ಕೇರಳದ ಪ್ರತಿಷ್ಠಿತ ಸಂಸ್ಥೆಗೆ ಒಲಿದ ‘ಬನಾರಸ್’ ಸಿನಿಮಾ ವಿತರಣಾ ಹಕ್ಕು

ಝೈದ್ ಖಾನ್ ನಾಯಕನಾಗಿ ನಟಿಸಿರುವ ‘ಬನಾರಸ್’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವಾಗಲೇ ಮುಳಕುಪಾಡಂ ಸಂಸ್ಥೆ  ಖುದ್ದು ತಾನೇ ಅಧಿಕೃತವಾಗಿ ಈ ವಿಚಾರವನ್ನ ಘೋಷಿಸಿದೆ.

ಕೇರಳದ ಪ್ರತಿಷ್ಠಿತ ಸಂಸ್ಥೆಗೆ ಒಲಿದ ‘ಬನಾರಸ್’ ಸಿನಿಮಾ ವಿತರಣಾ ಹಕ್ಕು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 06, 2022 | 5:09 PM

ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್​​ಗೆ ರೆಡಿ ಆಗಿರುವ ‘ಬನಾರಸ್’ ಸಿನಿಮಾ (Banaras Movie) ಬಗ್ಗೆ ಚರ್ಚೆ ಜೋರಾಗಿದೆ. ಒಂದೊಂದೇ ಝಲಕ್ ಮೂಲಕ ಕ್ರೇಜ್ ಹುಟ್ಟಿಸಿರುವ ಜಯತೀರ್ಥ ನಿರ್ದೇಶನದ ಈ ಚಿತ್ರದ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇಂಥ ಸಮಯದಲ್ಲಿ ಚಿತ್ರತಂಡದಿಂದ ಸರ್​ಪ್ರೈಸಿಂಗ್ ವಿಚಾರಗಳು, ಸುದ್ದಿಗಳು ಹೊರ ಬರುತ್ತಿದೆ. ‘ಬನಾರಸ್​’ ತಂಡದಿಂದ ಈಗ ಹೊರಬಂದ ಹೊಸಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕೇರಳದ ಪ್ರತಿಷ್ಠಿತ ವಿತರಣಾ ಸಂಸ್ಥೆಯಾಗಿರುವ ‘ಮುಳಕುಪಾಡಂ’ ‘ಬನಾರಸ್​​’ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಹಲವಾರು ಹಿಟ್ ಚಿತ್ರಗಳನ್ನು ವಿತರಿಸಿರುವ ಈ ಖ್ಯಾತ ಸಂಸ್ಥೆಯ ತೆಕ್ಕೆಗೆ ‘ಬನಾರಸ್​’ ವಿತರಣೆಯ ಹಕ್ಕು ಒಲಿದಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

ಝೈದ್ ಖಾನ್ ನಾಯಕನಾಗಿ ನಟಿಸಿರುವ ‘ಬನಾರಸ್’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವಾಗಲೇ ಮುಳಕುಪಾಡಂ ಸಂಸ್ಥೆ  ಖುದ್ದು ತಾನೇ ಅಧಿಕೃತವಾಗಿ ಈ ವಿಚಾರವನ್ನ ಘೋಷಿಸಿದೆ. ಉದ್ಯಮಿಯಾಗಿ ಥಾಮಸ್ ಆಂಟೋನಿ ಹೆಸರು ಮಾಡಿದ್ದಾರೆ. ಅವರು ಮಲಕುಪ್ಪಡಮ್ ಫಿಲ್ಮ್ಸ್​ ಮೂಲಕ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಸಂಸ್ಥೆ ಹಂಚಿಕೆ ಮಾಡಿದ ಚಿತ್ರಗಳೆಲ್ಲವೂ ಉತ್ತಮ ಗುಣಮಟ್ಟದ ಹಾಗೂ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲೇ ಇದ್ದವು. ‘ಬನಾರಸ್’ ಚಿತ್ರವನ್ನು ಈ ಸಂಸ್ಥೆ ಖರೀದಿಸಿರುವುದರಿಂದ ಕುತೂಹಲ ಹೆಚ್ಚಿದೆ.

ಮೊದಲ ಬಾರಿಗೆ ಸಿನಿಪಯಣ ಆರಂಭಿಸಿ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ ನಟ ಝೈದ್ ಖಾನ್​. ಅವರ ಮೊದಲ ಚಿತ್ರವೇ ಇಷ್ಟೊಂದು ದಾಖಲೆಯನ್ನು ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಮೊದಲಿನಿಂದಲೂ ಸಿನಿಮಾ ಆಯ್ಕೆಯಲ್ಲಿ ರಾಜಿಯಾಗದೇ ಉತ್ತಮ ಗುಣಮಟ್ಟ ಕಾದುಕೊಳ್ಳಲು ಮುಳಕುಪಾಡಂ ಸಂಸ್ಥೆ ಹೆಸರುವಾಸಿಯಾಗಿದೆ. ಈಗ ‘ಬನಾರಸ್’ ಚಿತ್ರವನ್ನು ಈ ಸಂಸ್ಥೆ ದೊಡ್ಡ ಮೊತ್ತಕ್ಕೆ ಖರೀದಿಸಿದೆ ಎಂದರೆ ಅದಕ್ಕಿಂತ ಬೇರೆ ಖುಷಿ ಚಿತ್ರತಂಡಕ್ಕೆ ಬೇಕಿಲ್ಲ. ಚಿತ್ರ ರಿಲೀಸ್​ಗೂ ಮೊದಲೇ ಇಡೀ ತಂಡ ಗೆದ್ದ ಖುಷಿಯಲ್ಲಿದೆ. ಈ ಸಂಸ್ಥೆಯ ಮುಖ್ಯಸ್ಥರು ‘ಬನಾರಸ್’ ಮೂಡಿ ಬಂದಿರುವ ರೀತಿಯನ್ನು ಕಂಡು ಥ್ರಿಲ್ ಆಗಿದ್ದಾರೆ. ಆ ಮೆಚ್ಚುಗೆಯಿಂದಲೇ ಇದೇ ನವೆಂಬರ್4ರಂದು ಕೇರಳಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ
Image
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Image
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದನ್ನೂ ಓದಿ: ಪಂಚಭಾಷೆಗಳಲ್ಲೂ ‘ಬನಾರಸ್’ ಟ್ರೇಲರ್ ಅಬ್ಬರ; ಮಿಲಿಯನ್ ಗಟ್ಟಲೆ ವೀಕ್ಷಣೆ  

ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಬನಾರಸ್​ ಚಿತ್ರಕ್ಕೆ ಸೋನಲ್ ಮೊಂಥೆರೋ  ನಾಯಕಿ. ಝೈದ್ ಖಾನ್ ಹೀರೋ. ಈ ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಸೇರಿದಂತೆ ಪ್ರತಿಭಾನ್ವಿತ ತಾಂತ್ರಿಕ ವರ್ಗ ಬನಾರಸ್ ಚಿತ್ರಕ್ಕಾಗಿ ಕೆಲಸ ಮಾಡಿದೆ.

Published On - 4:58 pm, Thu, 6 October 22

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.