ಸಮಂತಾ ಅವರ ಈ ಐಷಾರಾಮಿ ಮನೆಯ ಬೆಲೆ ಎಷ್ಟು ಕೋಟಿ ರೂಪಾಯಿ?
ಹೈದರಾಬಾದ್ನ ಜುಬ್ಲಿ ಹಿಲ್ಸ್‌ನ ಸಮಂತಾ ಅವರ ಐಷಾರಾಮಿ ಮನೆ ಇದೆ. ಈ ಮನೆಗೆ ವಿಶಾಲವಾದ ಗಾರ್ಡನ್ ಕೂಡ ಇದೆ. ಇದರ ಬೆಲೆ ಕೇಳಿದರೆ ಎಲ್ಲರಿಗೂ ಒಮ್ಮೆ ಶಾಕ್ ಆಗೋದು ಗ್ಯಾರಂಟಿ.
ಸೌತ್ ಇಂಡಸ್ಟ್ರಿಯ ಟಾಪ್ ಹೀರೋಯಿನ್ಗಳ ಸಾಲಿನಲ್ಲಿ ಸಮಂತಾ (Samantha Ruth Prabhu) ಕೂಡ ಇದ್ದಾರೆ. ‘ಏ ಮಾಯ ಚೇಸಾವೆ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ಅವರು ಈಗ ಭಾರತಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಕೋಟ್ಯಂತ ಮಂದಿ ಹಿಂಬಾಲಕರು ಇದ್ದಾರೆ. ವಿಭಿನ್ನ ಕಥಾಹಂದರದ ಆಯ್ಕೆಯ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ನಟನೆಗೆ ವಿಮರ್ಶಕರಿಂದ ಮೆಚ್ಚುಗೆ ಸಿಗುತ್ತದೆ. ಅವರು ಹೈದರಾಬಾದ್ನಲ್ಲಿ ಮನೆ ಹೊಂದಿದ್ದಾರೆ. ಇದರ ಬೆಲೆ ಕೇಳಿದರೆ ನೀವು ಅಚ್ಚರಿಪಡೋದು ಗ್ಯಾರಂಟಿ.
ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದು ಬಹಳ ಸಮಯ ಕಳೆದಿದೆ. ಸಮಂತಾ ಅವರು ಸದ್ಯ ಮಯೋಸಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಜೊತೆಗೆ ಸಮಾಜದಲ್ಲಿ ಎದುರಾಗುತ್ತಿರುವ ನೆಗೆಟಿವ್ ಕಮೆಂಟ್ಗಳನ್ನು ಅವರು ಎದುರಿಸಬೇಕಿದೆ. ಅವರು ಇತ್ತೀಚೆಗೆ ಚಿಕಿತ್ಸೆಗಾಗಿ ಭೂತಾನ್ಗೆ ತೆರಳಿದ್ದರು. ಇತ್ತೀಚೆಗೆ ಸಮಂತಾ ಹೈದರಾಬಾದ್ಗೆ ಆಗಮಿಸಿದ್ದಾರೆ.
ಹೈದರಾಬಾದ್ನ ಜುಬ್ಲಿ ಹಿಲ್ಸ್‌ನ ಸಮಂತಾ ಅವರ ಐಷಾರಾಮಿ ಮನೆ ಇದೆ. ಈ ಮನೆಗೆ ವಿಶಾಲವಾದ ಗಾರ್ಡನ್ ಕೂಡ ಇದೆ. ಇದರ ಬೆಲೆ ಸುಮಾರು 100 ಕೋಟಿ ರೂಪಾಯಿ ಎನ್ನಲಾಗಿದೆ. ಉತ್ತಮವಾಗಿ ಅಲಂಕರಿಸಿದ ಒಳಾಂಗಣ ವಿನ್ಯಾಸವು ಮನಸ್ಸಿಗೆ ಸಾಕಷ್ಟು ಶಾಂತಿಯನ್ನು ತರುತ್ತದೆ. ಆ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಮನೆಯಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: ಮೈ ಕೈ ನೋವು ಇದ್ದರೂ ವರ್ಕೌಟ್ ಮಾಡಿದ ಸಮಂತಾ ರುತ್ ಪ್ರಭು; ಅಭಿಮಾನಿಗಳಿಗೆ ಚಿಂತೆ
ಇತ್ತೀಚೆಗಷ್ಟೇ ‘ಖುಷಿ’ ಚಿತ್ರದ ಮೂಲಕ ಸಮಂತಾ ಯಶಸ್ಸು ಕಂಡರು. ‘ಸಿಟಾಡೆಲ್’ ವೆಬ್ ಸರಣಿಯ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಇದರಲ್ಲಿ ಬಾಲಿವುಡ್ ಹೀರೋ ವರುಣ್ ಧವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ‘ಫ್ಯಾಮಿಲಿ ಮ್ಯಾನ್’ ಸೀರೀಸ್ ನಿರ್ದೇಶಕರಾದ ರಾಜ್ ಹಾಗೂ ಡಿಕೆ ‘ಸಿಟಾಡೆಲ್’ ವೆಬ್ ಸೀರೀಸ್ ನಿರ್ದೇಶನ ಮಾಡಿದ್ದಾರೆ. ಈ ಸರಣಿಯು ಶೀಘ್ರದಲ್ಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಕಾಣಲಿದೆ. ಉಳಿದಂತೆ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Tue, 5 December 23