
ರಾಜ್ ಬಿ. ಶೆಟ್ಟಿ (Raj B Shetty) ಅವರು ‘ಸು ಫ್ರಮ್ ಸೋ’ ಚಿತ್ರದಿಂದ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ಅವರನ್ನು ಪರಭಾಷೆಗೂ ಕರೆದುಕೊಂಡು ಹೋಯಿತು. ಅಲ್ಲಿಯೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ಹೀಗಿರುವಾಗಲೇ ರಾಜ್ ಅವರು ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ಕೂಡ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ರಾಜ್ ಬಿ ಶೆಟ್ಟಿ ನಿರ್ಮಿಸಿ, ನಟಿಸಿರೋ ‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆಯಿತು. ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಪರಭಾಷೆಯ ಮಂದಿಯ ಮೆಚ್ಚುಗೆಯನ್ನೂ ಪಡೆದಿದೆ. ತಮಿಳು ಹಾಗೂ ಹಿಂದಿ ಭಾಷೆಗೆ ರಿಮೇಕ್ ಹಕ್ಕು ಮಾರಾಟ ಆಗಿದೆ.
ಈಗ ರಾಜ್ ಅವರು ತಮ್ಮ ಮುಂದಿನ ಸಿನಿಮಾ ಕೆಲಸಗಳ ಮೇಲೆ ಗಮನ ಹರಿಸುವವರಿದ್ದಾರೆ. ಕೆಲಸದ ಮೇಲೆ ಗಮನ ಹರಿಸಬೇಕಿರುವ ಕಾರಣದಿಂದ ಅವರು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿಲ್ಲ. ಹಾಗಂತ ಅದರಲ್ಲಿ ಯಾವುದೇ ಪೋಸ್ಟ್ಗಳು ಬರೋದಿಲ್ಲ ಎಂದರ್ಥವಲ್ಲ. ರಾಜ್ ಅವರ ತಂಡದವರು ಸೋಶಿಯಲ್ ಮೀಡಿಯಾನ ಹ್ಯಾಂಡಲ್ ಮಾಡಲಿದ್ದಾರೆ. ಮತ್ತೆ ಸಿನಿಮಾ ಪ್ರಚಾರದ ವೇಳೆ ಇದನ್ನು ಅವರು ಬಳಕೆ ಮಾಡಲಿದ್ದಾರೆ.
ರಾಜ್ ಅವರು ಒಂದು ಥ್ರಿಲ್ಲರ್ ಕಥೆಯನ್ನು ಬರೆಯುತ್ತಿರುವುದಾಗಿ ಈ ಮೊದಲು ಹೇಳಿದ್ದರು. ಅದೇ ಚಿತ್ರದ ಮೇಲೆ ಅವರು ಗಮನ ಹರಿಸುವ ಸಾಧ್ಯತೆ ಇದೆ. ಮತ್ತೆ ಅವರಿಂದ ಹಾಸ್ಯದ ಕಥೆ ನಿರೀಕ್ಷೆ ಮಾಡಬಾರದು ಎಂದು ಈ ಮೊದಲೇ ಹೇಳಿದ್ದಾರೆ. ಅವರು ನಾನಾ ರೀತಿಯ ಸಿನಿಮಾಗಳನ್ನು ನೀಡುವ ಉದ್ದೇಶ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಧೂಳೆಬ್ಬಿಸಿದ ರಾಜ್ ಬಿ. ಶೆಟ್ಟಿ ಹಂಚಿಕೆ ಮಾಡ್ತಿರೋ ‘ಲೋಕಃ’ ಸಿನಿಮಾ; 9.5 ರೇಟಿಂಗ್
ರಾಜ್ ಅವರು ಕರ್ನಾಟಕದಲ್ಲಿ ಹಂಚಿಕೆ ಮಾಡುತ್ತಿರುವ ಮಲಯಾಳಂನ ‘ಲೋಕಃ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಈಗಾಗಲೇ 2 ದಿನಕ್ಕೆ 6.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Sat, 30 August 25