AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಕೋಟಿ ರೂಪಾಯಿ ಕೊಟ್ಟು ಮತ್ತೊಂದು ಎಲೆಕ್ಟ್ರಿಕ್ ಕಾರು ಖರೀದಿಸಿದ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ಕಾರು ಸಂಗ್ರಹಕ್ಕೆ ಮತ್ತೊಂದು ಹೊಸ ಐಷಾರಾಮಿ ಬಿಎಂಡಬ್ಲ್ಯೂ ಐ7 ಎಲೆಕ್ಟ್ರಿಕ್ ಕಾರನ್ನು ಸೇರಿಸಿಕೊಂಡಿದ್ದಾರೆ. ಮುಂಬೈ ರಸ್ತೆಗಳಲ್ಲಿ ಈ ನೂತನ ವಾಹನವನ್ನು ಸ್ವತಃ ನಟನೇ ಚಲಾಯಿಸಿಕೊಂಡು ತೆರಳಿದ್ದಾರೆ. ಈ ಕಾರಿನ ಬೆಲೆ ಎರಡು ಕೋಟಿ ರೂ. ಗೂ ಅಧಿಕವಾಗಿದೆ.

2 ಕೋಟಿ ರೂಪಾಯಿ ಕೊಟ್ಟು ಮತ್ತೊಂದು ಎಲೆಕ್ಟ್ರಿಕ್ ಕಾರು ಖರೀದಿಸಿದ ರಣವೀರ್ ಸಿಂಗ್
ರಣವೀರ್
ರಾಜೇಶ್ ದುಗ್ಗುಮನೆ
|

Updated on: Oct 12, 2026 | 2:45 PM

Share

ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ತಮ್ಮ ಕಾರು ಸಂಗ್ರಹಕ್ಕೆ ಮತ್ತೊಂದು ಹೊಸ ಐಷಾರಾಮಿ ವಾಹನವನ್ನು ಸೇರ್ಪಡೆ ಮಾಡಿದ್ದಾರೆ. ಬಿಎಂಡಬ್ಲ್ಯೂ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಅವರು, ಈಗ ಅದೇ ಕಂಪನಿಯ ಅತ್ಯಾಧುನಿಕ ಐ7 ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ಮುಂಬೈ ರಸ್ತೆಗಳಲ್ಲಿ ಈ ನೂತನ ಕಾರನ್ನು ಸ್ವತಃ ನಟನೇ ಚಲಾಯಿಸಿಕೊಂಡು ಹೋಗಿದ್ದಾರೆ.

ರಣವೀರ್ ಸಿಂಗ್ ಅವರು ತುಂಬಾನೇ ಶ್ರೀಮಂತ ನಟ. ಇದರ ಜೊತೆಗೆ ಅವರಿಗೆ ಕಾರಿನ ಕ್ರೇಜ್ ಕೂಡ ಇದೆ. ಹೀಗಾಗಿ, ತಮ್ಮಿಷ್ಟದ ಹೊಸ ಹೊಸ ಕಾರನ್ನು ಅವರು ಖರೀದಿ ಮಾಡುತ್ತಾರೆ. ಈಗ ಅವರು ಖರೀದಿ ಮಾಡಿರುವ ಐ7 ಕಾರಿನ ಮೌಲ್ಯ ಸುಮಾರು ಎರಡು ಕೋಟಿ ರೂಪಾಯಿಗೂ ಅಧಿಕವಾಗಿದೆ. ಮುಂಬೈನ ಶೋರೂಮ್‌ನಿಂದ ನಟ ಕಾರನ್ನು ಪಡೆದಿದ್ದಾರೆ.

ಈ ಐಷಾರಾಮಿ ಕಾರನ್ನು ರಣವೀರ್ ಸ್ವತಃ ಡ್ರೈವ್ ಮಾಡಿಕೊಂಡು ತೆರಳಿದ್ದಾರೆ. ಕಾರು ಕಪ್ಪು ಬಣ್ಣ ಹೊಂದಿದ್ದು, ಇದರ ಜೊತೆಗೆ ಅವರು ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚಿದರು. ಬಿಎಂಡಬ್ಲ್ಯೂ ಸಂಸ್ಥೆಯು ಇತ್ತೀಚೆಗೆ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು. ಆದರೆ ಇದು ಅವರ ವೈಯಕ್ತಿಕ ಖರೀದಿಯಾಗಿದೆ ಎಂದು ವರದಿಯಾಗಿದೆ.

ರಣವೀರ್ ಬಳಿ ಈಗಾಗಲೇ ಹಮ್ಮರ್ ಇವಿ ಎಲೆಕ್ಟ್ರಿಕ್ ಕಾರಿದೆ. ಇದು ಅವರ ಸಂಗ್ರಹದ ಎರಡನೇ ಎಲೆಕ್ಟ್ರಿಕ್ ಕಾರಾಗಿದೆ. ಇವರ ಬಳಿ ಲಂಬೋರ್ಘಿನಿ ಮತ್ತು ಮರ್ಸಿಡಿಸ್ ಕಾರುಗಳಿವೆ. ರೇಂಜ್ ರೋವರ್ ಹಾಗೂ ಆಸ್ಟನ್ ಮಾರ್ಟಿನ್ ಕಾರುಗಳೂ ಅವರ ಗ್ಯಾರೇಜ್‌ನಲ್ಲಿವೆ. ಇತ್ತೀಚೆಗೆ ಅವರು ಎಲೆಕ್ಟ್ರಿಕ್ ಕಾರಿನ ಮೇಲೆ ಸಾಕಷ್ಟು ಆಸಕ್ತಿ

ರಣವೀರ್ ಸಿಂಗ್ ಇತ್ತೀಚೆಗೆ ಎರಡನೇ ಬಾರಿಗೆ ತಂದೆ ಆಗಿದ್ದಾರೆ. ಅವರಿಗೆ  ಎರಡನೇ ಬಾರಿಗೆ ಹೆಣ್ಣು ಮಗು ಜನಿಸಿದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ದಂಪತಿ ಖುಷಿಯಲ್ಲಿದ್ದಾರೆ. ಇದರ ಜೊತೆಗೆ ರಣವೀರ್ ‘ಪ್ರಳಯ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಚಿತ್ರೀಕರಣ ಭರಾಟೆಯಿಂದ ಸಾಗುತ್ತಿದೆ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More