ರಶ್ಮಿಕಾ ಮಂದಣ್ಣ ಮನೆಗೆ ತೆರಳುವುದು ಆ ಇಬ್ಬರಿಗಾಗಿ; ಫೋಟೋ ಮೂಲಕ ವಿವರಿಸಿದ ನಟಿ
ಸಿನಿಮಾ ಕೆಲಸಗಳಿಗೋಸ್ಕರ ಹೈದರಾಬಾದ್ ಹಾಗೂ ಮುಂಬೈನಲ್ಲಿ ನೆಲೇಸಬೇಕಾದ ಅನಿವಾರ್ಯತೆ ಇರುವುದರಿಂದ ಎರಡೂ ನಗರಗಳಲ್ಲಿ ಅವರು ಮನೆ ಖರೀದಿ ಮಾಡಿದ್ದಾರೆ. ಅವರು ಪ್ರೀತಿಯಿಂದ ಔರಾ ಹೆಸರಿನ ಶ್ವಾನ ಹಾಗೂ ಸ್ನೋ ಹೆಸರಿನ ಬೆಕ್ಕನ್ನು ಸಾಕಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ದೇಶಾದ್ಯಂತ ಗುರುತಿಸಿಕೊಂಡಿದ್ದಾರೆ. ಅವರ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಹಲವು ಸ್ಟಾರ್ ನಟರ ಚಿತ್ರಕ್ಕೆ ಅವರು ನಾಯಕಿ ಆಗುತ್ತಿದ್ದಾರೆ. ಹೊಸಹೊಸ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲೂ (Social Media) ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಪೋಸ್ಟ್ಗಳನ್ನು ಅವರು ಹಾಕುತ್ತಿರುತ್ತಾರೆ. ಈಗ ಅವರು ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ. ಅವರು ಮನೆಗೆ ತೆರಳುವುದು ಯಾರಿಗಾಗಿ ಎಂಬುದನ್ನು ವಿವರಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈ ಕಾರಣಕ್ಕೆ ಅವರ ಆಸ್ತಿ ಹೆಚ್ಚುತ್ತಲೇ ಇದೆ. ದುಬಾರಿ ರೇಂಜ್ ರೋವರ್ ಕಾರನ್ನು ಅವರು ಹೊಂದಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಕೆಲಸಗಳಿಗೋಸ್ಕರ ಹೈದರಾಬಾದ್ ಹಾಗೂ ಮುಂಬೈನಲ್ಲಿ ನೆಲೇಸಬೇಕಾದ ಅನಿವಾರ್ಯತೆ ಇರುವುದರಿಂದ ಎರಡೂ ನಗರಗಳಲ್ಲಿ ಅವರು ಮನೆ ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಪ್ರೀತಿಯಿಂದ ಔರಾ ಹೆಸರಿನ ಶ್ವಾನ ಹಾಗೂ ಸ್ನೋ ಹೆಸರಿನ ಬೆಕ್ಕನ್ನು ಸಾಕಿದ್ದಾರೆ.
ಈ ಮೊದಲು ಅವರ ಬಳಿ ಔರ ಹೆಸರಿನ ಶ್ವಾನ ಮಾತ್ರ ಇತ್ತು. ಇತ್ತೀಚೆಗೆ ಸ್ನೋ ಹೆಸರಿನ ಬೆಕ್ಕನ್ನು ಅವರು ಮನೆಗೆ ತಂದಿದ್ದಾರೆ. ತಾವು ತೆರಳುವ ಕಡೆ ಇವೆರಡೂ ಪ್ರಾಣಿಗಳನ್ನು ಅವರು ಕರೆದುಕೊಂಡು ಹೋಗುತ್ತಾರೆ. ರಶ್ಮಿಕಾ ಹೊರಗೆ ತೆರಳಿದಾಗ ಈ ಎರಡೂ ಪ್ರಾಣಿಗಳು ಮನೆಯಲ್ಲಿ ಕಾದು ಕೂತಿರುತ್ತವೆಯಂತೆ. ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದಂತೆ ರಶ್ಮಿಕಾ ಅವರನ್ನು ಇವು ಮುದ್ದಾಡುತ್ತವೆ. ರಶ್ಮಿಕಾ ಅವರು ಇವುಗಳಿಗೋಸ್ಕರವೇ ಮನೆಗೆ ತೆರಳುತ್ತಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬೇರೆ ನಟಿಯರಿಗೆ ಹೊಟ್ಟೆಕಿಚ್ಚು ಆಗುವಷ್ಟು ಆಫರ್ ಪಡೆದ ರಶ್ಮಿಕಾ; ಈಗ ಕೈಯಲ್ಲಿ ಇರುವ ಚಿತ್ರಗಳು ಎಷ್ಟು?
ರಶ್ಮಿಕಾ ಬಗ್ಗೆ ನಿತ್ಯ ಹೊಸಹೊಸ ವದಂತಿಗಳು ಹುಟ್ಟಿಕೊಳ್ಳುತ್ತವೆ. ಆದರೆ, ಈ ಬಗ್ಗೆ ರಶ್ಮಿಕಾ ಇದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಔರಾ ಬಗ್ಗೆ ಇತ್ತೀಚೆಗೆ ಕೇಳಿ ಬಂದ ವದಂತಿ ಬಗ್ಗೆ ಅವರು ಸಿಟ್ಟಾಗಿದ್ದರು. ‘ಔರಾಗೋಸ್ಕರವೂ ರಶ್ಮಿಕಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಸುತ್ತಾರೆ’ ಎನ್ನುವ ವದಂತಿ ಹಬ್ಬಿತ್ತು. ಇದಕ್ಕೆ ರಶ್ಮಿಕಾ ಖಕಡ್ ತಿರುಗೇಟು ನೀಡಿದ್ದರು. ಸಿನಿಮಾ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಅವರು ‘ಪುಷ್ಪ 2’, ‘ಗುಡ್ಬೈ’ ‘ವಾರಿಸು’ ಮೊದಲಾದ ಚಿತ್ರಗಳ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.