AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big Help! ವಲಸೆ ಕಾರ್ಮಿಕರಿಗಾಗಿ ವಿಶೇಷ ವಿಮಾನಗಳ ಬುಕ್ ಮಾಡಿದ ಅಮಿತಾಬ್!

ಕೊರೊನಾದಿಂದ ಕಂಗಾಲಾಗಿ ಹುಟ್ಟೂರಿಗೆ ತರಳುತ್ತಿರೋ ವಲಸೆ ಕಾರ್ಮಿಕರ ನೆರವಿಗೆ ಅಮಿತಾಬ್ ಬಚ್ಚನ್ ನಿಂತಿದ್ದಾರೆ. ಕಳೆದ ತಿಂಗಳು 10 ಬಸ್ಸುಗಳಲ್ಲಿ ವಲಸೆ ಕಾರ್ಮಿಕರನ್ನ ಉತ್ತರ ಪ್ರದೇಶದಲ್ಲಿರೋ ಅವರವ ಊರುಗಳಿಗೆ ಕಳುಹಿಸಿಕೊಟ್ಟಿದ್ದರು. ಈಗ ಚಾರ್ಟರ್ಡ್ ಫ್ಲೈಟ್ ಮೂಲಕ ಏರ್​ಲಿಫ್ಟ್ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಕಾರ್ಪ್ ಲಿಮಿಟೆಡ್ ಕಂಪನಿ ಮುಂಬೈನಲ್ಲಿರುವ ವಲಸೆ ಕಾರ್ಮಿಕರನ್ನ ಏರ್​ಲಿಫ್ಟ್ ಮಾಡಿದೆ. ಈಗಾಗ್ಲೇ ಮೂರು ವಿಮಾನಗಳ ಮೂಲಕ ಮುಂಬೈನಲ್ಲಿ ಸಿಕ್ಕಿಕೊಂಡಿದ್ದ ವಲಸೆ ಕಾರ್ಮಿಕರನ್ನ ಉತ್ತರ ಪ್ರದೇಶದ ವಿವಿಧ ಭಾಗಗಳಿಗೆ ತಲುಪಿಸೋ ಕೆಲ ಮಾಡಲಾಗಿದೆ. ಹಾಗಂತ ಅಮಿತಾಬ್ ಬಚ್ಚನ್ […]

Big Help! ವಲಸೆ ಕಾರ್ಮಿಕರಿಗಾಗಿ ವಿಶೇಷ ವಿಮಾನಗಳ ಬುಕ್ ಮಾಡಿದ ಅಮಿತಾಬ್!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jun 10, 2020 | 6:09 PM

Share

ಕೊರೊನಾದಿಂದ ಕಂಗಾಲಾಗಿ ಹುಟ್ಟೂರಿಗೆ ತರಳುತ್ತಿರೋ ವಲಸೆ ಕಾರ್ಮಿಕರ ನೆರವಿಗೆ ಅಮಿತಾಬ್ ಬಚ್ಚನ್ ನಿಂತಿದ್ದಾರೆ. ಕಳೆದ ತಿಂಗಳು 10 ಬಸ್ಸುಗಳಲ್ಲಿ ವಲಸೆ ಕಾರ್ಮಿಕರನ್ನ ಉತ್ತರ ಪ್ರದೇಶದಲ್ಲಿರೋ ಅವರವ ಊರುಗಳಿಗೆ ಕಳುಹಿಸಿಕೊಟ್ಟಿದ್ದರು. ಈಗ ಚಾರ್ಟರ್ಡ್ ಫ್ಲೈಟ್ ಮೂಲಕ ಏರ್​ಲಿಫ್ಟ್ ಮಾಡಿದ್ದಾರೆ.

ಅಮಿತಾಬ್ ಬಚ್ಚನ್ ಕಾರ್ಪ್ ಲಿಮಿಟೆಡ್ ಕಂಪನಿ ಮುಂಬೈನಲ್ಲಿರುವ ವಲಸೆ ಕಾರ್ಮಿಕರನ್ನ ಏರ್​ಲಿಫ್ಟ್ ಮಾಡಿದೆ. ಈಗಾಗ್ಲೇ ಮೂರು ವಿಮಾನಗಳ ಮೂಲಕ ಮುಂಬೈನಲ್ಲಿ ಸಿಕ್ಕಿಕೊಂಡಿದ್ದ ವಲಸೆ ಕಾರ್ಮಿಕರನ್ನ ಉತ್ತರ ಪ್ರದೇಶದ ವಿವಿಧ ಭಾಗಗಳಿಗೆ ತಲುಪಿಸೋ ಕೆಲ ಮಾಡಲಾಗಿದೆ.

ಹಾಗಂತ ಅಮಿತಾಬ್ ಬಚ್ಚನ್ ವಲಸೆ ಕಾರ್ಮಿಕರಿಗೆ ನೆರವಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಾಜಿ ಅಲಿ ಟ್ರೆಸ್ಟ್ ಹಾಗೂ ಪಿರ್ ಮಖಡಮ್ ಸಾಹೇಬ್ ಟ್ರಸ್ಟ್ ಜೊತೆ ಸೇರಿ ಬಿಗ್ ಬಿ 4500 ಮಂದಿ ವಲಸೆ ಕಾರ್ಮಿಕರಿಗೆ ಬೇಯಿಸಿದ ಆಹಾರವನ್ನ ರವಾನಿಸಿದ್ದರು. ಇಷ್ಟೇ ಅಲ್ಲದೆ ಆಸ್ಪತ್ರೆಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಸುಮಾರು 20 ಸಾವಿರ ಪಿಪಿ ಇ ಕಿಟ್ ಅನ್ನೂ ರವಾನಿಸಿದ್ದರು.

ಈಗ ಹುಟ್ಟೂರಿಗೆ ಹೋಗಲು ಪರದಾಡುತ್ತಿದ್ದವರನ್ನ ಬಿಗ್ ಬಿ ವಿಮಾನದಲ್ಲಿ ತಮ್ಮ ಮನೆಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಸಾಕಷ್ಟು ಮಂದಿ ವಲಸೆ ಕಾರ್ಮಿಕರು ಬಸ್ಸು ರೈಲು ಸಿಗದೆ ಕಾಲ್ನಡಿಗೆಯಲ್ಲೇ ತಮ್ಮೂರಿಗೆ ಹೊರಟಿದ್ದರು.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು