ಸಿನಿಮಾ ಬಗ್ಗೆ ಅಪ್ಡೇಟ್ ಕೊಡಲು ಮುಂದಾದ ‘ಗೇಮ್ ಚೇಂಜರ್’ ತಂಡ
Ram Charan: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಯಾವುದೇ ಅಪ್ಡೇಟ್ಗಳು ಹೊರಬಂದಿಲ್ಲ, ಆದರೆ ಇದೀಗ ‘ಗೇಮ್ ಚೇಂಜರ್’ ಸಿನಿಮಾದ ಅಪ್ಡೇಟ್ ನೀಡಲು ಚಿತ್ರತಂಡ ಸಜ್ಜಾಗಿದೆ.
ರಾಮ್ ಚರಣ್ ಹಾಗೂ ಕಿಯಾರಾ ಅಡ್ವಾಣಿ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಆದರೆ, ಸಿನಿಮಾ ರಿಲೀಸ್ ಬಗ್ಗೆ ತಂಡದಿಂದ ಈವರೆಗೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಕೊನೆಗೂ ಸಿನಿಮಾ ತಂಡ ಮಾಹಿತಿ ನೀಡಿದೆ. ಈ ಚಿತ್ರದ ರಿಲೀಸ್ ದಿನಾಂಕವನ್ನು ತಂಡ ರಿವೀಲ್ ಮಾಡಿದೆ. ಹಾಗಾದರೆ, ಸಿನಿಮಾ ರಿಲೀಸ್ ಯಾವಾಗ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾ ನೆಲಕಚ್ಚಿತ್ತು. ಇದಾದ ಬಳಿಕ ಶಂಕರ್ ಬಗ್ಗೆ ಸಾಕಷ್ಟು ಆತಂಕ ಸೃಷ್ಟಿ ಆಗಿದೆ. ‘ಇಂಡಿಯನ್ 2’ ಚಿತ್ರಕ್ಕೆ ಆದ ಗತಿಯೇ ‘ಗೇಮ್ ಚೇಂಜರ್’ಗೂ ಆದರೆ ಏನು ಗತಿ ಎಂದು ಅನೇಕರು ಆತಂಕ ಹೊರಹಾಕಿದ್ದಾರೆ. ಹೀಗಿರುವಾಗಲೇ ‘ಗೇಮ್ ಚೇಂಜರ್’ ತಂಡದಿಂದ ಹೊಸ ಮಾಹಿತಿ ಸಿಕ್ಕಿದೆ.
‘ಗೇಮ್ ಚೇಂಜರ್’ ಸಿನಿಮಾ ಡಿಸೆಂಬರ್ 20ರಂದು ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಕ್ರಿಸಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಈ ಚಿತ್ರ ರಿಲೀಸ್ ಆಗಲಿದೆಯಂತೆ. ಈ ಕುರಿತು ತಂಡ ಅಧಿಕೃತ ಮಾಹಿತಿ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಶಂಕರ್ ಅವರು ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಸದ್ಯ, ಡಬ್ಬಿಂಗ್ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ:ರಾಮ್ ಚರಣ್ ಬಳಿ ಇದೆ ಕೆಲಸಕ್ಕೆ ಬಾರದ ಒಂದು ಟ್ಯಾಲೆಂಟ್; ಯಾವುದೆಂದು ಊಹಿಸಿ
‘ಗೇಮ್ ಚೇಂಜರ್’ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದ ಪ್ರಮೋಷನ್ಗೆ ತಂಡ ಸಾಕಷ್ಟು ಪ್ರಯತ್ನ ಹಾಕಬೇಕಿದೆ. ಈ ಚಿತ್ರ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಹೀಗಾಗಿ, ಕೆಲವರಿಗೆ ಸಿನಿಮಾ ಬಗ್ಗೆ ಯಾವುದೇ ನಿರೀಕ್ಷೆ ಉಳಿದಿಲ್ಲ. ನಿರ್ಮಾಪಕ ದಿಲ್ ರಾಜು ಅವರಿಗೂ ಸಿನಿಮಾ ಸಾಕಷ್ಟು ಹೊರೆ ಎನಿಸಿಕೊಂಡಿದೆಯಂತೆ. ಈ ಎಲ್ಲಾ ಕಾರಣದಿಂದ ಸಿನಿಮಾಗೆ ಭರ್ಜರಿ ಪ್ರಮೋಷನ್ ನೀಡಲು ತಂಡ ಪ್ಲ್ಯಾನ್ ಮಾಡಿದೆ. ‘ಗೇಮ್ ಚೇಂಜರ್’ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ, ಎಲ್ಲಾ ಪ್ರಮುಖ ನಗರಳಿಗೆ ತೆರಳಿ ಪ್ರಚಾರ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:06 pm, Sat, 7 September 24