AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ ಜನ್ಮದಿನ: ನಟಿಯ ವರ್ಷದ ಗಳಿಕೆ, ಒಟ್ಟೂ ಆಸ್ತಿ ಎಷ್ಟು?

Samantha Birthday: ಸಮಂತಾ ಅವರ 38ನೇ ಜನ್ಮದಿನದಂದು, ಅವರ ಒಟ್ಟು ಆಸ್ತಿ, ವಾರ್ಷಿಕ ಗಳಿಕೆ ಮತ್ತು ಯಶಸ್ವಿ ವೃತ್ತಿ ಜೀವನದ ಬಗ್ಗೆ ತಿಳಿದುಕೊಳ್ಳೋಣ. ಅವರು 101 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ ಮತ್ತು ಪ್ರತಿ ವರ್ಷ ಬ್ರ್ಯಾಂಡ್ ಪ್ರಚಾರದಿಂದ 8 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. 'ಯೇ ಮಾಯ ಚೇಸಾವೆ', 'ಓ ಬೇಬಿ' ಸಿನಿಮಾ, 'ದಿ ಫ್ಯಾಮಿಲಿ ಮ್ಯಾನ್ 2' ರೀತಿಯ ವೆಬ್ ಸರಣಿಗಳನ್ನು ನೀಡಿದ್ದಾರೆ.

ಸಮಂತಾ ಜನ್ಮದಿನ: ನಟಿಯ ವರ್ಷದ ಗಳಿಕೆ, ಒಟ್ಟೂ ಆಸ್ತಿ ಎಷ್ಟು?
ಸಮಂತಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Apr 28, 2025 | 10:46 AM

Share

ನಟಿ ಸಮಂತಾ (Samantha) ಅವರು ಇಂದು (ಏಪ್ರಿಲ್ 28) ತಮ್ಮ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಗೌತಮ್ ವಾಸುದೇವ್ ನಿರ್ದೇಶನದ ‘ವಿನ್ನೈತಾಂಡಿ ವರರುವಾಯಾ’ ಚಿತ್ರದ ಮೂಲಕ 2010ರಲ್ಲಿ ಬಣ್ಣದ ಲೋಕ್ಕೆ ಬಂದರು. ಅವರಿಗೆ ಈ ಚಿತ್ರದಲ್ಲಿ ದೃಶ್ಯಗಳು ಕಡಿಮೆ ಸಿಕ್ಕವು. ಆದಾಗ್ಯೂ ಜನರ ಮನವನ್ನು ಅವರು ಗೆದ್ದರು. ಅದೇ ವರ್ಷ ರಿಲೀಸ್ ಆದ ‘ಯೇ ಮಾಯ ಚೇಸಾವೆ’ ಸಿನಿಮಾ ಅವರ ವೃತ್ತಿ ಜೀವನವನ್ನೇ ಬದಲಿಸಿತು. ಈ ಚಿತ್ರದಲ್ಲಿ ಅವರ ಮಾಜಿ ಪತಿ ನಾಗ ಚೈತನ್ಯ ನಟಿಸಿದ್ದರು. ಅವರ ಜನ್ಮದಿನದ ಪ್ರಯುಕ್ತ ಅವರ ನೆಟ್​ವರ್ತ್​ ಹಾಗೂ ಅವರ ವೃತ್ತಿ ಜೀವನದ ಸೂಪರ್ ಹಿಟ್ ಚಿತ್ರಗಳ ಬಗ್ಗೆ ನೋಡೋಣ.

ಸಮಂತಾ ರುತ್ ಪ್ರಭು ಅವರು 101 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರು ಪ್ರತಿ ವರ್ಷ ಬ್ರ್ಯಾಂಡ್​ಗಳ ಪ್ರಚಾರದಿಂದ 8 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಅವರು ವಿಚ್ಛೇನದ ಬಳಿಕ ಪತಿಯಿಂದ ಅವರು ಯಾವುದೇ ಜೀವನಾಂಶ ಪಡೆದುಕೊಂಡಿಲ್ಲ.

ಸಮಂತಾ ಪ್ರಭು ಹಲವು ಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ‘ಓ ಬೇಬಿ’, ‘ಖುಷಿ’, ‘ಈಗ’ ರೀತಿಯ ಸಿನಿಮಾಗಳಲ್ಲಿ ಭಿನ್ನ ಪಾತ್ರ ಮಾಡಿದ್ದಾರೆ. ‘ರಂಗಸ್ಥಳಂ’, ‘ಜಾನು’, ‘ಯಶೋಧ’ ರೀತಿಯ ಸಿನಿಮಾಗಳನ್ನು ಮಾಡಿದ್ದರೆ. ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ
Image
ಇಡಿ ವಿಚಾರಣೆಗೆ ಹಾಜರಿ ಹಾಕಲ್ಲ ಮಹೇಶ್ ಬಾಬು; ಕಾರಣ ಇಲ್ಲಿದೆ
Image
ಉಗ್ರರ ಉದ್ದೇಶ ಹಾಳು ಮಾಡಲು ಕಾಶ್ಮೀರಕ್ಕೆ ಹೋದ ನಟ ಅತುಲ್ ಕುಲಕರ್ಣಿ
Image
ನಾನಿಗೆ ಕನ್ನಡ ಪಾಠ ಮಾಡಿದ ಶ್ರೀನಿಧಿ ಶೆಟ್ಟಿ; ಎಷ್ಟು ಕ್ಯೂಟ್ ನೋಡಿ
Image
ಮುಂಜಾನೆ ಎದ್ದು ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್

ಸಮಂತಾ ಅವರು ‘ರಕ್ತ ಬ್ರಹ್ಮಾಂಡ’ ಹೆಸರಿನ ವೆಬ್ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಆದಿತ್ಯ ರಾಯ್ ಕಪೂರ್, ವಮಿಕಾ ಗಬ್ಬಿ ಮೊದಲಾದವರು ನಟಿಸಿದ್ದು, ರಾಜ್ ಮತ್ತು ಡಿಕೆ ಇದನ್ನು ನಿರ್ದೇಶಿಸುತ್ತಿದ್ದಾರೆ. ಈ ಸರಣಿ ಮೇಲೆ ನಿರೀಕ್ಷೆ ಇದೆ. ಸಮಂತಾ ಅವರು ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕಿ ಕೂಡ ಹೌದು.

ಇದನ್ನೂ ಓದಿ: ಹೊಸ ಬಾಯ್​ಫ್ರೆಂಡ್ ಜೊತೆ ತಿರುಪತಿಗೆ ಬಂದು ಪೂಜೆ ಸಲ್ಲಿಸಿದ ಸಮಂತಾ

ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋದಾದರೆ ಅವರು ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದರು. ಈಗ ಅವರು ನಿರ್ದೇಶಕ ರಾಜ್ ಜೊತ್ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಅವರನ್ನೇ ವಿವಾಹ ಆದರೂ ಅಚ್ಚರಿ ಏನಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅವರು ಸಾಕಷ್ಟು ಬಾರಿ ಸುತ್ತಾಟ ಮಾಡಿರೋದು ಕಂಡು ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:45 am, Mon, 28 April 25

ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ