AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗಿರುವುದಾಗಿ ಸುದ್ದಿ ವೈರಲ್: ಪ್ರತಿಕ್ರಿಯೆ ನೀಡಿದ ಸಾಯಿ ಪಲ್ಲವಿ

Sai Pallavi: ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಎಂಬ ಒಕ್ಕಣೆಯೊಂದಿಗೆ ಚಿತ್ರವೊಂದು ಇತ್ತೀಚೆಗೆ ಬಹಳ ವೈರಲ್ ಆಗಿದೆ. ಸುದ್ದಿಯ ಬಗ್ಗೆ ಸಾಯಿ ಪಲ್ಲವಿ ಮೌನಮುರಿದಿದ್ದಾರೆ.

ಮದುವೆ ಆಗಿರುವುದಾಗಿ ಸುದ್ದಿ ವೈರಲ್: ಪ್ರತಿಕ್ರಿಯೆ ನೀಡಿದ ಸಾಯಿ ಪಲ್ಲವಿ
ಸಾಯಿ ಪಲ್ಲವಿ
ಮಂಜುನಾಥ ಸಿ.
|

Updated on: Sep 22, 2023 | 5:42 PM

Share

ನಟಿ ಸಾಯಿ ಪಲ್ಲವಿಗೆ (Sai Pallavi) ದೊಡ್ಡ ಅಭಿಮಾನಿ ವರ್ಗವೇ ಇದೆ. ಎಲ್ಲ ವರ್ಗದ ಜನರು ಸಾಯಿ ಪಲ್ಲವಿಯನ್ನು ಮೆಚ್ಚಿಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಅವರ ನಟನೆ, ನೃತ್ಯ, ಅವರು ಕಾಣಿಸಿಕೊಳ್ಳುವ ಬಗೆ, ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಅವರಿಗೆ ಪ್ರತ್ಯೇಕ ಅಭಿಮಾನಿ ವರ್ಗವನ್ನೇ ಸೃಷ್ಟಿಸಿದೆ. ಇದರ ಜೊತೆಗೆ ತೆರೆಯ ಆಚೆಯೂ ಸಾಯಿ ಪಲ್ಲವಿ ವ್ಯಕ್ತಿತ್ವ ಹಲವರನ್ನು ಸೆಳೆದಿದೆ. ಆದರೆ ಇತ್ತೀಚೆಗೆ ಸಾಯಿ ಪಲ್ಲವಿಗೆ ವಿವಾಹವಾಗಿದೆ ಎಂದು ಸುದ್ದಿಯೊಂದು ವೈರಲ್ ಆಗಿತ್ತು. ಅದಕ್ಕೆ ಕಾರಣವಾಗಿದ್ದು ಒಂದು ಚಿತ್ರ.

ವೈರಲ್ ಆಗಿದ್ದ ಚಿತ್ರದಲ್ಲಿ ಸಾಯಿ ಪಲ್ಲವಿ ಹಾರ ಹಾಕಿಕೊಂಡು ವ್ಯಕ್ತಿಯೊಬ್ಬರ ಪಕ್ಕ ನಿಂತಿದ್ದರು. ಆ ವ್ಯಕ್ತಿಯ ಕೊರಳಲ್ಲೂ ಹಾರವಿತ್ತು. ‘ಸಾಯಿ ಪಲ್ಲವಿ ಬಣ್ಣವನ್ನು ನೋಡದೆ ಮನಸ್ಸನ್ನು ನೋಡಿ ಮದುವೆಯಾಗಿದ್ದಾರೆ’ ಎಂಬ ಒಕ್ಕಣೆಯೊಂದಿಗೆ ಆ ಚಿತ್ರ ವೈರಲ್ ಆಗಿತ್ತು. ಆ ಚಿತ್ರ ನೋಡಿದವರೆಲ್ಲ ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಎಂದೇ ನಂಬಿಕೊಂಡು ಚಿತ್ರವನ್ನು ಇನ್ನಷ್ಟು ವೈರಲ್ ಮಾಡಿದ್ದರು.

ಆದರೆ ಚಿತ್ರದ ಅಸಲಿ ಕತೆ ಬೇರೆಯೇ ಇದೆ. ವೈರಲ್ ಆಗಿದ್ದ ಚಿತ್ರ ಸಿನಿಮಾ ಒಂದರ ಮುಹೂರ್ತದ್ದು. ಮುಹೂರ್ತಕ್ಕೆ ಆಗಮಿಸಿದ್ದ ಸಾಯಿ ಪಲ್ಲವಿಗೆ ಹಾರ ಹಾಕಲಾಗಿತ್ತು, ಸಿನಿಮಾದ ನಿರ್ದೇಶಕ, ನಿರ್ಮಾಪಕರಿಗೂ ಹಾರ ಹಾಕಲಾಗಿತ್ತು. ಎಲ್ಲರೂ ಒಟ್ಟಿಗೆ ನಿಂತು ಚಿತ್ರಗಳನ್ನು ತೆಗೆಸಿಕೊಂಡಿದ್ದರು. ಚಿತ್ರದಲ್ಲಿ ನಿರ್ದೇಶಕರ ಕೈಯಲ್ಲಿ ಕ್ಲ್ಯಾಪ್ ಬೋರ್ಡ್ ಸಹ ಇತ್ತು. ಆದರೆ ಯಾರೋ ಕಿಡಿಗೇಡಿಗಳು ಸಾಯಿ ಪಲ್ಲವಿ ಹಾಗೂ ನಿರ್ದೇಶಕರಿಬ್ಬರ ಚಿತ್ರವನ್ನೇ ಕ್ರಾಪ್ ಮಾಡಿ. ಇಬ್ಬರೂ ಮದುವೆ ಆಗಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೊಂಡಿದ್ದರು. ಆ ಸುದ್ದಿ ಸಖತ್ ವೈರಲ್ ಆಗಿತ್ತು.

ಇದನ್ನೂ ಓದಿ:ಹೇಳದೇ ಕೇಳದೇ ಮದುವೆ ಆದ್ರಾ ಸಾಯಿ ಪಲ್ಲವಿ? ವೈರಲ್ ಫೋಟೋ ಹಿಂದಿದೆ ಬೇರೆಯದೇ ಕಥೆ

ಇದೀಗ ಈ ಬಗ್ಗೆ ಟ್ವೀಟ್ಟರ್​ನಲ್ಲಿ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿರುವ ಸಾಯಿ ಪಲ್ಲವಿ, ”ಸಾಮಾನ್ಯವಾಗಿ, ನಾನು ವದಂತಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ನನಗೆ ಭಯವೂ ಇಲ್ಲ. ಆದರೆ ಆ ಸುದ್ದಿಗಳು ನನ್ನ ಕುಟುಂಬವೇ ಆಗಿರುವ ಸ್ನೇಹಿತರನ್ನು ಒಳಗೊಂಡು ಅವರ ಮೇಲೆ ಪರಿಣಾಮ ಬೀರುತ್ತಿದೆ ಎಂದಾಗ ನಾನು ಮಾತನಾಡಲೇ ಬೇಕಾಗಿದೆ. ನನ್ನ ಸಿನಿಮಾದ ಪೂಜಾ ಸಮಾರಂಭದ ಚಿತ್ರವನ್ನು ಉದ್ದೇಶಪೂರ್ವಕವಾಗಿ ಕ್ರಾಪ್ ಮಾಡಿ ವೈರಲ್ ಮಾಡಲಾಗುತ್ತಿದೆ. ಹಣ ಬಲದ ಮೂಲಕ ಅನಾಮಿಕ ಖಾತೆಗಳನ್ನು ಬಳಸಿ ಕೆಟ್ಟ ಉದ್ದೇಶದಿಂದ ಆ ಚಿತ್ರವನ್ನು ವೈರಲ್ ಮಾಡಲಾಗಿದೆ. ನನ್ನ ಕೆಲಸದ ಬಗ್ಗೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಬೇಕಾದ ಸಮಯದಲ್ಲಿ, ಈ ರೀತಿಯ ಅನವಶ್ಯಕ ವಿಷಯಗಳ ಬಗ್ಗೆ ವಿವರಿಸುವ ಸನ್ನಿವೇಶ ಸೃಷ್ಟಿಯಾಗಿರುವ ಬಗ್ಗೆ ಬೇಸರವಿದೆ. ಈ ರೀತಿಯ ಅಸ್ವಸ್ಥತೆಯನ್ನು ಉಂಟುಮಾಡುವುದು ಬಹಳ ಹೀನಾಯ” ಎಂದಿದ್ದಾರೆ.

ವೈರಲ್ ಆಗಿರುವ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆಗೆ ಇರುವ ವ್ಯಕ್ತಿಯ ಹೆಸರು ರಾಜಕುಮಾರ ಪೆರಿಯಸ್ವಾಮಿ. ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್ ನಟಿಸುತ್ತಿರುವ ಹೊಸ ಸಿನಿಮಾವನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ತೆಗೆದ ಚಿತ್ರವನ್ನು ಬೇರೆ ಅರ್ಥ ಬರುವ ರೀತಿ ಕ್ರಾಪ್ ಮಾಡಿ ವೈರಲ್ ಮಾಡಲಾಗಿದೆ. ಸಾಯಿ ಪಲ್ಲವಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಕಾರ್ತಿಕೇಯನ್ ಜೊತೆಗಿನ ಸಿನಿಮಾ ಬಳಿಕ ತೆಲುಗಿನ ಹೊಸ ಸಿನಿಮಾದಲ್ಲಿ ನಟಸಲಿದ್ದು, ಸಿನಿಮಾಕ್ಕೆ ನಾಗ ಚೈತನ್ಯ ನಾಯಕ. ಅಲ್ಲು ಅರವಿಂದ್ ನಿರ್ಮಾಪಕ. ಆ ಬಳಿಕ ತಮಿಳಿನ ಹೊಸ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ