ಪ್ರಭಾಸ್ ಬಳಿ ಇದೆ ಹಲವು ಸೀಕ್ವೆಲ್; ಯಾವುದಕ್ಕೂ ನಟನ ಬಳಿ ಟೈಮ್ ಇಲ್ಲ
ಪ್ರಭಾಸ್ ಅವರು ಹಲವು ಹೊಸ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದಾಗಿ ‘ಸಲಾರ್ 2’ ಮತ್ತು ‘ಕಲ್ಕಿ 2898 ಎಡಿ’ ನಂತಹ ಸೀಕ್ವೆಲ್‌ಗಳಿಗೆ ಸಮಯ ಕೊರತೆಯಾಗಿದೆ. ‘ಸಲಾರ್’ ಚಿತ್ರದ ನಿರೀಕ್ಷಿತ ಯಶಸ್ಸು ಸಾಧಿಸದಿದ್ದರೂ ಸಹ, ಸೀಕ್ವೆಲ್ ಮಾಡಲಾಗುತ್ತಿದೆ. ‘ಕಲ್ಕಿ 2898 ಎಡಿ’ ಸೀಕ್ವೆಲ್ ಸಹ ವಿವಿಧ ಕಾರಣಗಳಿಂದ ವಿಳಂಬವಾಗಿದೆ.

ಪ್ರಭಾಸ್ (Prabhas) ಅವರು ಟಾಲಿವುಡ್ನ ಬೇಡಿಕೆಯ ಹೀರೋ ಎನಿಸಿಕೊಂಡಿದ್ದಾರೆ. ‘ಬಾಹುಬಲಿ’ ಸಮಯದಲ್ಲಿ ಅವರು ಸ್ವಲ್ಪ ನಿಧಾನ ಆಗಿದ್ದರು. ಆದರೆ, ಈಗ ಅವರು ಹಲವು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಪ್ರಭಾಸ್ ಅವರು ಈಗ ಹಲವು ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಮಾಡುತ್ತಿದ್ದಾರೆ. ಆದರೆ, ಅವರಿಗೆ ಸೀಕ್ವೆಲ್ ಸಿನಿಮಾಗಳನ್ನು ಮಾಡಲು ಸಮಯವೇ ಇಲ್ಲದಂತೆ ಆಗಿದೆ. ಇದರಿಂದ ನಿರ್ದೇಶಕರು ಹಾಗೂ ನಿರ್ಮಾಪಕರು ಕೊಂಚ ಚಿಂತೆಗೆ ಒಳಗಾಗಿದ್ದಾರೆ ಎಂದು ಹೇಳಬಹುದು.
ಪ್ರಭಾಸ್ ಅವರು ‘ಸಲಾರ್’ ಮತ್ತು ‘ಕಲ್ಕಿ’ ಚಿತ್ರಕ್ಕೆ ಸೀಕ್ವೆಲ್ ಮಾಡಬೇಕಿದೆ. ಇವೆರಡೂ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂಬುದು ತಂಡದ ಕಡೆಯಿಂದ ಖಚಿತಗೊಂಡಿದೆ. ಆದರೆ, ಪ್ರಭಾಸ್ ಅವರು ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ. ಅವರು ತಮ್ಮ ಹೊಸ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತಿದ್ದಾರೆ.
‘ಸಲಾರ್’ ಚಿತ್ರವು ಹೆಚ್ಚು ಜನ ಮನ್ನಣೆ ಪಡೆದಿಲ್ಲ. ಇದು ಬಾಕ್ಸ್ ಆಫೀಸ್ನಲ್ಲಿ ಕಳಪೆ ಪ್ರದರ್ಶನವನ್ನು ನೀಡದ್ದನ್ನು ನೀವು ಕಾಣಬಹುದು. ಆದಾಗ್ಯೂ ನಿರ್ಮಾಪಕರು ಇದಕ್ಕೆ ಎರಡನೇ ಭಾಗ ಮಾಡಲು ಹೊರಟಿದ್ದಾರೆ. ಮೊದಲ ಚಿತ್ರವನ್ನೇ ಸರಿಯಾಗಿ ಯಶಸ್ಸು ಕಂಡಿಲ್ಲ ಎಂದಾಗ ಎರಡನೇ ಭಾಗ ಮಾಡಲು ಪ್ರಭಾಸ್ಗೆ ಮನಸ್ಸಾದರೂ ಹೇಗೆ ಬಂದೀತು ಹೇಳಿ. ಈ ಕಾರಣದಿಂದ ಅವರು ‘ಸಲಾರ್ 2’ ಚಿತ್ರಕ್ಕೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕನ್ನಡದಲ್ಲೂ ಬಿಡುಗಡೆ ಆಯ್ತು ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಟೀಸರ್
ಇನ್ನು, ‘ಕಲ್ಕಿ 2898’ ಚಿತ್ರಕ್ಕೂ ಸೀಕ್ವೆಲ್ ಬರಬೇಕಿದೆ. ಈ ಸಿನಿಮಾದ ಕೆಲಸ ನಾನಾ ಕಾರಣಗಳಿಂದ ವಿಳಂಬ ಆಗಿದೆ. ಈ ಸಿನಿಮಾದಲ್ಲಿ ದೀಪಿಕಾ ಇರುತ್ತಾರೋ ಅಥವಾ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಅವರು 9 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ಪ್ರಭಾಸ್ ಅವರು ‘ದಿ ರಾಜ ಸಾಬ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಂದೀಪ್ ರೆಡ್ಡಿ ವಂಗ ಅವರ ‘ಸ್ಪಿರಿಟ್’ ಚಿತ್ರವನ್ನು ಕೂಡ ಪ್ರಭಾಸ್ ಮಾಡಬೇಕಿದೆ. ‘ಬಾಹುಬಲಿ 2’ ಬಳಿಕ ಪ್ರಭಾಸ್ ಅವರು ಈವರೆಗೆ ಯಾವುದೇ ಸೀಕ್ವೆಲ್ನಲ್ಲಿ ನಟಿಸಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.