‘9 ಸುಳ್ಳು ಕಥೆಗಳು’ ಹೇಳ್ತಾರೆ 100ಕ್ಕೂ ಹೆಚ್ಚು ಕಲಾವಿದರು; ಇದರಲ್ಲಿದೆ ಹಲವು ವಿಶೇಷ

9 Sullu Kathegalu: ‘9 ಸುಳ್ಳು ಕಥೆಗಳು’ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಇತ್ತೀಚೆಗೆ​ ಬಿಡುಗಡೆಗೊಳಿಸಲಾಗಿದೆ. ಆ ಮೂಲಕ ಸಿನಿಪ್ರಿಯರಲ್ಲಿ ಕೌತುಕ ಮೂಡಿಸುವ ಪ್ರಯತ್ನ ಮಾಡಲಾಗಿದೆ.

‘9 ಸುಳ್ಳು ಕಥೆಗಳು’ ಹೇಳ್ತಾರೆ 100ಕ್ಕೂ ಹೆಚ್ಚು ಕಲಾವಿದರು; ಇದರಲ್ಲಿದೆ ಹಲವು ವಿಶೇಷ
‘9 ಸುಳ್ಳು ಕಥೆಗಳು’ ಸಿನಿಮಾ ತಂಡ
TV9kannada Web Team

| Edited By: Madan Kumar

Jul 27, 2022 | 7:15 AM

ಚಿತ್ರರಂಗದಲ್ಲಿ ಒಂದಿಲ್ಲೊಂದು ಪ್ರಯೋಗ ನಡೆಯುತ್ತಲೇ ಇರುತ್ತದೆ. ವಿಶೇಷವಾದ ಶೀರ್ಷಿಕೆ ಮೂಲಕ ಗಮನ ಸೆಳೆಯುವ ಪ್ರಯತ್ನವೂ ಆಗುತ್ತಿರುತ್ತದೆ. ಆ ಕಾರಣದಿಂದ ‘9 ಸುಳ್ಳು ಕಥೆಗಳು’ (9 Sullu Kathegalu) ಸಿನಿಮಾ ಕೌತುಕ ಮೂಡಿಸಿದೆ. ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. 100ಕ್ಕೂ ಅಧಿಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬುದು ವಿಶೇಷ. ಟ್ರೇಲರ್​ಗೆ ಶಿವರಾಜ್​ಕುಮಾರ್​ (Shivarajkumar) ಅವರು ಧ್ವನಿ ನೀಡಿದ್ದಾರೆ. ಚಿತ್ರದ ಹಾಡೊಂದನ್ನು ರಿಷಬ್​ ಶೆಟ್ಟಿ (Rishab Shetty) ಹಾಡಿದ್ದಾರೆ. ಹೀಗೆ ಅನೇಕ ವಿಶೇಷತೆಗಳನ್ನು ಇಟ್ಟುಕೊಂಡು ‘9 ಸುಳ್ಳು ಕಥೆಗಳು’ ಸಿನಿಮಾ ಬರುತ್ತಿದೆ. ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕೃಷ್ಣ ಹೆಬ್ಬಾಳೆ, ಸಕೃತ ವಾಗ್ಳೆ, ಶ್ರೀನಿವಾಸ್​ ಪ್ರಭು, ಸುನೇತ್ರಾ ಪಂಡಿತ್, ಸುಪ್ರಿತಾ ಶೆಟ್ಟಿ, ಸುಂದರ್ ವೀಣಾ, ಕರಿಸುಬ್ಬು, ನಂದಗೋಪಾಲ್, ಲಕ್ಷ್ಮೀ ಚಂದ್ರಶೇಖರ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

‘9 ಸುಳ್ಳು ಕಥೆಗಳು’ ಸಿನಿಮಾಗೆ ಮಂಜುನಾಥ್​ ಮುನಿಯಪ್ಪ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೂಡ ಅವರದ್ದೇ. ರಂಗಭೂಮಿಯಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅವರಿಗೆ ಇದು ಮೊದಲ ಸಿನಿಮಾ ಪ್ರಯತ್ನ. ‘ಇದೊಂದು ನೈಜ ಘಟನೆ ಆಧಾರಿತ ಚಿತ್ರ. ನವರಸಗಳನ್ನು ಆಧರಿಸಿ ಈ ಚಿತ್ರದ ಕಥೆಯನ್ನು ಸಿದ್ಧ ಮಾಡಿಕೊಂಡೆ‌‌. ನಂತರ ನಿರ್ಮಾಪಕರಿಗೆ ಹುಡುಕಾಟ ನಡೆಸಿದೆ. ಆದರೆ ಯಾರೂ ಸಿಗಲಿಲ್ಲ. ನನ್ನ ಸ್ನೇಹಿತ ಸೂರ್ಯ ನಾರಾಯಣ್ ಮೊದಲು ದೊಡ್ಡ ಮೊತ್ತದ ಹಣ ಕೊಟ್ಟು ಈ ಚಿತ್ರಕ್ಕೆ ಚಾಲನೆ ನೀಡಿದರು. ನಂತರ ಸಾಕಷ್ಟು ಗೆಳೆಯರು ನನ್ನ ಜೊತೆಯಾದರು’ ಎಂದು ಸಿನಿಮಾ ಸೆಟ್ಟೇರಿದ ಬಗೆಯನ್ನು ನೆನಪಿಸಿಕೊಂಡಿದ್ದಾರೆ ಮಂಜುನಾಥ್​ ಮುನಿಯಪ್ಪ.

ಈ ಸಿನಿಮಾದ 6 ಗೀತೆಗಳಿಗೆ ಪ್ರವೀಣ್-ಪ್ರದೀಪ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಕ್ರಮ್ ವಸಿಷ್ಠ, ಸತೀಶ್ ಬೆಲ್ಲೂರು ಹಾಗೂ ಕಿರಣ್ ವಿಪ್ರ ಸಾಹಿತ್ಯ ಬರೆದಿದ್ದಾರೆ. ಸಂತ ಶಿಶುನಾಳ ಶರೀಫರ ಒಂದು ಹಾಡನ್ನೂ ಬಳಸಿಕೊಳ್ಳಲಾಗಿದೆ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾರಿಜಾಶ್ರೀ, ಶಶಿಧರ್ ಕೋಟೆ, ಚಿಂತನ್ ವಿಕಾಸ್ ಮತ್ತು ರಿಷಬ್​ ಶೆಟ್ಟಿ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ನಟ ವಿನಾಯಕ ಜೋಶಿ ಅವರು ಈ ಚಿತ್ರದಲ್ಲಿ ಸಾಹಿತ್ಯ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಪರಮೇಶ್​ ಸಿ.ಎಂ. ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನ ಮಾಡಿದ್ದಾರೆ. ಇತ್ತೀಚೆಗೆ ‘9 ಸುಳ್ಳು ಕಥೆಗಳು’ ಚಿತ್ರದ ಹಾಡು ಮತ್ತು ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಸಿನಿಪ್ರಿಯರಲ್ಲಿ ಕೌತುಕ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada