ಪಿಯುಸಿ ಪರೀಕ್ಷೆಯಲ್ಲಿ ‘ಆರ್‌ಆರ್‌ಆರ್’ ಸಿನಿಮಾ ಕುರಿತು ಪ್ರಶ್ನೆ; ವೈರಲ್ ಆಯ್ತು ಪ್ರಶ್ನೆಪತ್ರಿಕೆ
ದ್ವಿತೀಯ ಪಿಯುಸಿ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಪತ್ರಿಕೆ ಸಾಕಷ್ಟು ವೈರಲ್ ಆಗುತ್ತಿದೆ. ಸಿನಿಮಾ ಬಗ್ಗೆ ಇರುವ ಕ್ರೇಜ್ಗೆ ಈ ಪ್ರಶ್ನೆಪತ್ರಿಕೆ ಸಾಕ್ಷ್ಯ ಒದಗಿಸಿದೆ.
ಜ್ಯೂ.ಎನ್‌ಟಿಆರ್ (Jr.Ntr) ಹಾಗೂ ರಾಮ್ ಚರಣ್ ನಟನೆಯ ‘ಆರ್‌ಆರ್‌ಆರ್’ ಸಿನಿಮಾ ಇತಿಹಾಸ ಸೃಷ್ಟಿಸಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ರಾಜಮೌಳಿ (SS Rajamouli) ಖ್ಯಾತಿ ಮತ್ತಷ್ಟು ಹೆಚ್ಚಿದೆ. ಈ ಸಿನಿಮಾ ತೆರೆಕಂಡು 50 ದಿನ ಕಳೆಯುತ್ತಾ ಬಂದಿದೆ. ಆದರೆ, ಸಿನಿಮಾ ಬಗ್ಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಈಗ ತೆಲಂಗಾಣ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಆರ್‌ಆರ್‌ಆರ್’ ಸಿನಿಮಾ (RRR Movie)ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಪತ್ರಿಕೆ ವೈರಲ್ ಆಗುತ್ತಿದೆ.
‘ಆರ್‌ಆರ್‌ಆರ್’ ಸಿನಿಮಾ ಮಾರ್ಚ್ 24ರಂದು ತೆರೆಗೆ ಬಂದಿದೆ. ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಟಾಲಿವುಡ್ನ ಸಿನಿಮಾ ಆದ್ದರಿಂದ ತೆಲುಗು ಮಂದಿ ಈ ಚಿತ್ರವನ್ನು ಹೆಚ್ಚು ಒಪ್ಪಿಕೊಂಡಿದ್ದಾರೆ. ಈಗ ಅಚ್ಚರಿ ಎಂಬಂತೆ ದ್ವಿತೀಯ ಪಿಯುಸಿ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಪತ್ರಿಕೆ ಸಾಕಷ್ಟು ವೈರಲ್ ಆಗುತ್ತಿದೆ. ಸಿನಿಮಾ ಬಗ್ಗೆ ಇರುವ ಕ್ರೇಜ್ಗೆ ಈ ಪ್ರಶ್ನೆಪತ್ರಿಕೆ ಸಾಕ್ಷ್ಯ ಒದಗಿಸಿದೆ.
‘ನೀವು ಆರ್‌ಆರ್‌ಆರ್ ಸಿನಿಮಾ ಹಾಗೂ ಕೋಮರಂ ಭೀಮ್ ಪಾತ್ರದಲ್ಲಿ ಜ್ಯೂ. ಎನ್‌ಟಿಆರ್ ಅವರ ಅಭಿನಯವನ್ನು ನೋಡಿದ್ದೀರಿ. ಸಿನಿಮಾದ ಅದ್ಭುತ ಯಶಸ್ಸಿನ ನಂತರ ನಿಮಗೆ ಪ್ರತಿಷ್ಠಿತ ಟಿವಿ ವಾಹಿನಿಯಲ್ಲಿ ಜ್ಯೂ. ಎನ್‌ಟಿಆರ್ ಅವರನ್ನು ಸಂದರ್ಶನ ಮಾಡಲು ಅವಕಾಶ ಸಿಕ್ಕಿತು ಎಂದು ಊಹಿಸಿಕೊಳ್ಳಿ’ ಎಂದು ಪ್ರಶ್ನೆ ಪತ್ರಿಕೆಯಲ್ಲಿ ಬರೆಯಲಾಗಿದೆ
‘ಕೆಳಗೆ ನೀಡಿರುವ ವಿಚಾರಗಳನ್ನು ಇಟ್ಟುಕೊಂಡು ಜ್ಯೂ.ಎನ್‌ಟಿಆರ್ ಕುರಿತ ಕಾಲ್ಪನಿಕ ಸಂದರ್ಶನ ಬರೆಯಿರಿ ಚಿತ್ರದ ಸ್ವರೂಪ, ಸಿನಿಮಾ ನಿರ್ದೇಶಕರೊಂದಿಗೆ ಜ್ಯೂ.ಎನ್‌ಟಿಆರ್ ಬಾಂಧವ್ಯ, ಸಿನಿಮಾ ಸ್ಕ್ರಿಪ್ಟ್, ಉಳಿದ ನಟರ ಪಾತ್ರ, ಸಿನಿಮಾದ ಪ್ರಭಾವ’ ಇವಿಷ್ಟು ವಿಚಾರಗಳನ್ನು ಇಟ್ಟುಕೊಂಡು ಸಂದರ್ಶನ ಬರೆಯಲು ಸೂಚಿಸಲಾಗಿದೆ.
In an examination question paper Asked about Jr ntr performance in RRR Movie…. That’s the impact BHEEM character created all over the Country…@tarak9999 @ssrajamouli@RRRMovie @AlwaysRamCharan #RRRMovie pic.twitter.com/iJ9rqi0L1N
— Vishnu (@vishnuNtr9999) May 10, 2022
ಸದ್ಯ, ಈ ಪ್ರಶ್ನೆ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜ್ಯೂ.ಎನ್‌ಟಿಆರ್ ಅಭಿಮಾನಿಗಳು ಈ ಪ್ರಶ್ನೆ ಪತ್ರಿಕೆಯನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಫೇವರಿಟ್ ನಟನ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಫ್ಯಾನ್ಸ್ ಸಂತಸ ಹೊರಹಾಕಿದ್ದಾರೆ.
ಬೆಂಗಳೂರಿನ ಖಾಸಗಿ ಶಾಲೆಯೊಂದರ ಪರೀಕ್ಷೆಯಲ್ಲಿ ಮಕ್ಕಳಿಗೆ ಪುನೀತ್ ರಾಜ್ಕುಮಾರ್ ಕುರಿತು ಪ್ರಶ್ನೆ ಕೇಳಲಾಗಿತ್ತು. ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ವಿಷಯದ ಪರೀಕ್ಷೆ ನಡೆಸಲಾಗಿದ್ದು, ಅದರ ಪ್ರಶ್ನೆ ಪತ್ರಿಕೆಯಲ್ಲಿ ಪುನೀತ್ ರಾಜ್ಕುಮಾರ್ ಕುರಿತು ಪ್ರಶ್ನೆ ಕೇಳಲಾಗಿತ್ತು. ಅದರ ಫೋಟೋ ವೈರಲ್ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:50 pm, Thu, 12 May 22