ಸಾಯಿ ಧರಮ್​ ತೇಜ್​ ಅಪಘಾತ ನೋಡಿ ಎಲ್ಲಾ ಬೈಕ್​ಗಳನ್ನು ಮಾರಿದ್ದ ನರೇಶ್ ಮಗ

‘ರಸ್ತೆ ಅಪಘಾತದಲ್ಲಿ ಸಾಯಿ ತೇಜ್ ಗಂಭೀರವಾಗಿ ಗಾಯಗೊಂಡಿದ್ದನ್ನು ನೋಡಿ ನನಗೆ ಸಹಿಸಲಾಗಲಿಲ್ಲ. ಕೆಲ ದಿನ ಯಾರನ್ನೂ ಭೇಟಿಯಾಗಲಿಲ್ಲ. ಫೋನ್ ಕೂಡ ಸ್ವಿಚ್ ಆಫ್​ ಮಾಡಿದ್ದೆ. ನನ್ನ ಎಲ್ಲ ಬೈಕ್​​ಗಳನ್ನೂ ಮಾರಿದ್ದೇನೆ’ ಎಂದು ನವೀನ್ ವಿಜಯ್ ಕೃಷ್ಣ ಭಾವುಕರಾಗಿ ಮಾತನಾಡಿದ್ದಾರೆ.

ಸಾಯಿ ಧರಮ್​ ತೇಜ್​ ಅಪಘಾತ ನೋಡಿ ಎಲ್ಲಾ ಬೈಕ್​ಗಳನ್ನು ಮಾರಿದ್ದ ನರೇಶ್ ಮಗ
ನವೀನ್​ ವಿಜಯ್​ ಕೃಷ್ಣ, ಸಾಯಿ ಧರಮ್​ ತೇಜ್​
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Aug 25, 2023 | 5:21 PM

ನಟ ಸಾಯಿ ಧರಮ್ ತೇಜ್ (Sai Dharam Tej) ಅವರು 2021ರ ಸೆಪ್ಟೆಂಬರ್ ತಿಂಗಳಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾದರು. ಅವರು ಕೆಲವು ವಾರ ಕೋಮಾದಲ್ಲಿದ್ದರು. ಸಾವು-ಬದುಕಿನ ನಡುವೆ ಹೋರಾಡಿ ಅವರು ಕೊನೆಗೂ ಚೇತರಿಸಿಕೊಂಡರು. ಈಗ ಅವರು ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಅವರ ಗೆಳೆಯ ಹಾಗೂ ನಟ ನವೀನ್ ವಿಜಯ್ ಕೃಷ್ಣ (Naveen Vijay krishna) ಅವರು ಒಂದು ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಾಯಿ ಧರಮ್ ತೇಜ್ ಅಪಘಾತಕ್ಕೆ (Sai Dharam Tej Accident) ಒಳಗಾದ ಬಳಿಕ ನವೀನ್ ತಮ್ಮ ಬಳಿ ಇರುವ ಎಲ್ಲಾ ಬೈಕ್​ಗಳನ್ನು ಮಾರಿದ್ದಾರೆ.

ಟಾಲಿವುಡ್ ನಟ ನರೇಶ್ ಅವರ ಮಗ ನವೀನ್. ಅವರು ಸಾಯಿ ಧರಮ್ ತೇಜ್ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇಟ್ಟುಕೊಂಡಿದ್ದಾರೆ. 2016ರಲ್ಲಿ ನವೀನ್ ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿಲ್ಲ. ಈಗ ಅವರು ಕಿರುಚಿತ್ರವನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಭಾಗವಹಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಾಯಿ ಧರಮ್ ತೇಜ್ ಬೈಕ್ ಅಪಘಾತದ ನಂತರದ ಪರಿಸ್ಥಿತಿಯನ್ನು ವಿವರಿಸುವಾಗ ನವೀನ್ ಭಾವುಕರಾದರು. ‘ಸಾಯಿ ಧರಮ್ ತೇಜ್ ಅವರ ಬೈಕ್ ಅಪಘಾತ ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿತು. ಜೀವನದಲ್ಲಿ ಜವಾಬ್ದಾರಿಯುತವಾಗಿ ಇರುವುದು ಹೇಗೆ ಎಂಬುದನ್ನು ಕಲಿಸಿದೆ’ ಎಂದಿದ್ದಾರೆ ನವೀನ್.

ಇದನ್ನೂ ಓದಿ: ಸಿನಿಮಾ ಬಿಡುಗಡೆ ಮುನ್ನ ಅಭಿಮಾನಿಗಳಿಗೆ ಎಚ್ಚರಿಕೆ ಪತ್ರ ಬರೆದ ಸಾಯಿ ಧರಮ್ ತೇಜ್

‘ಸಾಯಿ ಧರಮ್ ತೇಜ್ ಅಪಘಾತಕ್ಕೆ ಒಳಗಾಗುವ ಮೊದಲು ನಾವಿಬ್ಬರೂ ಒಟ್ಟಾಗಿ ಸುತ್ತಾಡಲು ಹೊಗಿದ್ದೆವು. ಅವರು ನನ್ನನ್ನು ಮನೆಯ ಹತ್ತಿರ ಡ್ರಾಪ್ ಮಾಡಿ ತಮ್ಮ ಮನೆಗೆ ಹೊರಟರು. ಆಗ ಅಪಘಾತ ಸಂಭವಿಸಿತು. ಸಾಯಿ ಅವರಿಗೆ ಆ್ಯಕ್ಸಿಡೆಂಟ್ ಆಗಿದೆ ಎಂದು ಕರೆ ಬಂದಾಗ, ಅದೇನೋ ಸಣ್ಣ ಅಪಘಾತ ಎಂದುಕೊಂಡೆ. ಆದರೆ ಆಸ್ಪತ್ರೆಗೆ ತೆರಳಿದ ನಂತರ ಅವರ ಸ್ಥಿತಿ ಕಂಡು ಬೆಚ್ಚಿಬಿದ್ದೆ. ಈ ಅಪಘಾತ ನನಗೆ ದೊಡ್ಡ ಪಾಠ ಕಲಿಸಿದೆ. ಜೀವನದಲ್ಲಿ ಎಷ್ಟು ಜವಾಬ್ದಾರಿಯುತವಾಗಿ ಇರಬೇಕು ಎಂಬುದನ್ನು ಹೇಳಿಕೊಟ್ಟಿದೆ’ ಎಂದಿದ್ದಾರೆ ಅವರು.

‘ರಸ್ತೆ ಅಪಘಾತದಲ್ಲಿ ಸಾಯಿ ತೇಜ್ ಗಂಭೀರವಾಗಿ ಗಾಯಗೊಂಡಿದ್ದನ್ನು ನೋಡಿ ನನಗೆ ಸಹಿಸಲಾಗಲಿಲ್ಲ. ಕೆಲ ದಿನ ಯಾರನ್ನೂ ಭೇಟಿಯಾಗಲಿಲ್ಲ. ಫೋನ್ ಕೂಡ ಸ್ವಿಚ್ ಆಫ್​ ಮಾಡಿದ್ದೆ. ನನ್ನ ಎಲ್ಲ ಬೈಕ್​​ಗಳನ್ನೂ ಮಾರಿದ್ದೇನೆ’ ಎಂದು ನವೀನ್ ಭಾವುಕರಾದರು.

ಇದನ್ನೂ ಓದಿ: ಚಿರಂಜೀವಿ ಕುಟುಂಬದಿಂದ ನೆರವು ಸಿಕ್ಕಿಲ್ಲ, ಸಹಾಯ ಮಾಡಿ ಹಿಂಸೆ ಅನುಭವಿಸುತ್ತಿದ್ದೇನೆ: ಸಾಯಿ ಧರಮ್ ಜೀವ ಉಳಿಸಿದ ಅಬ್ದುಲ್

ಸಾಯಿ ಧರಮ್ ತೇಜ್ ಅವರು ‘ವಿರೂಪಾಕ್ಷ’ ಸಿನಿಮಾ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಈ ಚಿತ್ರ ಮೂಡಿಬಂತು. ಇತ್ತೀಚೆಗೆ ಅವರ ನಟನೆಯ ‘ಬ್ರೋ’ ಸಿನಿಮಾ ಕೂಡ ರಿಲೀಸ್ ಆಯಿತು. ಪವನ್ ಕಲ್ಯಾಣ್ ಕೂಡ ಈ ಚಿತ್ರದಲ್ಲಿ ನಟಿಸಿದರು. ಅವರ ಹೊಸ ಸಿನಿಮಾಗಳ ಬಗ್ಗೆ ನಿರೀಕ್ಷೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?