AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್ ಸಾರಥಿಗೆ ಹುಟ್ಟುಹಬ್ಬದ ಸಂಭ್ರಮ, 43ನೇ ವಸಂತಕ್ಕೆ ಕಾಲಿಟ್ಟ ಚಾಲೆಂಜಿಂಗ್ ಸ್ಟಾರ್

‘ಮೆಜೆಸ್ಟಿಕ್’​ನಲ್ಲಿ ಕಾಲಿಟ್ಟು.. ‘ಧ್ರುವ’ ತಾರೆಯಾಗಿ ಮಿಂಚಿ. ‘ಕಿಟ್ಟಿ’ ಅನ್ನೋ ಪಟ್ಟ ಗಿಟ್ಟಿಸ್ಕೊಂಡು ರೋಸ್​ ಹಿಡಿದ ‘ಕರಿಯ’ ಇದೀಗ ಅಭಿಮಾನಿಗಳ ಪಾಲಿನ ‘ದಾಸ’. ಸ್ಯಾಂಡಲ್​​ವುಡ್​ನ ‘ಸಾರಥಿ’ ‘ಚಕ್ರವರ್ತಿ’ಯಾಗಿ ಮೆರೆಯುತ್ತಿದ್ದಾರೆ. ಇವತ್ತು ದಚ್ಚು ಫ್ಯಾನ್ಸ್​ ಪಾಲಿಗೆ ವೆರಿ ವೆರಿ​ ಸ್ಪೆಷಲ್ ಡೇ. ಅದೇ ‘ರಾಬರ್ಟ್’ ಬರ್ತ್​​ ಡೇ. ಖುಷಿ ಎಲ್ಲೆ ಮೀರಿದೆ. ಸಂಭ್ರಮ, ಸಡಗರ ಜೋರಾಗಿದೆ. ಡಿಬಾಸ್. ಡಿಬಾಸ್ ಅನ್ನೋ ಘೋಷಣೆ ಮುಗಿಲು ಮುಟ್ಟಿದೆ. ನಿದ್ದೆ ಬಿಟ್ಟು ಒಡೆಯನ ಕಣ್ತುಂಬಿಕೊಳ್ಳೋಕೆ ದಾಂಗುಡಿ ಇಟ್ಟಿದ್ದಾರೆ. ಡಿಬಾಸ್​​ಗೆ ಅಭಿಮಾನದ ವಿಶ್ ಮಾಡೋಕೆ ಎಲ್ರೂ […]

ಸ್ಯಾಂಡಲ್​ವುಡ್ ಸಾರಥಿಗೆ ಹುಟ್ಟುಹಬ್ಬದ ಸಂಭ್ರಮ, 43ನೇ ವಸಂತಕ್ಕೆ ಕಾಲಿಟ್ಟ ಚಾಲೆಂಜಿಂಗ್ ಸ್ಟಾರ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 16, 2020 | 2:06 PM

Share

‘ಮೆಜೆಸ್ಟಿಕ್’​ನಲ್ಲಿ ಕಾಲಿಟ್ಟು.. ‘ಧ್ರುವ’ ತಾರೆಯಾಗಿ ಮಿಂಚಿ. ‘ಕಿಟ್ಟಿ’ ಅನ್ನೋ ಪಟ್ಟ ಗಿಟ್ಟಿಸ್ಕೊಂಡು ರೋಸ್​ ಹಿಡಿದ ‘ಕರಿಯ’ ಇದೀಗ ಅಭಿಮಾನಿಗಳ ಪಾಲಿನ ‘ದಾಸ’. ಸ್ಯಾಂಡಲ್​​ವುಡ್​ನ ‘ಸಾರಥಿ’ ‘ಚಕ್ರವರ್ತಿ’ಯಾಗಿ ಮೆರೆಯುತ್ತಿದ್ದಾರೆ. ಇವತ್ತು ದಚ್ಚು ಫ್ಯಾನ್ಸ್​ ಪಾಲಿಗೆ ವೆರಿ ವೆರಿ​ ಸ್ಪೆಷಲ್ ಡೇ. ಅದೇ ‘ರಾಬರ್ಟ್’ ಬರ್ತ್​​ ಡೇ.

ಖುಷಿ ಎಲ್ಲೆ ಮೀರಿದೆ. ಸಂಭ್ರಮ, ಸಡಗರ ಜೋರಾಗಿದೆ. ಡಿಬಾಸ್. ಡಿಬಾಸ್ ಅನ್ನೋ ಘೋಷಣೆ ಮುಗಿಲು ಮುಟ್ಟಿದೆ. ನಿದ್ದೆ ಬಿಟ್ಟು ಒಡೆಯನ ಕಣ್ತುಂಬಿಕೊಳ್ಳೋಕೆ ದಾಂಗುಡಿ ಇಟ್ಟಿದ್ದಾರೆ. ಡಿಬಾಸ್​​ಗೆ ಅಭಿಮಾನದ ವಿಶ್ ಮಾಡೋಕೆ ಎಲ್ರೂ ಎಂಟ್ರಿ ಕೊಟ್ಟಿದ್ದಾರೆ.

ಸ್ಯಾಂಡಲ್​​ವುಡ್​​​ ‘ಒಡೆಯ’ನಿಗೆ ಹುಟ್ಟುಹಬ್ಬದ ಸಂಭ್ರಮ! ಚಾಲೆಂಜಿಂಗ್ ಸ್ಟಾರ್ ದರ್ಶನ್​. ಸ್ಯಾಂಡಲ್​​​ವುಡ್​ನಲ್ಲಿ ಸುನಾಮಿಯಂತೆ ಫ್ಯಾನ್ಸ್ ಫಾಲೋವಿಂಗ್ ಹೊಂದಿರೋ ಭೂಪತಿ ಬರ್ತ್​ಡೇ ಜೋರಾಗಿದೆ. ಇವತ್ತು 43ನೇ ವಸಂತಕ್ಕೆ ದಾಸ ಕಾಲಿಟ್ಟಿದ್ರೆ, ಅಭಿಮಾನಿಗಳಲ್ಲಿ ಹಬ್ಬದಂತಹ ಸಂಭ್ರಮ. ದಚ್ಚು ಮೀಟ್ ಆಗೋಕೆ ಕಾತರದಿಂದ ಕಾಯ್ತಿದ್ದ ಅಭಿಮಾನಿಗಳು ಡಿಬಾಸ್ ಜನುಮದಿನವನ್ನ ಅದ್ಧೂರಿಯಾಗಿ ಆಚರಿಸಿದ್ರು.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರೋ ದರ್ಶನ್​ ಮನೆ ಬಳಿ ಸಂಭ್ರಮ ಮನೆ ಮಾಡಿತ್ತು. ರಾಜ್ಯದ ಮೂಲೆ ಮೂಲೆಯಿಂದ್ಲೂ ಸಾವಿರಾರು ಅಭಿಮಾನಿಗಳು ಆಗಮಿಸಿದ್ರು. ಒಡೆಯನಿಗೆ ಪ್ರೀತಿ, ಅಭಿಮಾನದಿಂದ ಹುಟ್ಟು ಹಬ್ಬದ ಶುಭಾಷಯ ಕೋರಿದ್ರು.

ಡಿಬಾಸ್ ಬರ್ತ್​ ಡೇಗೆ ವಾರಕ್ಕೂ ಮೊದಲೇ ಅಭಿಮಾನಿಗಳು ಸಕಲ ತಯಾರಿ ಮಾಡ್ಕೊಂಡಿದ್ರು. ಪ್ರತೀ ಬಾರಿಯಂತೆ ಈ ಬಾರಿಯೂ ದರ್ಶನ್​ ಮನೆಮುಂದೆ ಸಾಲು ಸಾಲಾಗಿ ಬೃಹತ್ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ದರ್ಶನ್​ ಮನೆಯ ಮುಂದೆ ಹಬ್ಬದ ವಾತಾರವಣವೇ ಸೃಷ್ಟಿಯಾಗಿತ್ತು.

ಭೂಪತಿ ಬರ್ತ್​ ಡೇಯನ್ನ ಅಭಿಮಾನಿಗಳು ಭರ್ಜರಿಯಾಗಿ ಸೆಲಬ್ರೇಟ್ ಮಾಡಿದ್ರು. ಕಳೆದ ವರ್ಷ ದರ್ಶನ್ ಮಾಡಿದ ಮನವಿಯನ್ನ ಈ ಬಾರಿಯೂ ಅಭಿಮಾನಿಗಳು ಚಾಚು ತಪ್ಪದೇ ಪಾಲಿಸಿದ್ರು. ಹೂವಿನ ಹಾರ, ಗಿಫ್ಟ್​, ಕೇಕ್​ಗಳನ್ನ ತಂದು ದುಂದುಚ್ಚ ಮಾಡದೇ. ಆಹಾರ ಪದಾರ್ಥಗಳನ್ನ ಹೊತ್ತು ದರ್ಶನ್​ ಮನೆಯತ್ತ ಹೆಜ್ಜೆ ಹಾಕ್ತಿದ್ರು. ದವಸ, ಧಾನ್ಯಗಳನ್ನ ದಾನ ಮಾಡಿ ಮತ್ತೊಬ್ಬರಿಗೆ ನೆರವಾಗಿ ಎಂದು ಮನವಿ ಮಾಡಿದ್ದ ದರ್ಶನ್​ ಮಾತನ್ನ ಈ ಬಾರಿಯೂ ಅಭಿಮಾನಿ ಬಳಗ ಪಾಲಿಸಿದ್ರು.

ಇನ್ನು, ದರ್ಶನ್ ಹುಟ್ಟುಹಬ್ಬಕ್ಕೆ ಅವರ ಸಿನಿಮಾ ತಂಡದಿಂದ ಸರ್ಪ್ರೈಸ್ ಇದ್ದೇ ಇರುತ್ತೆ. ಅಂತೆಯೇ ದರ್ಶನ್ ಅಭಿನಯದ ಬಹು ನೀರೀಕ್ಷಿತ ಚಿತ್ರ ರಾಬರ್ಟ್ ಟೀಸರ್ ಮಧ್ಯರಾತ್ರಿ ರಿಲೀಸ್ ಮಾಡಲಾಯ್ತು. ರಾತ್ರಿ ಕೇಕ್ ಕಟ್ಟಿಂಗ್ ನಂತರ ಇಂದು ಇಡೀ ದಿನ ಅಭಿಮಾನಿಗಳ ನಡುವೆಯೇ ದಚ್ಚು ಕಾಲ ಕಳೆಯಲಿದ್ದಾರೆ.

Published On - 7:22 am, Sun, 16 February 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್