AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದುವೇ ಆಸಿಯಾಗೆ ಮೈನಸ್ ಆಗುತ್ತೆ’; ಬಿಗ್ ಬಾಸ್ ವೇದಿಕೆ ಮೇಲೆ ಭವಿಷ್ಯ ನುಡಿದ ತಾಯಿ

'ಕನ್ಯಾಕುಮಾರಿ' ಹಾಗೂ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟಿ ಆಸಿಯಾ ಫಿರ್ದೋಸ್ ಇದೀಗ 'ಬಿಗ್ ಬಾಸ್ ಕನ್ನಡ ಸೀಸನ್ 13'ಕ್ಕೆ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಮಾಡೆಲಿಂಗ್‌ನಿಂದ ಕಿರುತೆರೆವರೆಗೆ ಸಾಗಿಬಂದಿರುವ ಆಸಿಯಾ ಅವರ ಈ ಹೊಸ ರಿಯಾಲಿಟಿ ಶೋ ಜರ್ನಿ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

‘ಇದುವೇ ಆಸಿಯಾಗೆ ಮೈನಸ್ ಆಗುತ್ತೆ’; ಬಿಗ್ ಬಾಸ್ ವೇದಿಕೆ ಮೇಲೆ ಭವಿಷ್ಯ ನುಡಿದ ತಾಯಿ
ಆಸಿಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 06, 2026 | 10:16 PM

Share

ಕಿರುತೆರೆಯ ಜನಪ್ರಿಯ ನಟಿ ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಸಿಯಾ ಫಿರ್ದೋಸ್ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಂಗಪ್ರವೇಶ ಮಾಡಿರುವ ಅವರು ತಮ್ಮ ಹೊಸ ಆಟಕ್ಕೆ ಸಜ್ಜಾಗಿದ್ದಾರೆ. ಅವರ ಹೆಸರು ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿದೆ.

ಆಸಿಯಾ ಫಿರ್ದೋಸ್ ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್ ಮೂಲಕ ಆರಂಭಿಸಿದವರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಭಿನ್ನ ಶೈಲಿಯ ಫ್ಯಾಷನ್ ಹಾಗೂ ಕ್ರಿಯೇಟಿವ್ ರೀಲ್ಸ್‌ಗಳಿಂದ ದೊಡ್ಡ ಮಟ್ಟದ ಫಾಲೋವರ್ಸ್ ಗಳಿಸಿದ್ದರು. ಈ ಜನಪ್ರಿಯತೆ ಅವರಿಗೆ ಕನ್ನಡ ಕಿರುತೆರೆಯ ಬಾಗಿಲು ತೆರೆಯುವಂತೆ ಮಾಡಿತು. ತಮ್ಮ ಗ್ಲಾಮರಸ್ ಲುಕ್‌ನಿಂದಲೇ ಕನ್ನಡಿಗರ ಗಮನ ಸೆಳೆದಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾಕುಮಾರಿ’ ಧಾರಾವಾಹಿಯ ಮೂಲಕ ನಟನೆಯಲ್ಲಿ ತಮ್ಮ ಪಯಣ ಶುರು ಮಾಡಿದರು. ಈ ಧಾರಾವಾಹಿಯಲ್ಲಿನ ಪಾತ್ರ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿತು. ನಂತರ ಜೀ ಕನ್ನಡದ ಜನಪ್ರಿಯ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದರು.

‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ಆಸಿಯಾ ಅವರ ಸಹಜ ಅಭಿನಯಕ್ಕೆ ಕಿರುತೆರೆ ವೀಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಅಭಿನಯದ ಜೊತೆಗೆ ಮಾಡೆಲಿಂಗ್ ರಂಗದಲ್ಲೂ ಸಕ್ರಿಯರಾಗಿರುವ ಆಸಿಯಾ ತಮ್ಮ ಸೌಂದರ್ಯ ಮತ್ತು ಚಾರ್ಮಿಂಗ್ ವ್ಯಕ್ತಿತ್ವದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ‘ಆಸಿಯಾ ಕೆಲಸ ಮಾಡಲ್ಲ. ಅದುವೇ ಮೈನಸ್ ಆಗಬಹುದು’ ಎಂದು ತಾಯಿ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲಿಟ್ಟ ವಿನಯಾ ಪ್ರಸಾದ್ ಮಗಳು ಪ್ರಥಮಾ

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 13 ಮನೆಗೆ ಎಂಟ್ರಿ ಕೊಡುವ ಮೂಲಕ ತಮ್ಮ ಕರಿಯರ್‌ನಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ರಿಯಾಲಿಟಿ ಶೋ ಅಂಗಳದಲ್ಲಿ ತಮ್ಮ ರಿಯಲ್ ವ್ಯಕ್ತಿತ್ವದ ಮೂಲಕ ಆಸಿಯಾ ಫಿರ್ದೋಸ್ ಎಷ್ಟು ದಿನ ಮನೆಮಂದಿಯ ಮನ ಗೆದ್ದು ಪೈಪೋಟಿ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್