‘ಗಂಗಿ ಗಂಗಿ’ ಹಾಡಿನ ಮೂಲಕ ಗಮನ ಸೆಳೆದ ಉತ್ತರ ಕರ್ನಾಟಕ ಪ್ರತಿಭೆ ಬಾಳು ಬೆಳಗುಂದಿ
ಉತ್ತರ ಕರ್ನಾಟಕದ ಪ್ರತಿಭಾನ್ವಿತ ಗಾಯಕಿ ಬಾಳು ಬೆಳಗುಂದಿ ಅವರು "ಬ್ರಾಟ್" ಚಿತ್ರದ "ಗಂಗಿ ಗಂಗಿ" ಹಾಡಿನ ಮೂಲಕ ಗಮನ ಸೆಳೆದಿದ್ದಾರೆ. ಸರಿಗಮಪದಲ್ಲಿ ಖ್ಯಾತಿ ಪಡೆದ ಬಾಳು ಅವರ ಈ ಹಾಡು ಪಕ್ಕಾ ಉತ್ತರ ಕರ್ನಾಟಕ ಶೈಲಿಯಲ್ಲಿದ್ದು. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿದೆ. ಈ ಹಾಡು ಈಗಾಗಲೇ ಜನಪ್ರಿಯವಾಗಿದ್ದು, ಉತ್ತರ ಕರ್ನಾಟಕದ ಜನರ ಮನಗೆದ್ದಿದೆ.

ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕ ಪ್ರತಿಭೆಗಳಿಗೆ ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಒಳ್ಳೆಯ ವೇದಿಕೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಸಾಕಷ್ಟು ವೇದಿಕೆಗಳಲ್ಲಿ ಉತ್ತರ ಕರ್ನಾಟಕ ಪ್ರತಿಭೆಗಳು ಗಮನ ಸೆಳೆದ ಉದಾಹರಣೆ ಇದೆ. ಈಗ ಉತ್ತರ ಕರ್ನಾಟಕದ್ದೇ ಪ್ರತಿಭೆಯಾದ ಬಾಳು ಬೆಳಗುಂದಿ (Balu Belagundi) ಅವರು ಸಿನಿಮಾಗಾಗಿ ಹಾಡೊಂದನ್ನು ಹಾಡಿರುವುದು ವಿಶೇಷ. ‘ಬ್ರ್ಯಾಟ್’ ಚಿತ್ರದ ‘ಗಂಗಿ ಗಂಗಿ’ ಹಾಡನ್ನು ಅವರು ಹಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರು ‘ಬ್ರ್ಯಾಟ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ಗೂ ಮೊದಲೇ ಸಾಕಷ್ಟು ಗಮನ ಸೆಳೆಯುತ್ತಾ ಇದೆ. ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಬಳಿಕ ನಿರ್ದೇಶಕ ಶಶಾಂಕ್ ಅವರು ಮತ್ತೊಮ್ಮೆ ಕೃಷ್ಣ ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕೆಲಸವನ್ನು ಈ ಚಿತ್ರದಲ್ಲಿಯೂ ಮುಂದುವರಿಸಿದ್ದಾರೆ.
ಗಂಗಿ ಗಂಗಿ ಹಾಡು
ಈ ಮೊದಲು ‘ಬ್ರ್ಯಾಟ್ ಚಿತ್ರದ ಹಾಡನ್ನು ‘ನಾನೇ ನೀನಂತೆ..’ ಹಾಡಿನ ಕನ್ನಡದ ಫಿಮೇಲ್ ವರ್ಷನ್ ಅನ್ನು ಲಹರಿ ಮಹೇಶ್ ಹಾಡಿದ್ದರು. ಈಗ ‘ಬ್ರ್ಯಾಟ್’ ಚಿತ್ರದ ‘ಗಂಗಿ ಗಂಗಿ’ ಹಾಡಿಗೆ ಬಾಳು ಬೆಳಗುಂದಿ ಧ್ವನಿ ನೀಡಿದ್ದಾರೆ. ಈ ಹಾಡು ಪಕ್ಕಾ ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿ ಬಂದಿದೆ. ಈ ಕಾರಣಕ್ಕೆ ಉತ್ತರ ಕರ್ನಾಟಕದ ಪ್ರತಿಭೆಗೆ ಅವಕಾಶ ನೀಡಲಾಗಿದೆ. ಇಂದು ನಾಗರಾಜ್ ಕೂಡ ಹಾಡನ್ನು ಹಾಡಿರುವರು.
ಇದನ್ನೂ ಓದಿ: ದರ್ಶನ್ ತೂಗುದೀಪ ಪರಿಸ್ಥಿತಿ ಬಗ್ಗೆ ಗಾಯಕ ಬಾಳು ಬೆಳಗುಂದಿ ಹೇಳೋದೇನು?
ಬಾಳು ಬೆಳಗುಂದಿ ಅವರು ಕಳೆದ ‘ಸರಿಗಮಪ’ ವೇದಿಕೆ ಮೇಲೆ ಸ್ಪರ್ಧಿಯಾಗಿ ಗಮನ ಸೆಳೆದರು. ಫಿನಾಲೆ ಸಮೀಪದವರೆಗೂ ಅವರು ತೆರಳಿದ್ದರು. ಅವರ ಧ್ವನಿ ಅನೇಕರಿಗೆ ಇಷ್ಟ ಆಗಿತ್ತು. ವಿಶೇಷ ಎಂದರೆ ಅವರೇ ಹಲವು ಹಾಡುಗಳನ್ನು ಪೋಣಿಸಿ ಹೇಳುತ್ತಿದ್ದರು. ಈ ಮೂಲಕವೂ ಅವರು ಜಡ್ಜ್ಗಳನ್ನು ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಈಗ ಅವರು ‘ಗಂಗಿ ಗಂಗಿ’ ಹಾಡಿನ ಮೂಲಕ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದಾರೆ. ಈ ಹಾಡು ಉತ್ತರ ಕರ್ನಾಟಕ ಮಂದಿಗೂ ಸಾಕಷ್ಟು ಇಷ್ಟ ಆಗಿದೇ ಎಂದೇ ಹೇಳಬಹುದು. ಆನಂದ್ ವಿಡಿಯೋ ಮೂಲಕ ರಿಲೀಸ್ ಆದ ಈ ಹಾಡಿಗೆ ಉತ್ತರ ಕರ್ನಾಟಕದ ಜನರು ಕಮೆಂಟ್ ಮಾಡುವ ಕೆಲಸ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:29 am, Sun, 14 September 25



