ತೆಲುಗು ಮಾತನಾಡಿ ಟ್ರೋಲ್ ಆದ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ 'ಎಪಿಕ್' ಟ್ರೇಲರ್ ಲಾಂಚ್‌ನಲ್ಲಿ ತೆಲಂಗಾಣ ಶೈಲಿಯಲ್ಲಿ ಮಾತನಾಡಿದ್ದು ಸಖತ್ ವೈರಲ್ ಆಗಿದೆ. ಕೆಲವರು ಅವರ ಭಾಷೆಯ ಪ್ರಯತ್ನವನ್ನು ಶ್ಲಾಘಿಸಿದರೆ, ಮತ್ತೆ ಕೆಲವರು ಟೀಕಿಸಿದ್ದಾರೆ. ಹೈದರಾಬಾದ್ ಸೊಸೆಯಾಗಿರುವ ರಶ್ಮಿಕಾ ಹೊಸ ಭಾಷೆ ಕಲಿಯಲು ನಡೆಸುತ್ತಿರುವ ಈ ಪ್ರಯತ್ನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇನ್ನು ಕೆಲವರು ಜೋರಾಗಿಯೇ ಟೀಕಿಸಿದ್ದಾರೆ.

ಮುಖ್ಯಾಂಶಗಳು
- ತೆಲಂಗಾಣ ಶೈಲಿಯಲ್ಲಿ ರಶ್ಮಿಕಾ ಮಾತು
- ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು ದೊಡ್ಡ ಚರ್ಚೆ
- ರಶ್ಮಿಕಾ ಭಾಷಾ ಪ್ರೇಮಕ್ಕೆ ಫ್ಯಾನ್ಸ್ ಫಿದಾ
ನಟಿ ರಶ್ಮಿಕಾ ಮಂದಣ್ಣ ಅವರು (Rashmika) ಮಾತನಾಡಿರುವ ತೆಲಂಗಾಣ ಭಾಷೆಯ ಶೈಲಿ ಈಗ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ದೇವರಕೊಂಡ ಅವರನ್ನು ವಿವಾಹವಾದ ಬಳಿಕ ಅವರು ತೆಲಂಗಾಣದ ಸೊಸೆಯಾಗಿದ್ದಾರೆ. ಹೊಸ ಮನೆಯ ಸಂಸ್ಕೃತಿಯನ್ನು ಅವರು ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ, ಅವರಿಂದ ಇದು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ.
ಇತ್ತೀಚೆಗೆ ನಡೆದ ‘ಎಪಿಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ರಶ್ಮಿಕಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಆನಂದ್ ದೇವರಕೊಂಡ ಕುರಿತು ಮಾತನಾಡುವಾಗ ಅವರು ತೆಲಂಗಾಣ ಶೈಲಿಯಲ್ಲೇ ಮಾತನಾಡಿದರು. ಸಂಪೂರ್ಣ ಸ್ಪಷ್ಟತೆ ಇಲ್ಲದಿರುವ ಕಾರಣಕ್ಕೆ ಅವರು ಟ್ರೋಲ್ ಆಗುತ್ತಾ ಇದ್ದಾರೆ.
Bane Show dengtude ga Edo Telegana lo unatu Proper Kannada ikkada ki vachie settle ayidee pic.twitter.com/77PS0UExMn
— Bruce wayne (@Brucewayne1644) September 4, 2026
ರಶ್ಮಿಕಾ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ರಶ್ಮಿಕಾ ಅವರ ಶ್ರಮ ಮತ್ತು ಭಾಷೆಯ ಮೇಲಿನ ಪ್ರೀತಿಯನ್ನು ಹಲವರು ಮುಕ್ತವಾಗಿ ಶ್ಲಾಘಿಸಿದ್ದಾರೆ. ಆದರೆ ಕೆಲವರು ಅವರು ಬಲವಂತವಾಗಿ ಈ ಶೈಲಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಸ್ಪಷ್ಟವಾಗಿ ಭಾಷೆ ಬರದಿದ್ದರೂ ಹೀಗೆ ಮಾತನಾಡುವುದು ಅಗತ್ಯವೇ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗಾಯದಿಂದ ರಶ್ಮಿಕಾ ಮಂದಣ್ಣಗೆ ಲಾಭ ಆಗಿದ್ದೇ ಹೆಚ್ಚು; ವಿವರಿಸಿದ ನಟಿ
‘ಕನ್ನಡದಲ್ಲಿ ರಶ್ಮಿಕಾಗೆ ಸರಿಯಾಗಿ ಮಾತನಾಡು ಬರುತ್ತಾ ಇರಲಿಲ್ಲ. ಈ ಕಾರಣಕ್ಕೆ ಅವರನ್ನು ಅಲ್ಲಿ ಟ್ರೋಲ್ ಮಾಡಲಾಯಿತು. ಈಗ ಅವರು ತೆಲುಗಿನಲ್ಲಿ ಮಾತನಾಡಲು ಹೋಗಿ ಟ್ರೋಲ್ ಆಗುತ್ತಿದ್ದಾರೆ’ ಎಂದು ಅನೇಕರು ಹೇಳಿದ್ದಾರೆ. ವಿಜಯ್ ದೇವರಕೊಂಡ ತೆಲಂಗಾಣದಲ್ಲೇ ಹುಟ್ಟಿ ಬೆಳೆದವರಾಗಿದ್ದಾರೆ. ಹೀಗಾಗಿ ರಶ್ಮಿಕಾ ಅವರಿಗೆ ಮುಂಬರುವ ದಿನಗಳಲ್ಲಿ ಈ ಭಾಷೆ ಇನ್ನಷ್ಟು ಸುಲಭವಾಗಬಹುದು. ಆದರೆ, ಸದ್ಯಕ್ಕಂತೂ ಅವರಿಗೆ ಈ ವಿಷಯದಲ್ಲಿ ಅವರಿಗೆ ಪರ್ಫೆಕ್ಷನ್ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




