ಒಂದೇ ವೇದಿಕೆ ಮೇಲೆ ಮಾಜಿ ಅತ್ತೆ-ಸೊಸೆ; ಸಮಂತಾ ಮಾತಿಗೆ ಅಮಲಾಗೆ ಖುಷಿಯೋ ಖುಷಿ
Samantha Ruth Prabhu: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ನಂತರ, ಅವರ ಮಾಜಿ ಅತ್ತೆ ಅಮಲಾ ಅಕ್ಕಿನೇನಿ ಜೊತೆ ಸಮಂತಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮಂತಾ ತಮ್ಮ 15 ವರ್ಷಗಳ ಚಿತ್ರರಂಗದ ಅನುಭವವನ್ನು ಹಂಚಿಕೊಂಡಿದ್ದಾರೆ. ಅಮಲಾ ಅವರ ಸಂತೋಷದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.

ಸಮಂತಾ (Samantha) ಅವರು ವಿಚ್ಛೇದನ ಪಡೆದು ಹಲವು ಸಮಯ ಕಳೆದಿದೆ. ಇದಾದ ಬಳಿಕ ನಾಗ ಚೈತನ್ಯ ಹಾಗೂ ಸಮಂತಾ ಎದುರುಬದುರಾಗಿಲ್ಲ. ಆ ರೀತಿಯ ಪರಿಸ್ಥಿತಿ ಬರದಂತೆ ಅವರು ನೋಡಿಕೊಂಡಿದ್ದಾರೆ. ಈಗ ಸಮಂತಾ ಹಾಗೂ ಅವರ ಮಾಜಿ ಅತ್ತೆ ಅಮಲಾ ಅಕ್ಕಿನೇನಿ ಒಂದೇ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮೊದಲೇನು ಅಲ್ಲ. ಅನೇಕ ಬಾರಿ ಈ ರೀತಿ ಆಗಿದ್ದು ಇದೆ. ಈಗ ಇವರು ಮತ್ತೊಮ್ಮೆ ಒಂದೇ ಕಡೆ ಬಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸಮಂತಾ ಹಾಗೂ ನಾಗ ಚೈತನ್ಯ 2021ರಲ್ಲಿ ಬೇರೆ ಆದರು. ಬೇರೆ ಆದ ಬಳಿಕ ನಾವು ಒಳ್ಳೆಯ ಗೆಳೆಯರಾಗಿ ಇರುತ್ತೇವೆ ಎಂದು ಹೇಳಿದ್ದರು. ಆದರೆ, ಆ ರೀತಿ ಆಗೋಕೆ ಸಾಧ್ಯವೇ ನೀವೇ ಹೇಳಿ. ಇಬ್ಬರೂ ಬೇರೆ ಆಗಿದ್ದು, ಮತ್ತೆ ಒಬ್ಬರ ಮುಖವನ್ನು ಒಬ್ಬರು ನೋಡೋಕೆ ಇಷ್ಟಪಟ್ಟುಕೊಳ್ಳುತ್ತಿಲ್ಲ. ಆ ರೀತಿಯ ಪರಿಸ್ಥಿತಿಯೂ ಬಂದಿಲ್ಲ. ಆದರೆ, ನಾಗ ಚೈತನ್ಯ ಕುಟುಂಬದವರನ್ನು ಭೇಟಿ ಮಾಡಲು ಸಮಂತಾಗೆ ಯಾವುದೇ ಮುಜುಗರ ಇಲ್ಲ. ಜೀ ತೆಲುಗು ಅವಾರ್ಡ್ ಕಾರ್ಯಕ್ರಮದಲ್ಲಿ ಇವರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡರು.
ಸಮಂತಾ ಅವರು ಚಿತ್ರರಂಗದಲ್ಲಿ 15 ವರ್ಷ ಕಳೆದಿದ್ದಾರೆ. ಈ ವೇಳೆ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅಭಿಮಾನಿಗಳು ತಮ್ಮ ಜೊತೆ ಇದ್ದಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಇದಕ್ಕೆ ಅಮಲಾ ಅವರು ಪ್ರತಿಕ್ರಿಯೆ ನೀಡಿದ್ದು ಇದು ವೈರಲ್ ಆಗಿದೆ.
ಇದನ್ನೂ ಓದಿ:ಅವರನ್ನು ನಂಬ ಬೇಡಿ; ಸಮಂತಾ ಅಭಿಮಾನಿಗಳಿಗೆ ಕಿವಿಮಾತು
‘ತೆಲುಗು ಇಂಡಸ್ಟ್ರಿ ನನಗೆ ಎಲ್ಲವನ್ನೂ ನೀಡಿದೆ. ಇದುವೇ ನನ್ನ ಕರ್ಮಭೂಮಿ’ ಎಂದು ಹೇಳುವಾಗ ಅಮಲಾ ಅವರು ಖುಷಿಯಿಂದ ಚಪ್ಪಾಳೆ ತಟ್ಟಿದ್ದಾರೆ. ಸಮಂತಾ ಬಗ್ಗೆ ಅವರಿಗೆ ಹೆಮ್ಮೆ ಇದೆ ಎಂಬುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ ಎನ್ನಬಹುದು.
ನಾಗ ಚೈತನ್ಯ ಅವರು ವಿಚ್ಛೇದನದ ಬಳಿಕ ಶೋಭಿತಾ ದುಲಿಪಾಲ್ ಅವರನ್ನು ವಿವಾಹ ಆಗಿದ್ದಾರೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಸಮಂತಾ ಅವರು ನಿರ್ದೇಶಕ ರಾಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರವನ್ನು ಅವರ ಮ್ಯಾನೇಜರ್ ಅವರು ತಳ್ಳಿ ಹಾಕಿದ್ದಾರೆ. ಸಮಂತಾ ಅವರು ನಟನೆಯ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ ಅನ್ನೋದು ವಿಶೇಷ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



