ಪಂಚಭಾಷೆಗಳಲ್ಲೂ ‘ಬನಾರಸ್’ ಟ್ರೇಲರ್ ಅಬ್ಬರ; ಮಿಲಿಯನ್ ಗಟ್ಟಲೆ ವೀಕ್ಷಣೆ  

ಟ್ರೇಲರ್ ನೋಡಿದ ನಂತರ ನಿರ್ದೇಶಕ ಜಯತೀರ್ಥ ಅವರ ಶ್ರದ್ಧೆ, ಕಸುಬುದಾರಿಕೆ ಸಾಬೀತಾಗಿದೆ. ಟ್ರೇಲರ್​ನಲ್ಲಿ ಸಂಗೀತ, ಎಡಿಟಿಂಗ್, ಶೂಟಿಂಗ್ ಲೋಕೇಶನ್, ಸಂಭಾಷಣೆ ಮತ್ತು ನವನಾಯಕ ಝೈದ್ ಖಾನ್ ಅವರ ನಟನೆಯ ಬಗ್ಗೆ ಮೆಚ್ಚುಗೆ ಕೇಳಿ ಬಂದಿದೆ.

ಪಂಚಭಾಷೆಗಳಲ್ಲೂ ‘ಬನಾರಸ್’ ಟ್ರೇಲರ್ ಅಬ್ಬರ; ಮಿಲಿಯನ್ ಗಟ್ಟಲೆ ವೀಕ್ಷಣೆ  
ಝೈದ್ ಖಾನ್-ಸೋನಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 03, 2022 | 3:55 PM

ಬನಾರಸ್’ ಸಿನಿಮಾ (Banarasa Movie) ಪಂಚ ಭಾಷೆಯಲ್ಲೂ ಸಖತ್ ಸದ್ದು ಮಾಡುತ್ತಿರುವ ಸಿನಿಮಾ. ಚಿತ್ರದ ಮೋಷನ್ ಪೋಸ್ಟರ್, ‘ಮಾಯಗಂಗೆ..’ ಹಾಡು ರಿಲೀಸ್ ಆದ ಮೇಲಂತೂ ‘ಬನಾರಸ್’ ಚಿತ್ರ ಸಿನಿಮಾ ಪ್ರೇಮಿಗಳ ನಿದ್ದೆ ಕದ್ದಿತ್ತು. ವಾರದ ಹಿಂದಷ್ಟೇ ಚಿತ್ರದ ಮಸ್ತ್​ ಟ್ರೇಲರ್ ರಿಲೀಸ್ ಆಗಿದೆ. ಸದ್ಯ ಈ ಟ್ರೇಲರ್ ಈಗ ಪಂಚ ಭಾಷೆಗಳಲ್ಲಿ 10 ಮಿಲಿಯನ್​​ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ.

ಭರ್ಜರಿ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಬಾಲಿವುಡ್ ನಟ ಅರ್ಬಾಜ್ ಖಾನ್ ಮುಂತಾದ ಗಣ್ಯರ ಸಮ್ಮುಖದಲ್ಲಿ ‘ಬನಾರಸ್’ ಚಿತ್ರದ ಟ್ರೇಲರ್ ಲಾಂಚ್ ಆಯಿತು. ಹೀಗೆ  ಬಿಡುಗಡೆಯಾದ ಟ್ರೇಲರ್​ಗೆ ಈಗ ಎಲ್ಲ ಕಡೆಗಳಿಂದಲೂ ಭರಪೂರ ಮೆಚ್ಚುಗೆ ಹರಿದು ಬರಲಾರಂಭಿಸಿದೆ. ಈಗಾಗಲೇ ಚಿತ್ರದ ತುಣುಕುಗಳನ್ನು ನೋಡಿರುವ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿದೆ. ಪ್ಯಾನ್ ಇಂಡಿಯಾ ರೀತಿಗೆ ಟ್ರೇಲರ್ ಮ್ಯಾಜಿಕ್ ಮಾಡುವಂತಿದೆ. ಈ ಕಾರ್ಯಕ್ರಮದಲ್ಲಿ ಬೇರೆಬೇರೆ ಭಾಷೆಗಳ ಮಾಧ್ಯಮದವರೂ ಇದ್ದರು.

ಟ್ರೇಲರ್ ನೋಡಿದ ನಂತರ ನಿರ್ದೇಶಕ ಜಯತೀರ್ಥ ಅವರ ಶ್ರದ್ಧೆ, ಕಸುಬುದಾರಿಕೆ ಸಾಬೀತಾಗಿದೆ. ಟ್ರೇಲರ್​ನಲ್ಲಿ ಸಂಗೀತ, ಎಡಿಟಿಂಗ್, ಶೂಟಿಂಗ್ ಲೋಕೇಶನ್, ಸಂಭಾಷಣೆ ಮತ್ತು ನವನಾಯಕ ಝೈದ್ ಖಾನ್ ಅವರ ನಟನೆಯ ಬಗ್ಗೆ ಮೆಚ್ಚುಗೆ ಕೇಳಿ ಬಂದಿದೆ.

ಇದನ್ನೂ ಓದಿ
Image
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Image
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಟ್ರೇಲರ್ ನೋಡಿ ಸಖತ್ ಮೆಚ್ಚುಗೆಯನ್ನ ವ್ಯಕ್ತಪಡಿಸಿದರು. ಜೊತೆಗೆ ತಾವು ನೋಡಿದಂತೆ ನವ ನಟ ಝೈದ್ ಈ ಚಿತ್ರಕ್ಕಾಗಿ ಮಾಡಿಕೊಂಡಿರುವ ತಯಾರಿಯನ್ನೂ ಕೂಡ ಕೊಂಡಾಡಿ, ಅವರ ಮುಂದಿನ ಚಿತ್ರದ ಪಯಣಕ್ಕೆ ಮನದುಂಬಿ ಹಾರೈಸಿದರು. ಬಾಲಿವುಡ್ ನಟ ಅರ್ಬಾಜ್ ಖಾನ್ ಕೂಡಾ ಈ ಟ್ರೇಲರ್ ಮೂಡಿ ಬಂದಿರೋ ರೀತಿಯನ್ನು ಬಹುವಾಗಿ ಮೆಚ್ಚುತ್ತಲೇ ‘ಬನಾರಸ್’ ದೊಡ್ಡ ಮಟ್ಟದಲ್ಲಿ ಗೆದ್ದು, ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಲೆಂದು ಹಾರೈಸಿದ್ದಾರೆ.

ನಿರ್ದೇಶಕ ಜಯತೀರ್ಥ ಅವರು ಮಾತನಾಡಿ, ‘ಬನಾರಸ್ ಚಿತ್ರದ  ಕಥೆ ಹುಟ್ಟಿದ ಬಗೆ ಮತ್ತು ಆ ಪ್ರೇಮಕಥೆಗೆ ರವಿಚಂದ್ರನ್ ಚಿತ್ರದ ಹಾಡಿನ ಸಾಲುಗಳೇ ಸ್ಫೂರ್ತಿಯಾದ ಅಚ್ಚರಿಯ ಸಂಗತಿಗಳನ್ನ ತೆರೆದಿಟ್ಟರು. ಚಿತ್ರದ ನಾಯಕಿ ಸೋನಲ್ ಮೊಂತೆರೋ ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ, ಇಂಥಾದ್ದೊಂದು ಅವಕಾಶ ತಮಗೆ ಒಲಿದು ಬಂದದ್ದರ ಕುರಿತು ಮಾತನಾಡಿದರು. ಇವರೊಂದಿಗೆ ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನಾ ಮುಂತಾದ ಕಲಾವಿದರೂ ತಮ್ಮ ಅನುಭವವನ್ನು  ಹಂಚಿಕೊಂಡರು.

ಝೈದ್ ಖಾನ್ ಚಿತ್ರರಂಗಕ್ಕೆ ಹೊಸ ಎಂಟ್ರಿ. ಆದ್ರೆ ಈವರೆಗೂ ಅವರ ನಟನೆಯ ಝಲಕ್ ನೋಡಿದವರಿಗೆ ಎಲ್ಲೂ ನವ ನಟ, ಇದು ಅವರ ಮೊದಲ ಚಿತ್ರವೆಂಬ ಸುಳಿವು ಸಿಗದಂತೆ ತಯಾರಿ ನಡೆಸಿ ಪಳಗಿದಂತೆ ಕಾಣುತ್ತದೆ. ಹಾಗಾಗಿ ಚಿತ್ರ ತಂಡದ, ಕಲಾವಿದರ, ನಿರ್ದೇಶಕ ಮಾತೂ ಅದೇ ಆಗಿದೆ. ಅವರೆಲ್ಲರ ಮಾತುಗಳಲ್ಲಿಯೂ ಝೈದ್ ಖಾನ್ ನಟನೆಯ ಬಗ್ಗೆ ಮೆಚ್ಚುಗೆಯೇ ಕಂಡಿತು. ತಮಗೆದುರಾದ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಾ, ಕಲಾವಿದನಿಗೆ ಜಾತಿ ಧರ್ಮಗಳ ತಡೆಗೋಡೆಗಳಿಲ್ಲ ಎಂಬ ನಿಖರ ನಿಲುವು ವ್ಯಕ್ತಪಡಿಸಿರುವ ಝೈದ್ ಟ್ರೇಲರ್ ಮೂಲಕ ಮಾತ್ರವಲ್ಲದೇ, ವ್ಯಕ್ತಿಗತವಾಗಿಯೂ ಎಲ್ಲರಿಗೂ ಇಷ್ಟವಾಗಿದ್ದಾರೆ. ಈ ಮೂಲಕ ಎಲ್ಲ ಪ್ರೇಕ್ಷಕರ ಮನಗೆದ್ದಿದ್ದೂ ಚಿತ್ರ ರಿಲೀಸ್ ಆಗಿ ಕಣ್ತುಂಬಿಕೊಳ್ಳುವ ಮೊದಲೇ ನಾಯಕನೆಂದು ಒಪ್ಪಿ ಅಪ್ಪಿದ್ದಾರೆ.

ಇನ್ನುಳಿದಂತೆ  ಕನ್ನಡವೂ ಸೇರಿದಂತೆ ಮಲಯಾಳಂ ತಮಿಳು, ತೆಲುಗು, ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿರುವ  ಬನಾರಸ್ ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್  ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.  ನುರಿತ ತಾರಾಗಣದೊಂದಿಗೆ, ರೂಪುಗೊಂಡು ರಿಲೀಸ್ ಗೆ ತಯಾರಿ ನಡೆಸುತ್ತಿರುವ ಈ ಚಿತ್ರಕ್ಕೆ  ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಸೇರಿದಂತೆ ಪ್ರತಿಭಾನ್ವಿತ ತಾಂತ್ರಿಕ ವರ್ಗ ಬನಾರಸ್ ಚಿತ್ರಕ್ಕಾಗಿ ಶ್ರಮಿಸಿದೆ. ಒಟ್ನಲ್ಲಿ ಬನಾರಸ್ ಸಿನೆಮಾ ಸಿನಿರಂಗದಲ್ಲಿ ಹೊಸ ದಾಖಲೆಯನ್ನ ನಿರ್ಮಿಸುವ ಎಲ್ಲ ಲಕ್ಷಣಗಳು ಮತ್ತೊಮ್ಮೆ ಈ ಟ್ರೈಲರ್ ಮೂಲಕ ಗಟ್ಟಿಗೊಂಡಿದೆ.

Published On - 3:53 pm, Mon, 3 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ