ಪಂಜಾಬಿ ಮತ್ತು ಹಿಂದಿ ಚಿತ್ರರಂಗದಲ್ಲಿ ನಟಿಸಿ ಫೇಮಸ್ ಆಗಿರುವ ನಟ ಅಮನ್ ಧಾಲಿವಾಲ್ (Aman Dhaliwal) ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಅಲ್ಲಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ (Assaut) ಮಾಡಲಾಗಿದೆ. ಅಮನ್ ಧಾಲಿವಾಲ್ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಈ ಶಾಕಿಂಗ್ ಘಟನೆಯ ವಿಡಿಯೋ (Aman Dhaliwal Viral Video) ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡಿರುವ ಅಮನ್ ಧಾಲಿವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಅಮನ್ ಧಾಲಿವಾಲ್ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಕಿಡಿಗೇಡಿಯೊಬ್ಬ ಒಳಗೆ ಪ್ರವೇಶಿಸಿದ್ದಾನೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಎಲ್ಲರನ್ನೂ ಬೆದರಿಸಿದ್ದಾನೆ. ನೀರು ಕೊಡುವಂತೆ ದಬಾಯಿಸಿದ್ದಾನೆ. ಅಮನ್ ಧಾಲಿವಾಲ್ ಕಡೆಗೆ ಮಚ್ಚು ತೋರಿಸಿ ಹೆದರಿಸಿದ್ದಾನೆ. ಈ ವೇಳೆ ಆತನನ್ನು ಮಣಿಸಲು ಅಮನ್ ಪ್ರಯತ್ನಿಸಿದ್ದಾರೆ. ಆಗ ಅವರಿಗೆ ಗಂಭೀರ ಗಾಯಗಳು ಆಗಿವೆ. ವೈರಲ್ ವಿಡಿಯೋ ನೋಡಿ ನೆಟ್ಟಿಗರಿಗೆ ಶಾಕ್ ಆಗಿದೆ.
Famous actor Aman Dhaliwal, who has worked in Punjabi and Hindi films, has been fatally attacked in America. The attack took place when he was exercising in the gym. An assailant entered the gym armed with a knife and launched an attack. pic.twitter.com/4CgtTYJB3y
— Parmeet Bidowali (@ParmeetBidowali) March 16, 2023
ಜಿಮ್ನಲ್ಲಿ ಇದ್ದ ಎಲ್ಲರೂ ಸೇರಿ ಆ ಕಿಡಿಗೇಡಿಯನ್ನು ಹಿಡಿದಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ನಡೆಯುತ್ತಿದ್ದು, ಘಟನೆಯ ವಿವರಗಳನ್ನು ಇನ್ನಷ್ಟೇ ಸಿಗಬೇಕಿದೆ. ಯಾವುದಾದರೂ ವೈಯಕ್ತಿಕ ದ್ವೇಷದಿಂದ ಈ ಹಲ್ಲೆ ನಡೆದಿರಬಹುದೇ ಎಂಬ ಅನುಮಾನ ಕೂಡ ಮೂಡಿದೆ.
ಬಾಲಿವುಡ್ ಸಿನಿಮಾಗಳು ಹಾಗೂ ಪಂಜಾಬಿ ಸಿನಿಮಾಗಳಲ್ಲಿ ಅಮನ್ ಧಾಲಿವಾಲ್ ಅವರು ನಟಿಸಿದ್ದಾರೆ. ‘ಜೋದಾ ಅಖ್ಬರ್’ ಚಿತ್ರದಲ್ಲಿ ಅವರು ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಜೊತೆ ಕೆಲಸ ಮಾಡಿದ್ದಾರೆ. ಈಗ ಅವರು ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ. ‘ಬಿಗ್ ಬ್ರದರ್’, ‘ಇಕ್ ಕುಡಿ ಪಂಜಾಬ್ ದಿ’, ‘ಅಜ್ ದೇ ರಾಂಜಾ’ ಮುಂತಾದ ಸಿನಮಾದಲ್ಲಿ ಅವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.