ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ

ಈ ನಟಿ ಪಿಯುಸಿಯಲ್ಲಿ ಟಾಪರ್ ಆಗಿದ್ದರು. ಅವರು ಐಎಎಸ್ ಆಕಾಂಕ್ಷಿ, ಈಗ ಯಶಸ್ವಿನಿ ನಟಿಯಾಗಿದ್ದಾರೆ. ಅತ್ಯುತ್ತಮ ಅಂಕಗಳನ್ನು ಪಡೆದ ಅವರು, ತಮ್ಮ ಕನಸಿನ ವೃತ್ತಿಯನ್ನು ಬದಲಾಯಿಸಿಕೊಂಡು ಚಿತ್ರರಂಗಕ್ಕೆ ಪ್ರವೇಶಿಸಿದರು. ಮಾಡೆಲಿಂಗ್ ಮತ್ತು ಜಾಹೀರಾತುಗಳ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅವರು ದಕ್ಷಿಣ ಭಾರತ ಮತ್ತು ಬಾಲಿವುಡ್‌ನಲ್ಲಿ ಯಶಸ್ಸು ಕಂಡಿದ್ದಾರೆ.

ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ
ರಾಶಿ
Edited By:

Updated on: Jun 27, 2025 | 10:39 AM

ನಾವು ಈಗ ಹೇಳುತ್ತಿರುವ ನಟಿ ದ್ವಿತೀಯ ಪಿಯುಸಿಯಲ್ಲಿ ಟಾಪರ್ ಆದರು. ಅವರ ಕನಸು ಇದ್ದಿದ್ದು ಐಎಎಸ್ (IAS) ಅಧಿಕಾರಿ ಆಗಬೇಕು ಎಂದು. ಆದರೆ, ಕೊನೆಗೆ ಅವರು ಆಗಿದ್ದು ನಟಿ. ಈಗ ನಾವು ಹೇಳುತ್ತಿರುವುದು ಬೇರಾರ ಬಗ್ಗೆಯೂ ಅಲ್ಲ. ನಟಿ ರಾಶಿ ಖನ್ನಾ ಬಗ್ಗೆ. ದಕ್ಷಿಣ ಭಾರತ ಹಾಗೂ ಬಾಲಿವುಡ್​ ಮತ್ತು ಒಟಿಟಿಯಲ್ಲಿ ಹವಾ ಸೃಷ್ಟಿ ಮಾಡಿರುವ ಈ ನಟಿಯ ಕನಸು ಬೇರೆಯದೇ ಇತ್ತು. ಆದರೆ, ಈಗ ಅವರು ನಟಿಯಾಗಿ ಮೆರೆಯುತ್ತಿದ್ದಾರೆ. ಆಗಿದ್ದೆಲ್ಲ ಒಳ್ಳೆದಕ್ಕೆ ಎಂದು ಅವರು ಬಲವಾಗಿ ನಂಬಿದ್ದಾರೆ.

ರಾಶಿ ಖನ್ನಾ ಅವರು ದೆಹಲಿಯವರು. ಅವರು ಬಾಲಿವುಡ್​ಗೆ ಬರೋದಕ್ಕೆ ಮಲದಲು ಅಡ್ವಟೈಸ್​ಮೆಂಟ್ ಏಜೆನ್ಸಿಗಳಲ್ಲಿ ಕೆಲಸ ಮಾಡಿದರು. ಅವರು ಚಿತ್ರರಂಗಕ್ಕೆ ಬಂದ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದರು. ಅವರಿಗೆ ಸೌಂದರ್ಯದ ಜೊತೆ ಬುದ್ಧಿವಂತಿಕೆಯೂ ಇದೆ. ಈ ಕಾರಣದಿಂದಲೇ ಅವರು ಹೆಚ್ಚು ಇಷ್ಟ ಆಗುತ್ತಾರೆ.

ರಾಶಿ ಖನ್ನಾ ಅವರು ಆರಂಭದಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಲು ಬಯಸಿದ್ದರು. ಶಿಕ್ಷಣ ಪಡೆಯುವಾಗ ಇದುವೇ ಅವರ ಗೋಲ್ ಆಗಿತ್ತು. ಆದರೆ, ದೇವರು ಬೇರೆಯದೇ ಪ್ಲ್ಯಾನ್​ನ ರೆಡಿ ಮಾಡಿ ಇಟ್ಟಂತೆ ಕಾಣುತ್ತದೆ. ಅವರು ಬಣ್ಣದ ಲೋಕವನ್ನು ಆಯ್ಕೆ ಮಾಡಿಕೊಂಡರು ಮತ್ತು ಇಲ್ಲಿ ಮಿಂಚಲು ಆರಂಭಿಸಿದರು.

ಇದನ್ನೂ ಓದಿ
ವಿಚ್ಛೇದನ ಹಂತದಲ್ಲಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೇ ಗೊತ್ತೇ ಇಲ್ಲ
ಡ್ರಗ್ಸ್ ತೆಗೆದುಕೊಳ್ಳೋ ಕಲಾವಿದರು ಇನ್ಮುಂದೆ ಚಿತ್ರರಂಗದಿಂದ ಬ್ಯಾನ್
ನಿಧನ ಹೊಂದುವ ಹಿಂದಿನ ದಿನ ಸಾಯುವ ದೃಶ್ಯವನ್ನೇ ಶೂಟ್ ಮಾಡಿದ್ದ ಶಂಕರ್ ನಾಗ್
‘ಆರ್ಯನ್ ಯಾವಾಗಲೂ ನಾನು ಮುಸ್ಲಿಂ ಎಂದೇ ಹೇಳುತ್ತಾನೆ’; ಗೌರಿ ಖಾನ್

ರಾಶಿ ಖನ್ನಾ ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಬೇಡಿಕೆಹೊಂದಿದ್ದಾರೆ. ಅವರು ವೆಬ್ ಸೀರಿಸ್ ಮೂಲಕ ಒಟಿಟಿಯಲ್ಲೂ ಹೆಸರು ಮಾಡಿದ್ದನ್ನು ನೀವು ಗಮನಿಸಿರಬಹುದು. ಈ ಬಗ್ಗೆ ಅವರಿಗೆ ಖುಷಿ ಇದೆ. ರಾಶಿ ಖನ್ನಾ ಅವರು 12ನೇ ತರಗತಿ ಬೋರ್ಡ್ ಎಕ್ಸಾಮ್​​ನಲ್ಲಿ ಟಾಪರ್ ಆದರು. ಅವರು ಶಿಕ್ಷಣವನ್ನು ದೆಹಲಿಯಲ್ಲಿ ಪಡೆದರು. ಸಿವಿಲ್ ಪರೀಕ್ಷೆ ಬರೆಯಬೇಕು ಎಂಬುದು ಅವರ ಆಸೆ ಆಗಿತ್ತು.

ಅವರು ಕಾಲೇಜು ದಿನಗಳಲ್ಲೇ ಐಎಎಸ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಕೊನೆಗೆ ಅವರಿಗೆ ನಟನೆ ಕೈ ಹಿಡಿಯಿತು. ಅಡ್ವಟೈಸ್​​ಮೆಂಟ್ ಏಜೆನ್ಸಿ ಬಳಿಕ ಮಾಡೆಲಿಂಗ್ ಪ್ರಯತ್ನಿಸಿ ಯಶಸ್ಸು ಕಂಡರು. ಆ ಬಳಿಕ ನಟನೆಯಲ್ಲಿ ಗೆಲುವು ಕಂಡರು.

ಇದನ್ನೂ ಓದಿ: ರಾಶಿ ಖನ್ನಾ ಮೂಗಲ್ಲಿ ರಕ್ತ; ಅಯ್ಯೋ ಅವರಿಗೇನಾಯ್ತು?

ರಾಶಿ ಖನ್ನಾ ಅವರು ಮದ್ರಾಸ್ ಕೆಫೆ ಚಿತ್ರದ ಮೂಲಕ ಗಮನ ಸೆಳೆದರು. ಜಾನ್ ಅಬ್ರಹಾಮ್ ಈ ಚಿತ್ರದ ಹೀರೋ. ಆ ಬಳಿಕ ಅಜಯ್ ದೇವಗನ್ ಮೊದಲಾದವರ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:55 am, Fri, 27 June 25

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us