Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ದೌರ್ಜನ್ಯ: ಒಬ್ಬನ ಉಳಿಸಿಕೊಂಡು ಇನ್ನೊಬ್ಬನ ಹೊರಗಟ್ಟಿದ ‘ಪುಷ್ಪ 2’ ತಂಡ

Pushpa 2: ಲೈಂಗಿಕ ದೌರ್ಜನ್ಯ ಆರೋಪಿಯನ್ನು ಚಿತ್ರತಂಡದಿಂದ ಕೈಬಿಟ್ಟ ‘ಪುಷ್ಪ 2’ ತಂಡ. ಸಿನಿಮಾ ಚಿತ್ರೀಕಣ ಇದರಿಂದ ತಡವಾಗಿದೆ. ಆದರೆ ಒಬ್ಬ ಆರೋಪಿಯನ್ನು ತೆಗೆದಿರುವ ಚಿತ್ರತಂಡ, ಮತ್ತೊಬ್ಬ ಆರೋಪಿಯನ್ನು ಸಿನಿಮಾದಲ್ಲಿ ಮುಂದುವರೆಸಿದೆ.

ಲೈಂಗಿಕ ದೌರ್ಜನ್ಯ: ಒಬ್ಬನ ಉಳಿಸಿಕೊಂಡು ಇನ್ನೊಬ್ಬನ ಹೊರಗಟ್ಟಿದ ‘ಪುಷ್ಪ 2’ ತಂಡ
Follow us
ಮಂಜುನಾಥ ಸಿ.
|

Updated on: Oct 27, 2024 | 9:09 AM

‘ಪುಷ್ಪ 2’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಡಿಸೆಂಬರ್ 05 ರಂದು ತೆರೆಗೆ ಬರಲಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಸಿನಿಮಾದ ಹಾಡೊಂದರ ಚಿತ್ರೀಕರಣ ಇನ್ನೂ ಬಾಕಿ ಇದೆ. ಹಾಡಿಗೆ ಕೊರಿಯಾಗ್ರಫಿ ಮಾಡಬೇಕಿದ್ದ ಕೋರಿಯಾಗ್ರಫರ್ ಅನ್ನು ತಂಡದಿಂದ ಹೊರಗಟ್ಟಿದೆ ‘ಪುಷ್ಪ 2’ ತಂಡ. ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ‘ಪುಷ್ಪ 2’ ಸಿನಿಮಾದ ಹಾಡಿಗೆ ನೃತ್ಯ ಸಂಯೋಜನೆ ಮಾಡಬೇಕಿತ್ತು, ಆದರೆ ಅವರ ವಿರುದ್ಧ ಅತ್ಯಾಚಾರ ಆರೋಪ ದಾಖಲಾಗಿ ಜೈಲು ಸೇರಿದ ಕಾರಣ ಜಾನಿ ಮಾಸ್ಟರ್ ಅನ್ನು ಚಿತ್ರತಂಡದಿಂದ ಕೈಬಿಡಲಾಗಿದೆ. ಈ ಬಗ್ಗೆ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿರುವ ನವೀನ್ ಯೆರಿನೇನಿ, ‘ನಾವು ಈಗಾಗಲೇ ಕೊರಿಯೋಗ್ರಾಫರ್ (ಜಾನಿ ಮಾಸ್ಟರ್) ಅನ್ನು ಬದಲಾಯಿಸಿದ್ದೇವೆ. ಆ ಕೊರಿಯೋಗ್ರಾಫರ್ ಇನ್ನು ಮುಂದೆ ನಮ್ಮ ಸಿನಿಮಾಕ್ಕೆ ಕೆಲಸ ಮಾಡುವುದಿಲ್ಲ. ಆ ಕೊರಿಯೋಗ್ರಾಫರ್ ಒಂದು ಹಾಡು ಕೊರಿಯೋಗ್ರಫಿ ಮಾಡಬೇಕಿತ್ತು, ಆತನನ್ನು ತೆಗೆದು ಹಾಕಿರುವ ಕಾರಣ ಬೇರೊಬ್ಬರು ಆ ಜಾಗಕ್ಕೆ ಬಂದಿದ್ದು ಹಾಡಿನ ಚಿತ್ರೀಕರಣ ನವೆಂಬರ್ 4 ರಿಂದ ನಡೆಯಲಿದೆ’ ಎಂದಿದ್ದಾರೆ.

‘ಪುಷ್ಪ 2’ ಸಿನಿಮಾದ ಹಾಡುಗಳ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾದ ಐಟಂ ಹಾಡಿನ ಚಿತ್ರೀಕರಣ ಇನ್ನೂ ಆಗಿಲ್ಲ. ನವೆಂಬರ್ 04 ರಿಂದ ಐಟಂ ಹಾಡಿನ ಚಿತ್ರೀಕರಣ ಆಗಬೇಕಿತ್ತು. ಆ ಹಾಡನ್ನು ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಬೇಕಿತ್ತು. ಆದರೆ ಆತನ ವಿರುದ್ಧ ಅತ್ಯಾಚಾರ ಆರೋಪ ದಾಖಲಾದ ಕಾರಣ ಆತನನ್ನು ಬದಲಾಯಿಸಲಾಗಿದೆ. ಆತನ ಜಾಗಕ್ಕೆ ಬೇರೊಬ್ಬರನ್ನು ಕರೆತರಲಾಗಿದೆ. ಕಳೆದ ಬಾರಿಯೂ ಸಹ ‘ಪುಷ್ಪ’ ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಇರಬೇಕಾದರೆ ‘ಊ ಅಂಟಾವ ಊಹು ಅಂಟಾವ’ ಹಾಡನ್ನು ಚಿತ್ರೀಕರಣ ಮಾಡಲಾಗಿತ್ತು. ಚಿತ್ರೀಕರಣ ಮಾಡಿದ ಕೆಲವೇ ದಿನಗಳಲ್ಲಿ ಹಾಡನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಯ್ತು. ಆ ಹಾಡು ಬ್ಲಾಕ್ ಬಸ್ಟರ್ ಹಿಟ್ ಆಯ್ತು.

ಇದನ್ನೂ ಓದಿ:‘ಪುಷ್ಪ 2’ ಬಿಡುಗಡೆಗೆ ಮುನ್ನವೇ ‘ಪುಷ್ಪ 3’ ಸುದ್ದಿ, ನಿರ್ಮಾಪಕ ಕೊಟ್ಟ ಸುಳಿವು

ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದ ಡ್ಯಾನ್ಸರ್ ಒಬ್ಬಾಕೆ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಜಾನಿ ಮಾಸ್ಟರ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಜಾನಿ ಮಾಸ್ಟರ್ ಮತ್ತು ಅವರ ಪತ್ನಿ ತಮ್ಮ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಯುವತಿಯ ದೂರಿನ ಅನ್ವಯ, ಜಾನಿ ಮಾಸ್ಟರ್ ಆ ಯುವತಿ ಮೇಲೆ ಅತ್ಯಾಚಾರ ಮಾಡಿದ ಯುವತಿಗೆ ಇನ್ನೂ 18 ವರ್ಷ ಆಗಿರಲಿಲ್ಲವಾದ್ದರಿಂದ ಜಾನಿ ಮಾಸ್ಟರ್ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಜಾನಿ ಮಾಸ್ಟರ್​ಗೆ ಇತ್ತೀಚೆಗಷ್ಟೆ ಜಾಮೀನು ದೊರೆತಿದ್ದು ನಿನ್ನೆ ಜೈಲಿನಿಂದ ಹೊರಗೆ ಬಂದಿದ್ದಾರೆ.

ಅಂದಹಾಗೆ ‘ಪುಷ್ಪ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ಆಪ್ತ ಮಿತ್ರನ ಪಾತ್ರದಲ್ಲಿ ನಟಿಸಿದ್ದ ಜಗದೀಶ್ ಮೇಲೂ ಸಹ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಅವರನ್ನೂ ಸಹ ಪೊಲೀಸರು ಬಂಧಿಸಿದ್ದರು, ಬಳಿಕ ಜಾಮೀನಿನ ಮೇಲೆ ಆತನ ಬಿಡುಗಡೆ ಆಯ್ತು. ಆದರೆ ಜಗದೀಶ್ ಅನ್ನು ಚಿತ್ರತಂಡದಿಂದ ಕೈಬಿಟ್ಟಿಲ್ಲ. ‘ಪುಷ್ಪ 2’ ಸಿನಿಮಾ ಡಿಸೆಂಬರ್ 06 ರಂದು ಬಿಡುಗಡೆ ಆಗಿದೆ. ಸಿನಿಮಾ ಅನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್. ಸಿನಿಮಾಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ಸಾವಿರ ಕೋಟಿಗೂ ಹೆಚ್ಚಿನ ವ್ಯವಹಾರ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ನಡೆದಿರುವ ಅಚಾತುರ್ಯದ ಬಗ್ಗೆ ಶಿವಲಿಂಗೇಗೌಡರಿನ್ನೂ ಪ್ರತಿಕ್ರಿಯೆ ನೀಡಿಲ್ಲ
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತ, ನಾಲ್ಕು ಪಲ್ಟಿಯಾದ ಕಾರು
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ, ಅದರಲ್ಲಿ ಎರಡು ಮಾತಿಲ್ಲ: ಪರಮೇಶ್ವರ್