ಜಪಾನ್ನಲ್ಲಿ ಸಂಪೂರ್ಣ ಸ್ಕ್ಯಾನ್ಗೆ ಒಳಗಾದ ನಿರ್ದೇಶಕ ರಾಜಮೌಳಿ; ಏನಿದು ಹೊಸ ಪ್ರಯೋಗ?
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಈ ವರ್ಷ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಯಿತು. ಈಗ ಸಿನಿಮಾ ಜಪಾನ್ ಅವತರಣಿಕೆಯಲ್ಲಿ ಬಿಡುಗಡೆ ಆಗಿದೆ. ಈ ಕಾರಣದಿಂದ ರಾಜಮೌಳಿ ಅವರು ಜಪಾನ್ಗೆ ತೆರಳಿದ್ದಾರೆ.

ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳು ವಿದೇಶಕ್ಕೆ ತೆರಳಿದಾಗ ಅಲ್ಲಿನ ಖ್ಯಾತ ನಾಮರನ್ನು ಭೇಟಿ ಮಾಡುತ್ತಾರೆ. ಹಲವು ವಿಚಾರಗಳ ಕುರಿತು ಚರ್ಚೆ ಮಾಡುತ್ತಾರೆ. ಈಗ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamoli) ಅವರು ಜಪಾನ್ಗೆ ತೆರಳಿದ್ದಾರೆ. ಈ ವೇಳೆ ಜಪಾನ್ನ ವಿಡಿಯೋ ಗೇಮ್ ಡಿಸೈನರ್ ಹಿಡಿಯೋ ಕೊಜಿಮಾ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜಮೌಳಿ ಅವರನ್ನು ಕ್ಯಾಮೆರಾಗಳು ಸುತ್ತುವರಿದಿರುವ ಫೋಟೋ ಸದ್ಯ ಸದ್ದು ಮಾಡುತ್ತಿದೆ.
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಈ ವರ್ಷ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಯಿತು. ಈಗ ಸಿನಿಮಾ ಜಪಾನ್ ಅವತರಣಿಕೆಯಲ್ಲಿ ಬಿಡುಗಡೆ ಆಗಿದೆ. ಈ ಕಾರಣದಿಂದ ರಾಜಮೌಳಿ ಅವರು ಜಪಾನ್ಗೆ ತೆರಳಿದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕ ಅವರು ಹಲವರನ್ನು ಭೇಟಿ ಮಾಡಿದ್ದಾರೆ. ಆ ಪೈಕಿ ಮೆಟಲ್ ಗಿಯರ್ ಹೆಸರಿನ ಗೇಮ್ ಡಿಸೈನ್ ಮಾಡಿದ ಹಿಡಿಯೋ ಕೂಡ ಒಬ್ಬರು.
ರಾಜಮೌಳಿ ಅವರು ಹಿಡಿಯೋ ಅವರ ಸ್ಟುಡಿಯೋಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಚ್ಚರಿ ಎಂದರೆ, ರಾಜಮೌಳಿ ಅವರನ್ನು ಹಿಡಿಯೋ ಸಂಪೂರ್ಣವಾಗಿ ಸ್ಕ್ಯಾನ್ ಮಾಡಿದ್ದಾರೆ. ರಾಜಮೌಳಿ ಅವರನ್ನು ಕ್ಯಾಮೆರಾಗಳು ಸುತ್ತುವರಿದಿವೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗುತ್ತಿದೆ. ಇದರಿಂದ ಸಾಕಷ್ಟು ಕುತೂಹಲ ಸೃಷ್ಟಿ ಆಗಿದೆ.
Director S.S. Rajamouli visited KJP!!! We have scanned him. RRR???????? pic.twitter.com/rcyatlnXnS
— HIDEO_KOJIMA (@HIDEO_KOJIMA_EN) October 20, 2022
ಹಿಡಿಯೋ ಅವರು ಹೊಸಹೊಸ ಗೇಮ್ನ ಡಿಸೈನ್ ಮಾಡುತ್ತಿರುತ್ತಾರೆ. ಈಗ ತಮ್ಮ ಮುಂದಿನ ಗೇಮ್ಗೆ ರಾಜಮೌಳಿ ಅವರ ಪಾತ್ರ ಕೂಡ ಇರಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯಕ್ಕಂತೂ ಈ ಪೋಟೋ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮಹೇಶ್ ಬಾಬುಗೆ ಜತೆಯಾದ ದೀಪಿಕಾ ಪಡುಕೋಣೆ? ರಾಜಮೌಳಿ ನಿರ್ದೇಶನದಲ್ಲಿ ಕನ್ನಡದ ಬ್ಯೂಟಿ
‘ಆರ್ಆರ್ಆರ್’ ಹಾಗೂ ‘ಕೆಜಿಎಫ್ 2’ ಕಲೆಕ್ಷನ್ ಹೋಲಿಕೆ ಮಾಡಿದರೆ ಎರಡೂ ಸಿನಿಮಾಗಳ ಮಧ್ಯೆ ಕೆಲವೇ ಕೋಟಿಗಳ ಅಂತರವಿದೆ. ಈಗ ‘ಆರ್ಆರ್ಆರ್’ ಜಪಾನ್ನಲ್ಲಿ ರಿಲೀಸ್ ಆಗಿರುವುದರಿಂದ ಬಾಕ್ಸ್ ಆಫೀಸ್ ಗಳಿಕೆ ಹೆಚ್ಚಬಹುದು. ರಾಜಮೌಳಿ ಚಿತ್ರ ಯಶ್ ಚಿತ್ರವನ್ನು ಹಿಂದಿಕ್ಕಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಕೆಲವೇ ವಾರಗಳಲ್ಲಿ ಈ ಬಗ್ಗೆ ಸ್ಪಷ್ಟ ಲೆಕ್ಕಾಚಾರ ಸಿಗಲಿದೆ.
Published On - 8:01 am, Fri, 21 October 22








