ಹೇಳದೇ ಕೇಳದೇ ಮದುವೆ ಆದ್ರಾ ಸಾಯಿ ಪಲ್ಲವಿ? ವೈರಲ್ ಫೋಟೋ ಹಿಂದಿದೆ ಬೇರೆಯದೇ ಕಥೆ
‘ಸಾಯಿ ಪಲ್ಲವಿ ಸೈಲೆಂಟ್ ಆಗಿ ಮದುವೆ ಆದರು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹರಿಬಿಟ್ಟು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅನೇಕರು ಇದನ್ನು ನಂಬಿಕೊಂಡಿದ್ದಾರೆ. ಆದರೆ, ಇದು ಸಿನಿಮಾ ಮುಹೂರ್ತ ಸಂದರ್ಭದಲ್ಲಿ ತೆಗೆದ ಫೋಟೋ ಎಂಬುದನ್ನು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ನಟಿ ಸಾಯಿ ಪಲ್ಲವಿ (Sai Pallavi) ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೊಸ ಹೊಸ ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರ ಫೋಟೋ ಒಂದು ವೈರಲ್ ಆಗಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸಾಯಿ ಪಲ್ಲವಿ ಅವರು ಹಾರ ಹಾಕಿಕೊಂಡು ನಿರ್ದೇಶಕನ ಜೊತೆ ನಿಂತಿದ್ದರು. ಅವರಿಗೆ ಮದುವೆ ಆಗಿದೆ ಎಂದು ಎಲ್ಲರೂ ಭಾವಿಸಿದರು. ಆದರೆ, ಈ ಫೋಟೋದ ಅಸಲಿಯತ್ತು ಬೇರೆಯದೇ ಇದೆ. ಅಸಲಿಗೆ ಸಾಯಿ ಪಲ್ಲವಿ ಮದುವೆ ಆಗಿಲ್ಲ. ಯಾರೋ ಕಿಡಿಗೇಡಿಗಳು ಮಾಡಿದ ಕಿತಾಪತಿ ಇದು.
ಸಾಯಿ ಪಲ್ಲವಿ ಹಾಗೂ ಶಿವ ಕಾರ್ತಿಕೇಯ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರಾಜ್ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ #SK21 ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಈ ವೇಳೆ ಎಲ್ಲರೂ ಮಾಲೆ ಹಾಕಿ ನಿಂತಿದ್ದರು. ಕೆಲವು ಕಿಡಿಗೇಡಿಗಳು ಸಾಯಿ ಪಲ್ಲವಿ ಹಾಗೂ ರಾಜ್ಕುಮಾರ್ ಅವರ ಫೋಟೋನ ಕ್ರಾಪ್ ಮಾಡಿ ವೈರಲ್ ಮಾಡಿದ್ದಾರೆ.
‘ಸಾಯಿ ಪಲ್ಲವಿ ಸೈಲೆಂಟ್ ಆಗಿ ಮದುವೆ ಆದರು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹರಿಬಿಟ್ಟು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅನೇಕರು ಇದನ್ನು ನಂಬಿಕೊಂಡಿದ್ದಾರೆ. ಆದರೆ, ಇದು ಸಿನಿಮಾ ಮುಹೂರ್ತ ಸಂದರ್ಭದಲ್ಲಿ ತೆಗೆದ ಫೋಟೋ ಎಂಬುದನ್ನು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಪೂಜೆಯ ಸಂದರ್ಭದಲ್ಲಿ ಈ ರೀತಿ ಮಾಲೆ ಧರಿಸೋದು ತಮಿಳುನಾಡಿನ ಸಂಪ್ರದಾಯದಲ್ಲಿದೆ. ಈ ಕಾರಣದಿಂದ ಎಲ್ಲರೂ ಮಾಲೆ ಧರಿಸಿದ್ದರು.
ಇದನ್ನೂ ಓದಿ:ಸಾಯಿ ಪಲ್ಲವಿ ಹೊಸ ಸಿನಿಮಾ ಘೋಷಣೆ: ನಾಗ ಚೈತನ್ಯ ಅದೃಷ್ಟ ಬದಲಾಗುತ್ತಾ?
ಸಾಯಿ ಪಲ್ಲವಿ ಟ್ಯಾಲೆಂಟೆಡ್ ಹೀರೋಯಿನ್. ಸಿನಿಮಾ ಬಗ್ಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ‘ಫಿದಾ’, ‘ಶ್ಯಾಮ್ ಸಿಂಗ ರಾಯ್’ ಮೊದಲಾದ ಸಿನಿಮಾಗಳಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಕಳೆದ ವರ್ಷ ಅವರ ನಟನೆಯ ‘ಗಾರ್ಗಿ’ ಸಿನಿಮಾ ತಮಿಳು, ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಸದ್ಯ ಶಿವ ಕಾರ್ತಿಕೇಯ ನಟನೆಯ ಸಿನಿಮಾ ಹಾಗೂ ನಾಗ ಚೈತನ್ಯ ಅಭಿನಯದ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




