AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೇಮದ ಊರಲಿ’ ನಟಿಗೆ ಕರೆ ಮಾಡಿ ಅಭಿನಂದಿಸಿದ ರಶ್ಮಿಕಾ ಮಂದಣ್ಣ

ಸಿನಿಮಾ ನೆರೆ ರಾಜ್ಯಗಳನ್ನು ಸಹ ತಲುಪಿದ್ದು ಅಲ್ಲಿಯೂ ಸಹ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಸಿನಿಮಾ ಹಿಟ್ ಆದ ಬಳಿಕ ಕೆಲವು ಸ್ಟಾರ್ ನಟರುಗಳೂ ಸಹ ‘ಪ್ರೇಮದ ಊರಲಿ’ ಸಿನಿಮಾವನ್ನು ಹೊಗಳಿ ಕೊಂಡಾಡುತ್ತಿದ್ದಾರೆ. ವಿಶೇಷವೆಂದರೆ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗಿರುವ ರಶ್ಮಿಕಾ ಮಂದಣ್ಣ ಅವರು ಸಹ ಸಿನಿಮಾದ ಭರ್ಜರಿ ಪ್ರದರ್ಶನದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು, ‘ಪ್ರೇಮದ ಊರಲಿ’ ಸಿನಿಮಾದ ನಾಯಕಿಗೆ ಕರೆ ಮಾಡಿ ಮಾತನಾಡಿದ್ದು, ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ.

‘ಪ್ರೇಮದ ಊರಲಿ’ ನಟಿಗೆ ಕರೆ ಮಾಡಿ ಅಭಿನಂದಿಸಿದ ರಶ್ಮಿಕಾ ಮಂದಣ್ಣ
Rashmika Tapaswini
ಮಂಜುನಾಥ ಸಿ.
|

Updated on: Oct 11, 2026 | 8:39 PM

Share

ಮುಖ್ಯಾಂಶಗಳು

  • ‘ಪ್ರೇಮದ ಊರಲಿ’ ನಾಯಕಿಗೆ ರಶ್ಮಿಕಾ ಮಂದಣ್ಣ ಕರೆ
  • ತಪಸ್ವಿನಿ ಪೂಣಚ್ಚಗೆ ಕರೆ ಮಾಡಿದ ರಶ್ಮಿಕಾ ಮಂದಣ್ಣ
  • ಗೆಲುವಿಗೆ ಸಂತಸ ವ್ಯಕ್ತಪಡಿಸಿದ ನಟಿ ರಶ್ಮಿಕಾ

‘ಪ್ರೇಮದ ಊರಲಿ’ ಸಿನಿಮಾ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೆರೆ ರಾಜ್ಯಗಳನ್ನು ಸಹ ತಲುಪಿದ್ದು ಅಲ್ಲಿಯೂ ಸಹ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಸಿನಿಮಾ ಹಿಟ್ ಆದ ಬಳಿಕ ಕೆಲವು ಸ್ಟಾರ್ ನಟರುಗಳೂ ಸಹ ‘ಪ್ರೇಮದ ಊರಲಿ’ ಸಿನಿಮಾವನ್ನು ಹೊಗಳಿ ಕೊಂಡಾಡುತ್ತಿದ್ದಾರೆ. ವಿಶೇಷವೆಂದರೆ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗಿರುವ ರಶ್ಮಿಕಾ ಮಂದಣ್ಣ ಅವರು ಸಹ ಸಿನಿಮಾದ ಭರ್ಜರಿ ಪ್ರದರ್ಶನದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು, ‘ಪ್ರೇಮದ ಊರಲಿ’ ಸಿನಿಮಾದ ನಾಯಕಿಗೆ ಕರೆ ಮಾಡಿ ಮಾತನಾಡಿದ್ದು, ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಸಿನಿಮಾದ ನಟಿ ತೇಜಸ್ವಿನಿ ಪೂಣಚ್ಚ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ‘ಕೊಡಗಿನಿಂದ ಬಂದ ಯುವತಿ, ಸಿನಿಮಾನಲ್ಲಿ ನಟಿಸಿ, ಆ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿರುವುದು ಸಾಮಾನ್ಯ ವಿಷಯವಲ್ಲ. ನಿನ್ನ ಬಗ್ಗೆ ಬಹಳ, ಬಹಳ ಹೆಮ್ಮೆ ಆಗುತ್ತಿದೆ. ನನ್ನ ಪ್ರೀತಿಯ ಹುಡುಗಿ ತಪಸ್ವಿನಿ ಪೂಣಚ್ಚಗೆ ಪ್ರೀತಿಪೂರ್ವಕ ಅಪ್ಪುಗೆಗಳು. ಇದು ಕೇವಲ ನಿನ್ನ ಆರಂಭವಷ್ಟೆ. ನೀನು ಅಂದುಕೊಂಡಿದ್ದೆಲ್ಲ, ನೀನು ಕಂಡ ಕನಸುಗಳೆಲ್ಲ ಸಾಕಾರಗೊಳ್ಳಲಿ ಎಂದು ತುಂಬು ಹೃದಯದಿಂದ ನಾನು ಹಾರೈಸುತ್ತೇನೆ’ ಎಂದಿದ್ದಾರೆ.

ಅಂದಹಾಗೆ ರಶ್ಮಿಕಾ ಅವರು ಕೇವಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾತ್ರ ಹಂಚಿಕೊಂಡಿಲ್ಲ ಬದಲಿಗೆ ತಪಸ್ವಿನಿ ಅವರಿಗೆ ಖುದ್ದು ಕರೆ ಮಾಡಿ ಅವರೊಟ್ಟಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ. ನಿರೂಪಕಿ ಅನುಶ್ರೀ ಅವರ ಸಹಾಯದಿಂದ ರಶ್ಮಿಕಾ ಮಂದಣ್ಣ ಅವರು ತಪಸ್ವಿನಿ ಅವರನ್ನು ಸಂಪರ್ಕ ಮಾಡಿದರಂತೆ. ಹಾಗಾಗಿ ಅನುಶ್ರೀ ಅವರಿಗೂ ಸಹ ರಶ್ಮಿಕಾ ಧನ್ಯವಾದಗಳನ್ನು ಹೇಳಿದ್ದಾರೆ. ಜೊತೆಗೆ ಅನುಶ್ರೀ ಅವರನ್ನು ಭೇಟಿ ಆಗಿದ್ದಕ್ಕೆ ಖುಷಿಯನ್ನು ಸಹ ರಶ್ಮಿಕಾ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ‘ಮೈಸಾ’ ಸಿನಿಮಾಕ್ಕೆ ‘ಸೀತಾ ರಾಮಂ’ ಕಾರಣ

ಅಂದಹಾಗೆ ‘ಪ್ರೇಮದ ಊರಲಿ’ ನಟಿ ತಪಸ್ವಿನಿ ಅವರು ಕೊಡಗಿನವರು. ರಶ್ಮಿಕಾ ಮಂದಣ್ಣ ಸಹ ಕೊಡಗಿನವರು. ಹಾಗಾಗಿ ತಮ್ಮವರಿಗೆ ರಶ್ಮಿಕಾ ಮಂದಣ್ಣ ಬೆಂಬಲಿಸಿ ಬೆನ್ನು ತಟ್ಟಿದ್ದಾರೆ. ಏನೇ ಆಗಲಿ, ಸ್ಥಳೀಯ ನಟ-ನಟಿಯರೇ ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸನ್ನು ಸಂಭ್ರಮಿಸಲು ಹಿಂದೆ-ಮುಂದೆ ನೋಡುತ್ತಿರುವಾಗ ರಶ್ಮಿಕಾ ಅವರು ಯುವ ನಟಿಯೊಬ್ಬರನ್ನು ಕರೆ ಮಾಡಿ ಅಭಿನಂದಿಸಿರುವುದು ಪ್ರಶಂಸಾರ್ಹ ವಿಷಯವೇ. ಟಿ ತಪಸ್ವಿನಿ ಪೂಣಚ್ಚ ಸಹ ಈ ಬಗ್ಗೆ ಸ್ಟೋರಿ ಹಂಚಿಕೊಂಡಿದ್ದು, ‘ಇದು ಮರೆಯಲಾಗದ್ದು, ಖುದ್ದು ‘ದೇವತೆ’ಯಿಂದ ಈ ಹೊಗಳಿಕೆ ಬಂದಿರುವುದು ಅದ್ಭುತ. ಆಂಕರ್ ಅನುಶ್ರೀ ಅವರಿಗೆ ಧನ್ಯವಾದ’ ಎಂದಿದ್ದಾರೆ ನಟಿ.

ರಶ್ಮಿಕಾ ಮಂದಣ್ಣ ಸಹ ಕೂರ್ಗಿವರೇ ಆಗಿದ್ದು ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆ ಆರಂಭಿಸಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ‘ರಣಬಾಲಿ’ ಸಿನಿಮಾನಲ್ಲಿ ರಶ್ಮಿಕಾ ನಟನೆ ಮಾಡಿದ್ದು, ಆ ಸಿನಿಮಾ ಅಕ್ಟೋಬರ್ 16ರಂದು ತೆರೆಗೆ ಬರುತ್ತಿದೆ. ಅದರ ಜೊತೆಗೆ ‘ಮೈಸಾ’, ‘ರಾಕಾ’ ಇನ್ನೂ ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ