ಇನ್ನೆರಡು ದಿನಗಳಲ್ಲಿ ನಟ ದರ್ಶನ್​ಗೆ ಸರ್ಜರಿ; ದೀರ್ಘ ವಿಶ್ರಾಂತಿಗೆ ಸೂಚನೆ?

ದರ್ಶನ್ ಅವರ ಬೆನ್ನು ಹುರಿಯಲ್ಲಿ ಸಮಸ್ಯೆ ಇದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೆ ನಡೆಯೋಕೂ ಸಾಧ್ಯ ಆಗುತ್ತಿರಲಿಲ್ಲ. ಅವರ ಕಾಲು ಕೂಡ ವೀಕ್ ಆಗಿದೆ ಎಂದು ವೈದ್ಯರು ಹೇಳಿದ್ದರು. ನಿರಂತರವಾಗಿ ಅವರನ್ನು ಪರೀಕ್ಷಿಸಿರುವ ವೈದ್ಯರು, ಸರ್ಜರಿ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನೆರಡು ದಿನಗಳಲ್ಲಿ ನಟ ದರ್ಶನ್​ಗೆ ಸರ್ಜರಿ; ದೀರ್ಘ ವಿಶ್ರಾಂತಿಗೆ ಸೂಚನೆ?
ದರ್ಶನ್
Follow us
|

Updated on:Nov 06, 2024 | 1:41 PM

ನಟ ದರ್ಶನ್ ಅವರು ತೀವ್ರ ಬೆನ್ನು ನೋವಿನ ಕಾರಣಕ್ಕೆ ಜೈಲಿನಿಂದ ಹೊರ ಬಂದಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಇದ್ದ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯತೆ ಇದೆ ಕೋರ್ಟ್​ಗೆ ಮನವರಿಕೆ ಮಾಡಿಕೊಡಲಾಯಿತು. ಹೀಗಾಗಿ, ಕರ್ನಾಟಕ ಹೈಕೋರ್ಟ್ ಅವರಿಗೆ ಆರು ತಿಂಗಳ ಮಧ್ಯಂತರ ಜಾಮೀನು ನೀಡಿದೆ. ಈಗ ದರ್ಶನ್ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ದರ್ಶನ್ ಅವರ ಬೆನ್ನು ಹುರಿಯಲ್ಲಿ ಸಮಸ್ಯೆ ಇದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೆ ನಡೆಯೋಕೂ ಸಾಧ್ಯ ಆಗುತ್ತಿರಲಿಲ್ಲ. ಅವರ ಕಾಲು ಕೂಡ ವೀಕ್ ಆಗಿದೆ ಎಂದು ವೈದ್ಯರು ಹೇಳಿದ್ದರು. ನಿರಂತರವಾಗಿ ಅವರನ್ನು ಪರೀಕ್ಷಿಸಿರುವ ವೈದ್ಯರು, ಸರ್ಜರಿ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದಾದ ಬಳಿಕ ಅವರಿಗೆ ರಿಲೀಫ್ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಆರೋಗ್ಯದ ಹಿತದೃಷ್ಟಿಯಿಂದ ಸರ್ಜರಿ ಸೂಕ್ತ ಎಂದಿರುವ ವೈದ್ಯರು ಹೇಳಿದ್ದಾರೆ. ಹೀಗಾಗಿ ದರ್ಶನ್​ಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರ ತಂಡ ಮುಂದಾಗಿದೆ. ಒಂದೆರಡು ದಿನಗಳಲ್ಲಿ ದರ್ಶನ್​ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ದರ್ಶನ್​​ಗೆ ಸರ್ಜರಿ ನಡೆಸಲು ಪತ್ನಿ ವಿಜಯಲಕ್ಷ್ಮೀ ಸಮ್ಮತಿ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್ ವಿರುದ್ಧ ದೂರು ದಾಖಲಿಸಿದ ಲಾಯರ್ ಜಗದೀಶ್, ಕಾರಣವೇನು?

ಬೆನ್ನುಹುರಿ ಶಸ್ತ್ರಚಿಕಿತ್ಸೆ ಎಂದರೆ ಅದು ತುಂಬಾನೇ ಸೂಕ್ಷ್ಮ ಶಸ್ತ್ರಚಿಕಿತ್ಸೆ ಆಗಿದೆ. ಸರ್ಜರಿ ಬಳಿಕ ವೈದ್ಯರು ದರ್ಶನ್​ಗೆ ವಿಶ್ರಾಂತಿ ಪಡೆಯಲು ಸೂಚನೆ ನೀಡುವ ಸಾಧ್ಯತೆ ಇದೆ. ವೈದ್ಯರು ಎಷ್ಟು ದಿನ ದರ್ಶನ್​ಗೆ ವಿಶ್ರಾಂತಿ ಪಡೆಯಲು ಸೂಚನೆ ನೀಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ದರ್ಶನ್​ ಜೈಲಿನಿಂದ ಹೊರ ಬಂದು ವಾರ ಕಳೆದಿದೆ. ಅವರ ಬಳಿ ಇನ್ನು ಐದು ವಾರಗಳು ಮಾತ್ರ ಉಳಿದಿವೆ. ಇದಾದ ಬಳಿಕ ಅವರು ಮರಳಿ ಜೈಲು ಸೇರಬೇಕಿದೆ.

(ವರದಿ: ಪ್ರದೀಪ್)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:44 pm, Wed, 6 November 24

ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ
CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ
ಮುಖ್ಯಮಂತ್ರಿ ಪತ್ನಿಯ ವಿಚಾರಣೆ ಈಗಾಗಲೇ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು
ಮುಖ್ಯಮಂತ್ರಿ ಪತ್ನಿಯ ವಿಚಾರಣೆ ಈಗಾಗಲೇ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು
ಧರಣಿ ವೇದಿಕೆಯಲ್ಲೇ ರಾತ್ರಿ ಊಟ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಧರಣಿ ವೇದಿಕೆಯಲ್ಲೇ ರಾತ್ರಿ ಊಟ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಹಳಿ ಮೇಲೆ ಬಿದ್ದ ಯುವತಿ
ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಹಳಿ ಮೇಲೆ ಬಿದ್ದ ಯುವತಿ
ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ
ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ
ಬಿಗ್ ಬಾಸ್ ಮನೆಯಲ್ಲಿ ಸೇವೆ ಭಾಗ್ಯ; ಕಂಡ ಕಂಡಿದ್ದನ್ನೆಲ್ಲ ಮಾಡಿಸಿಕೊಂಡ್ರು
ಬಿಗ್ ಬಾಸ್ ಮನೆಯಲ್ಲಿ ಸೇವೆ ಭಾಗ್ಯ; ಕಂಡ ಕಂಡಿದ್ದನ್ನೆಲ್ಲ ಮಾಡಿಸಿಕೊಂಡ್ರು
ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?
ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?
Nithya Bhavishya: ಈ ರಾಶಿಯವರು ಇಂದು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವರು
Nithya Bhavishya: ಈ ರಾಶಿಯವರು ಇಂದು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವರು
ಬೆಂಗಳೂರಿನಲ್ಲಿ ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್
ಬೆಂಗಳೂರಿನಲ್ಲಿ ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್