‘ಸ್ಪಿರಿಟ್’ ಸಿನಿಮಾದಲ್ಲಿ ಭಿನ್ನವಾಗಿರಲಿದೆ ಆಕ್ಷನ್, ಅಭಿಮಾನಿಗಳಿಗೆ ಇಷ್ಟವಾಗುತ್ತಾ?
Prabhas starrer Spirit: ಪ್ರಭಾಸ್ ಸಿನಿಮಾಗಳ ಒಂದು ಕಾಮನ್ ಅಂಶವೆಂದರೆ ಅದು ಆಕ್ಷನ್. ‘ಸಲಾರ್’, ‘ಸಾಹೋ’ ‘ಬಾಹುಬಲಿ’ ಇನ್ನೂ ಕೆಲ ಸಿನಿಮಾಗಳಲ್ಲಿಯಂತೂ ಆಕ್ಷನ್ ಅನ್ನು ಬೇರೆ ಲೆವೆಲ್ಗೆ ತೆಗೆದುಕೊಂಡು ಹೋಗಲಾಗಿದೆ. ಆದರೆ ಪ್ರಭಾಸ್ ನಟಿಸಲಿರುವ ಹೊಸ ಸಿನಿಮಾದಲ್ಲಿ ಆಕ್ಷನ್ ಇರಲಿದೆಯಾದರೂ ಬಹಳ ಭಿನ್ನವಾಗಿ ಇರಲಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಹಿಡಿಸಲಿದೆಯೇ ಎಂಬುದೇ ಅನುಮಾನ.

ಪ್ರಭಾಸ್ (Prabhas) ನಟನೆಯ ಎರಡು ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗಲಿವೆ ಈ ವರ್ಷ. ಮೊದಲಿಗೆ ‘ದಿ ರಾಜಾ ಸಾಬ್’ ಅದರ ಹಿಂದೆಯೇ ರಘು ಹನುಪುಡಿ ನಿರ್ದೇಶನದ ಮತ್ತೊಂದು ಸಿನಿಮಾ. ಈ ಎರಡೂ ಸಿನಿಮಾಗಳು ಭಿನ್ನವಾದ ಕತೆಗಳನ್ನು ಹೊಂದಿವೆ. ಪ್ರಭಾಸ್ ಅಭಿಮಾನಿಗಳು, ಪ್ರಭಾಸ್ ಸಿನಿಮಾಗಳಿಂದ ಭರ್ಜರಿ ಆಕ್ಷನ್, ರೊಮ್ಯಾಂಟಿಕ್ ದೃಶ್ಯಗಳನ್ನು ನೋಡಲು ಹೆಚ್ಚು ಇಷ್ಟಪಡುತ್ತಾರೆ. ಏನಿಲ್ಲದಿದ್ದರೂ ಸರಿಯೇ ಆಕ್ಷನ್ ಅಂತೂ ಇರಲೇ ಬೇಕು. ಆದರೆ ಪ್ರಭಾಸ್ರ ಹೊಸ ಸಿನಿಮಾ ‘ಸ್ಪಿರಿಟ್’ನಲ್ಲಿ ಆಕ್ಷನ್ ಇರಲಿದೆಯಾದರೂ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ (Prabhas Fans) ಇಷ್ಟವಾಗುತ್ತದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ.
ಪ್ರಭಾಸ್ರ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಇದೇ ಅಕ್ಟೋಬರ್ನಿಂದ ಪ್ರಾರಂಭ ಆಗಲಿದೆ. ಸಿನಿಮಾದ ಡೀಟೇಲ್ ನರೇಷನ್ ಅನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪ್ರಭಾಸ್ಗೆ ನೀಡಿದ್ದಾರೆ. ಈ ವೇಳೆ ಬಹು ಮುಖ್ಯ ಷರತ್ತೊಂದನ್ನು ಪ್ರಭಾಸ್ಗೆ ಇರಿಸಿದ್ದಾರೆ ಸಂದೀಪ್. ಈ ಸಿನಿಮಾದಲ್ಲಿ ಆಕ್ಷನ್ ಅನ್ನು ಪ್ರಭಾಸ್ ಅವರಿಗೇ ಬಿಟ್ಟುಬಿಟ್ಟಿದ್ದಾರೆ. ‘ಸ್ಪಿರಿಟ್’ ಸಿನಿಮಾದ ಆಕ್ಷನ್ ದೃಶ್ಯಗಳನ್ನು ಸ್ವತಃ ಪ್ರಭಾಸ್ ಅವರೇ ನಿರ್ದೇಶನ ಮಾಡಲಿದ್ದಾರೆ.
ಅಂದಹಾಗೆ ‘ಸ್ಪಿರಿಟ್’ ಸಿನಿಮಾದಲ್ಲಿ ಅವರ ‘ಸಲಾರ್’, ‘ಸಾಹೋ’ ಸಿನಿಮಾಗಳಲ್ಲಿ ಇರುವಂತೆ ಲಾರ್ಜರ್ ದ್ಯಾನ್ ಲೈಫ್ ಆಕ್ಷನ್ ದೃಶ್ಯಗಳು ಇರುವುದಿಲ್ಲವಂತೆ. ಪ್ರಭಾಸ್, ‘ಸ್ಪಿರಿಟ್’ ಸಿನಿಮಾದಲ್ಲಿ ‘ಹೀರೋ’ ರೀತಿ ಅಲ್ಲದೆ ಸಾಮಾನ್ಯ ವ್ಯಕ್ತಿಗಳು ಅಥವಾ ನಿಜ ಜೀವನದಲ್ಲಿ ನಡೆಯುವ ಪೊಲೀಸ್ ಆಪರೇಷನ್ಗಳ ರೀತಿಯೇ ಇರಲಿದೆಯಂತೆ. ಇದೇ ಕಾರಣಕ್ಕೆ ಆಕ್ಷನ್ ಜವಾಬ್ದಾರಿಯನ್ನು ಪ್ರಭಾಸ್ಗೆ ವಹಿಸಿ ಕೈತೊಳೆದುಕೊಂಡಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ.
ಇದನ್ನೂ ಓದಿ:ಕಡೆಗೂ ಮದುವೆಗೆ ಮನಸ್ಸು ಮಾಡಿದ ಟಾಲಿವುಡ್ ನಟ ಪ್ರಭಾಸ್
ಪ್ರಭಾಸ್ ಸಿನಿಮಾನಲ್ಲಿ ಹಾರ್ಡ್ ಕೋರ್ ಆಕ್ಷನ್ ಇಲ್ಲವೆಂದರೆ ಪ್ರೇಕ್ಷಕರು ವಿಶೇಷವಾಗಿ ಅವರ ಅಭಿಮಾನಿಗಳು ಅದನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬ ಅನುಮಾನ ಇದೆ. ಆದರೆ ಸಂದೀಪ್ ರೆಡ್ಡಿ ವಂಗಾ, ಭಿನ್ನವಾಗಿ ಯೋಚಿಸುವ ನಿರ್ದೇಶಕ, ಎಲ್ಲರೂ ತುಳಿದ ಹಾದಿಯನ್ನು ಅವರು ತುಳಿಯುವುದಿಲ್ಲ. ‘ಹೀರೋ’ ಪಾತ್ರದ ಅರ್ಥವನ್ನೇ ಅವರು ‘ಅನಿಮಲ್’ ಮತ್ತು ‘ಅರ್ಜುನ್ ರೆಡ್ಡಿ’ ಸಿನಿಮಾಗಳಲ್ಲಿ ಬದಲಾಯಿಸಿದ್ದಾರೆ. ಈಗ ‘ಸ್ಪಿರಿಟ್’ ಸಿನಿಮಾನಲ್ಲಿ ಮತ್ತೆ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
‘ಸ್ಪಿರಿಟ್’ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರ ರಿವೇಂಜ್ ಕತೆಯನ್ನು ಒಳಗೊಂಡಿದೆಯಂತೆ. ಪ್ರಾಮಾಣಿಕತೆಯಿಂದಾಗಿ ಉದ್ಯೋಗ ಕಳೆದುಕೊಂಡು, ಕುಟುಂಬದವನ್ನು ಕಳೆದುಕೊಳ್ಳುವ ಪೊಲೀಸ್ ಅಧಿಕಾರಿಯೊಬ್ಬ ಅಂತರಾಷ್ಟ್ರೀಯ ಮಾಫಿಯಾ ಡಾನ್ ಅನ್ನು ಹುಡುಕಿ ಹೊರಟು ಕೊಲ್ಲುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ವಿಲನ್ ಆಗಿ ಕೊರಿಯನ್ ನಟ ಮಾ ಡಾಂಗ್ ಸಿಯೀಕ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ