BIFFES: ಮಾರ್ಚ್ 3ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಈ ಬಾರಿಯ ವಿಶೇಷಗಳೇನು? ಇಲ್ಲಿದೆ ಮಾಹಿತಿ

Bengaluru International Film Festival: ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 3ರಿಂದ ಆರಂಭವಾಗಲಿದೆ. ಈ ಬಾರಿಯ ವಿಶೇಷತೆಗಳು ಹಾಗೂ ಪಾಸ್ ಪಡೆಯುವುದು ಹೇಗೆ ಮೊದಲಾದ ಮಾಹಿತಿ ಇಲ್ಲಿದೆ.

BIFFES: ಮಾರ್ಚ್ 3ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಈ ಬಾರಿಯ ವಿಶೇಷಗಳೇನು? ಇಲ್ಲಿದೆ ಮಾಹಿತಿ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
Follow us
| Updated By: shivaprasad.hs

Updated on: Feb 16, 2022 | 4:55 PM

ಬೆಂಗಳೂರು: ದೀರ್ಘಕಾಲದಿಂದ ಸಿನಿಮಾ ಪ್ರೇಮಿಗಳು ಕಾತರದಿಂದ ಕಾದಿದ್ದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ (Bengaluru International Film Festival) ಮಾರ್ಚ್ 3ರಿಂದ ಆರಂಭವಾಗಲಿದೆ. ಈ ಕುರಿತು ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ (Sunil Puranik) ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಜಿಕೆವಿಕೆ ಸಭಾಂಗಣದಲ್ಲಿ ಮಾರ್ಚ್ 3ರಂದು ಚಿತ್ರೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಉದ್ಘಾಟಿಸಲಿದ್ದಾರೆ. ಮಾರ್ಚ್ 10ರಂದು ಟಾಟಾ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕನ್ನಡ, ಹಿಂದಿ ಚಿತ್ರರಂಗದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಕಳೆದ ಎರಡು ವರ್ಷಗಳ ಸಿನಿಮಾಗಳ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 55 ರಾಷ್ಟ್ರಗಳ 200 ಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ. ಮಾರ್ಚ್‌ 4ರಿಂದ ಒರಾಯನ್‌ ಮಾಲ್‌ನಲ್ಲಿರುವ ಪಿವಿಆರ್‌ ಸಿನಿಮಾದ 11 ಪರದೆಗಳಲ್ಲಿ, ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಸಿನಿ ಅಕಾಡೆಮಿಯಲ್ಲಿ ಹಾಗೂ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಡಾ.ರಾಜ್‌ ಭವನದಲ್ಲಿ ಚಿತ್ರ ಪ್ರದರ್ಶನಗಳು ನಡೆಯಲಿವೆ.

ಪಾಸ್ ಪಡೆಯುವುದರ ಬಗ್ಗೆ ಚಿತ್ರೋತ್ಸವ ಸಮಿತಿ ಹಂಚಿಕೊಂಡಿರುವ ಮಾಹಿತಿ:

ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಆಜಾದಿ ಕಾ ಅಮೃತ್ ಮಹೋತ್ಸವದ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಬಾರಿ ಚಿತ್ರೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಿತ್ರಗಳು ಪ್ರದರ್ಶನವಾಗಲಿದೆ. ಭಾರತಿ ವಿಷ್ಣುವರ್ಧನ್ ಅವರ ವೃತ್ತಿ ಜೀವನದ ಅವಲೋಕನ, ತುಳು ಚಿತ್ರರಂಗಕ್ಕೆ 50 ವರ್ಷವಾದ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಸಂಕಿರಣ ಮೊದಲಾದವುಗಳು ಈ ಬಾರಿ ಇರಲಿದೆ.

ಪುನೀತ್ ರಾಜ್​ಕುಮಾರ್, ಸಂಚಾರಿ ವಿಜಯ್ ಸೇರಿದಂತೆ ಅಗಲಿದ ತಾರೆಯರಿಗೆ ನಮನ ಸಲ್ಲಿಸಲಾಗುತ್ತದೆ. ಚಲನಚಿತ್ರೋತ್ಸವದಲ್ಲಿ ದೇಶದ ವಿವಿಧ ಭಾಗಗಳ ಕಲಾವಿದರು, ಪತ್ರಕರ್ತರು ಹಾಗೂ ವಿಮರ್ಶಕರು ಚಿತ್ರೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಚಲನಚಿತ್ರೋತ್ಸವವು ಹೈಬ್ರಿಡ್ (ಆನ್​ಲೈನ್, ಆಫ್​ಲೈನ್) ಮಾದರಿಯಲ್ಲಿ ನಡೆಯಲಿದೆ. ಈ ಬಾರಿಯ ಚಿತ್ರೋತ್ಸವ ಸಲಹಾ ಸಮಿತಿಯಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಕೂಡ ಇದ್ದಾರೆ.

ಚಿತ್ರೋತ್ಸವಕ್ಕೆ ಪಾಸ್​ಗಳನ್ನು ಪಡೆಯಲು ಇಚ್ಛಿಸುವವರು ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸುಚಿತ್ರ ಸಿನಿಮಾ ಅಕಾಡೆಮಿಯಲ್ಲಿ ಪಡೆಯಬಹುದಾಗಿದೆ. ಸಾರ್ವಜನಿಕರು ₹ 800, ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಚಿತ್ರ ಸಮಾಜದ ಸದಸ್ಯರಿಗೆ ₹ 400 ರೂ ನೀಡಿ ಪಾಸ್ ಪಡೆಯಬಹುದು. ಹೆಚ್ಚಿನ ಮಾಹಿತಿಗೆ www.biffes.in ತಾಣವನ್ನು ನೋಡಬಹುದು.

ಪೂರ್ಣ ಸುದ್ದಿಗೋಷ್ಠಿ ಇಲ್ಲಿದೆ:

ಇದನ್ನೂ ಓದಿ:

ರವಿಚಂದ್ರನ್​ಗೆ ‘ಹಳ್ಳಿ ಮೇಷ್ಟು’ ನೆನಪಿಸಿದ ‘ಬೈ ಟೂ ಲವ್​’; ಪ್ರೀ-ರಿಲೀಸ್​ ಇವೆಂಟ್​ನಲ್ಲಿ ‘ಕ್ರೇಜಿ ಸ್ಟಾರ್​’ ಮಸ್ತ್​ ಮಾತು

Aniruddha Birthday: ಸ್ಯಾಂಡಲ್​ವುಡ್​ನಿಂದ ಕಿರುತೆರೆಯ ‘ಸೆನ್ಸೇಶನ್ ಸ್ಟಾರ್’ವರೆಗೆ; ಇಲ್ಲಿದೆ ಅನಿರುದ್ಧ ಜೀವನ ಪಯಣ

ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾದಲ್ಲಿಲ್ಲ: ದೇವೇಗೌಡ
ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾದಲ್ಲಿಲ್ಲ: ದೇವೇಗೌಡ
ದಲಿತನ ಜಮೀನು ಕುರುಬರಾಗಿರುವ ಸಿದ್ದರಾಮಯ್ಯಗೆ ಹೇಗೆ ಸೇರುತ್ತದೆ? ಪ್ರತಾಪ್
ದಲಿತನ ಜಮೀನು ಕುರುಬರಾಗಿರುವ ಸಿದ್ದರಾಮಯ್ಯಗೆ ಹೇಗೆ ಸೇರುತ್ತದೆ? ಪ್ರತಾಪ್
ಸಣ್ಣಪ್ಪನ ಕುಟುಂಬಸ್ಥರು ಆತನ ಸಾವನ್ನು ಖಚಿತಪಡಿಸಿದ್ದಾರೆ: ತೇಜಸ್ವೀ ಸೂರ್ಯ
ಸಣ್ಣಪ್ಪನ ಕುಟುಂಬಸ್ಥರು ಆತನ ಸಾವನ್ನು ಖಚಿತಪಡಿಸಿದ್ದಾರೆ: ತೇಜಸ್ವೀ ಸೂರ್ಯ