RRR: ಪ್ರತಿಷ್ಠಿತ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿಯ 2 ವಿಭಾಗಗಳಿಗೆ ನಾಮಿನೇಟ್​ ಆದ ‘ಆರ್​ಆರ್​ಆರ್​’ ಚಿತ್ರ

Rajamouli | Golden Globes 2023: ‘ಹಾಲಿವುಡ್​ ಫಾರಿನ್​ ಪ್ರೆಸ್​ ಅಸೋಸಿಯೇಷನ್​’ ಮೂಲಕ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ನೀಡಲಾಗುತ್ತದೆ. ಇದರ 2 ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಚಿತ್ರ ನಾಮಿನೇಟ್​ ಆಗಿದೆ.

RRR: ಪ್ರತಿಷ್ಠಿತ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿಯ 2 ವಿಭಾಗಗಳಿಗೆ ನಾಮಿನೇಟ್​ ಆದ ‘ಆರ್​ಆರ್​ಆರ್​’ ಚಿತ್ರ
ರಾಮ್ ಚರಣ್​, ಜೂನಿಯರ್​ ಎನ್​ಟಿಆರ್
Follow us
TV9 Web
| Updated By: ಮದನ್​ ಕುಮಾರ್​

Updated on:Dec 13, 2022 | 7:37 AM

ಖ್ಯಾತ ನಿರ್ದೇಶಕ ರಾಜಮೌಳಿ (SS Rajamouli) ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ಇದೆ. ಈ ವರ್ಷ ಬಿಡುಗಡೆ ಆದ ‘ಆರ್​ಆರ್​ಆರ್​’ (RRR) ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದ ಈ ಚಿತ್ರ ಈಗ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ‘ಗೋಲ್ಡನ್​ ಗ್ಲೋಬ್​’ (Golden Globes 2023) ಪ್ರಶಸ್ತಿ ಪಡೆಯಲು ಈ ಚಿತ್ರ ಪ್ರಯತ್ನಿಸುತ್ತಿದೆ. 2 ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಚಿತ್ರ  ನಾಮಿನೇಟ್​ ಆಗಿದೆ. ‘ಇಂಗ್ಲಿಷ್​ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಈ ಚಿತ್ರ ಪೈಪೋಟಿ ನೀಡುತ್ತಿದೆ. ಈ ಸುದ್ದಿ ಕೇಳಿ ರಾಜಮೌಳಿ ಫ್ಯಾನ್ಸ್​ ಖುಷಿ ಆಗಿದ್ದಾರೆ. ಟಾಲಿವುಡ್​ ಮಂದಿ ಹೆಮ್ಮೆಯಿಂದ ಬೀಗುತ್ತಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದಲ್ಲಿ ರಾಮ್ ಚರಣ್​, ಜೂನಿಯರ್​ ಎನ್​ಟಿಆರ್​ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನು ರಾಮ್​ ಚರಣ್​ ನಿಭಾಯಿಸಿದ್ದರೆ, ಕೊಮರಮ್​ ಭೀಮ್​ ಪಾತ್ರಕ್ಕೆ ಜೂನಿಯರ್​ ಎನ್​ಟಿಆರ್​ ಬಣ್ಣ ಹಚ್ಚಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಬ್ಬರ ಕಾಲ್ಪನಿಕ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಆಲಿಯಾ ಭಟ್​, ಅಜಯ್ ದೇವಗನ್​ ನಟಿಸಿದ್ದಾರೆ.

ಇದನ್ನೂ ಓದಿ
Image
SS Rajamouli: ​ಅಮೆರಿಕಾದಲ್ಲಿ ‘ಆರ್​ಆರ್​ಆರ್’ಗೆ ವಿಶೇಷ ಮನ್ನಣೆ: ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
Image
Rajamouli: ‘ಸ್ಟಾರ್​ ವಾರ್ಸ್​’ ನಿರ್ದೇಶಕನ ಭೇಟಿ ಆದ ರಾಜಮೌಳಿ; ಹಾಲಿವುಡ್​ ಅಂಗಳದಲ್ಲೂ ಭರ್ಜರಿ ಹವಾ
Image
ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು
Image
ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ

ಇದನ್ನೂ ಓದಿ: Oscars 2023 Nominations: ಆಸ್ಕರ್​ಗೆ ‘ಆರ್​ಆರ್​ಆರ್​’ ನಾಮಿನೇಟ್? ಸೃಷ್ಟಿಯಾಗಲಿದೆ ಹೊಸ ದಾಖಲೆ

‘ಹಾಲಿವುಡ್​ ಫಾರಿನ್​ ಪ್ರೆಸ್​ ಅಸೋಸಿಯೇಷನ್​’ ಮೂಲಕ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ನೀಡಲಾಗುತ್ತದೆ. ಅಮೆರಿಕದ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ. ಇಂಗ್ಲಿಷ್​ ಹೊರತಾದ 2 ವಿಭಾಗದಲ್ಲಿ ‘ಆರ್​ಆರ್​ಆರ್​’ ಚಿತ್ರ ನಾಮಿನೇಟ್​ ಆಗಿದ್ದು, ಪ್ರಶಸ್ತಿ ಗೆಲ್ಲಲಿದೆಯಾ ಎಂಬ ಕೌತುಕ ಮೂಡಿದೆ. 2023ರ ಜನವರಿ 11ರಂದು ಲಾಸ್​ ಎಂಜಲೀಸ್​ನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?

‘ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್​ ಫ್ರಂಟ್​’ (ಜರ್ಮನಿ), ಅರ್ಜೆಂಟೀನಾ 1985 (ಅರ್ಜೆಂಟೀನಾ), ಕ್ಲೋಸ್​ (ಬೆಲ್ಜಿಯಂ), ಡಿಸಿಷನ್​ ಟು ಲೀವ್​ (ದಕ್ಷಿಣ ಕೋರಿಯಾ) ಚಿತ್ರಗಳು ‘ಆರ್​ಆರ್​ಆರ್​’ ಸಿನಿಮಾ ಜೊತೆ ಸೆಣೆಸುತ್ತಿವೆ. ತಮ್ಮ ಚಿತ್ರವನ್ನು ನಾಮಿನೇಟ್​ ಮಾಡಿದ್ದಕ್ಕಾಗಿ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿಯ ಜ್ಯೂರಿಗಳಿಗೆ ಹಾಗೂ ಅಭಿಮಾನಿಗಳಿಗೆ ರಾಜಮೌಳಿ ಅವರು ಧನ್ಯವಾದ ತಿಳಿಸಿದ್ದಾರೆ.

ಭಾರತದಿಂದ ಆಸ್ಕರ್​ ಪ್ರಶಸ್ತಿ ಸ್ಪರ್ಧೆಗೆ ‘ಆರ್​ಆರ್​ಆರ್​’ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿಲ್ಲ. ಆದರೆ ಸ್ವಂತವಾಗಿ ನಾಮಿನೇಟ್​ ಆಗಲು ಪ್ರಯತ್ನಿಸುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಸಕಲ ರೀತಿಯ ಪ್ರಯತ್ನ ಮಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:37 am, Tue, 13 December 22