Sai Dharam Tej: ಸಾಯಿ ಧರಮ್ ತೇಜ್ ಜನ್ಮದಿನ; ಅಪಘಾತದಲ್ಲಿ ಬದುಕುಳಿದು ಮರುಹುಟ್ಟು ಪಡೆದ ನಟ
ಅಪಘಾತ ಆದ ಬಳಿಕ ಒಂದು ತಿಂಗಳವರೆಗೂ ಸಾಯಿ ಧರಮ್ ತೇಜ್ ಅವರು ಕೋಮಾದಲ್ಲೇ ಇದ್ದರು. ಜುಲೈನಲ್ಲಿ ಅವರು ನಟನೆಯಿಂದ ಬ್ರೇಕ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾಗಿ ಅವರು ತಿಳಿಸಿದ್ದರು. ಬರ್ತ್ಡೇ ಪ್ರಯುಕ್ತ ಹೊಸ ಸಿನಿಮಾ ಘೋಷಣೆ ಆಗಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.
ನಟ ಸಾಯಿ ಧರಮ್ ತೇಜ್ (Sai Dharam Tej) ಅವರು ಟಾಲಿವುಡ್ನಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಇಂದು (ಅ.15) ಜನ್ಮದಿನದ (Sai Dharam Tej Birthday) ಸಂಭ್ರಮ. ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳ ಕಡೆಯಿಂದ ಶುಭಾಶಯ ಬರುತ್ತಿದೆ. ಅವರಿಗೆ ಆರೋಗ್ಯ ಹಾಗೂ ಆಯಸ್ಸು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಸಾಯಿ ಧರಮ್ ತೇಜ್ ಅವರಿಗೆ ಇದು ಎರಡನೇ ಲೈಫ್ ಎಂದರೂ ತಪ್ಪಾಗಲಾರದು. ಕೆಲವು ವರ್ಷಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Sai Dharam Tej Accident) ಅವರು ಬದುಕಿ ಮರುಹುಟ್ಟು ಪಡೆದರು. ಆ ಬಗ್ಗೆ ಇಲ್ಲಿದೆ ಮಾಹಿತಿ.
ಸಾಯಿ ಧರಮ್ ತೇಜ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2014ರಲ್ಲಿ. ‘ಪಿಲ್ಲ ನೂವು ಲೇನಿ ಜೀವಿತಂ’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಅವರು ಹಲವು ಸಿನಿಮಾ ಮಾಡಿದರು. ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನು ಮಾಡಿ ಗಮನ ಸೆಳೆದರು. ಅಪಘಾತದ ಬಳಿಕ ಅವರು ಒಂದು ಬ್ರೇಕ್ ಪಡೆದಿದ್ದರು. ಈ ವರ್ಷ ರಿಲೀಸ್ ಆದ ಅವರ ನಟನೆಯ ‘ವಿರೂಪಾಕ್ಷ’ ಸಿನಿಮಾ ಗೆದ್ದಿದೆ. ಈ ಚಿತ್ರ ಹಾರರ್ ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬಂದಿತ್ತು. ಬಾಕ್ಸ್ ಆಫೀಸ್ನಲ್ಲಿ ಚಿತ್ರ ಒಳ್ಳೆಯ ಗಳಿಕೆ ಮಾಡಿತು. ಅವರು ಈ ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದಿದ್ದಾರೆ. ಜುಲೈ ತಿಂಗಳಲ್ಲಿ ಸಾಯಿ ಧರಮ್ ತೇಜ್ ಅವರು ನಟನೆಯಿಂದ ಬ್ರೇಕ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾಗಿ ಅವರು ಹೇಳಿದ್ದರು. ಬರ್ತ್ಡೇ ಪ್ರಯುಕ್ತ ಹೊಸ ಸಿನಿಮಾ ಘೋಷಣೆ ಆಗಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.
ಇದನ್ನೂ ಓದಿ: ಸಿನಿಮಾ ಬಿಡುಗಡೆ ಮುನ್ನ ಅಭಿಮಾನಿಗಳಿಗೆ ಎಚ್ಚರಿಕೆ ಪತ್ರ ಬರೆದ ಸಾಯಿ ಧರಮ್ ತೇಜ್
ಭೀಕರ ರಸ್ತೆ ಅಪಘಾತ 2021ರ ಸೆಪ್ಟೆಂಬರ್ 10ರಂದು ಸಾಯಿ ಧರಮ್ ತೇಜ್ ಅವರು ಅಪಘಾತಕ್ಕೆ ಒಳಗಾದರು. ಸ್ಪೋರ್ಟ್ಸ್ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅಪಘಾತ ಆಯಿತು. ಈ ವೇಳೆ ಅವರ ಬೈಕ್ 72 ಕಿ.ಮೀ ವೇಗದಲ್ಲಿ ಇತ್ತು. ತಮ್ಮ ಮುಂದೆ ಚಲಿಸುತ್ತಿದ್ದ ಆಟೋ ರಿಕ್ಷಾವನ್ನು ಓವರ್ಟೇಕ್ ಮಾಡಲು ಸಾಯಿ ಧರಮ್ ತೇಜ್ ಪ್ರಯತ್ನಿಸಿದ್ದರು. ರಾಂಗ್ ಸೈಡ್ನಿಂದ ಓವರ್ ಟೇಕ್ ಮಾಡುವಾಗ ಈ ಅಪಘಾತ ನಡೆದಿತ್ತು.
ಇದನ್ನೂ ಓದಿ: ಸಾಯಿ ಧರಮ್ ತೇಜ್ಗೆ ಮತ್ತೆ ಸಂಕಷ್ಟ; ಹೈದರಾಬಾದ್ ಪೊಲೀಸರಿಂದ ಬಂತು ನೋಟಿಸ್
ಅಪಘಾತ ಆದ ಬಳಿಕ ಒಂದು ತಿಂಗಳವರೆಗೂ ಸಾಯಿ ಧರಮ್ ತೇಜ್ ಅವರು ಕೋಮಾದಲ್ಲೇ ಇದ್ದರು. ಆ ಬಳಿಕ ನಿಧಾನವಾಗಿ ಅವರು ಚೇತರಿಸಿಕೊಳ್ಳುತ್ತಾ ಬಂದರು. ಬಳಿಕ ಸಂಪೂರ್ಣವಾಗಿ ಅವರು ಚೇತರಿಸಿಕೊಂಡಿದ್ದಾರೆ. ಅವರ ಕಾಲುಗಳಿಗೆ ಸಾಕಷ್ಟು ಪೆಟ್ಟಾಗಿತ್ತು. ಈಗ ಸಾಯಿ ಧರಮ್ ತೇಜ್ ಅವರು ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಕಾಲು ಸಂಪೂರ್ಣವಾಗಿ ಗುಣಮುಖವಾಗಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದ ಅವರು ಬ್ರೇಕ್ ಘೋಷಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:52 am, Sun, 15 October 23