಯ್​ ಗೆಟಪ್​ನಲ್ಲಿ ಪ್ರಭಾಸ್​ ರಂಜಿಸಲಿದ್ದಾರೆ.

ಇದನ್ನೂ ಓದಿ:

ಪ್ರಭಾಸ್​ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಬೇಸರ ಮೂಡಿಸಿದ ಪ್ರಶಾಂತ್​ ನೀಲ್​; ‘ಸಲಾರ್’​ ಟೀಮ್​ ಎಡವಿದ್ದೆಲ್ಲಿ?

Prabhas: ‘ಸಲಾರ್​’ ವಿಡಿಯೋ ಲೀಕ್​: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್​ ಅಭಿಮಾನಿಗಳಿಗೆ ಪದೇಪದೇ ನಿರಾಸೆ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ