ದರ್ಶನ್ ವಿದೇಶಕ್ಕೆ ತೆರಳಿದ್ದು ನಿಜವೇ? ವೈರಲ್ ಆಗ್ತಿರೋ ವಿಡಿಯೋ ಅಸಲಿಯತ್ತೇನು?
ನಟ ದರ್ಶನ್ ಅವರು ತಮ್ಮ ಹೊಸ ಚಿತ್ರ 'ಡೆವಿಲ್' ನ ಚಿತ್ರೀಕರಣಕ್ಕಾಗಿ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದ ಅವರು ದುಬೈ ಮತ್ತು ಯುರೋಪ್‌ನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಂಡುಬಂದ ಅವರ ವಿಡಿಯೋ ವೈರಲ್ ಆಗಿದೆ. ಇದರ ಅಸಲಿಯತ್ತಿನ ಬಗ್ಗೆ ಇಲ್ಲಿದೆ ವಿವರ.

ನಟ ದರ್ಶನ್ (Darshan) ಅವರು ಸದ್ಯ ‘ಡೆವಿಲ್’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಸಂಕಷ್ಟ ಅನುಭವಿಸಿದ್ದ ಅವರು ಈಗ ಹೊರ ಬಂದು ಮತ್ತೆ ಎಂದಿನಂತೆ ಜೀವನ ನಡೆಸುತ್ತಿದ್ದಾರೆ. ದರ್ಶನ್ ಅವರು ಈಗ ವಿದೇಶಕ್ಕೆ ತೆರಳಲು ರೆಡಿ ಆಗಿದ್ದಾರೆ. ‘ಡೆವಿಲ್’ ಸಿನಿಮಾ ಶೂಟ್ಗಾಗಿ ದರ್ಶನ್ ವಿದೇಶಕ್ಕೆ ಹೊಗಬೇಕಿದೆ. ಹೀಗಿರುವಾಗಲೇ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವಿಡಿಯೋ ಒಂದು ವೈರಲ್ ಆಗಿದೆ.
ದರ್ಶನ್ ಅವರಿಗೆ ಜಾಮೀನು ಸಿಕ್ಕಾಗ ಬೆಂಗಳೂರು ಬಿಟ್ಟು ಹೋಗಲು ಅನುಮತಿ ಇರಲಿಲ್ಲ. ಆ ಬಳಿಕ ಅವರು ದೇಶದ ಎಲ್ಲ ಕಡೆಗಳಲ್ಲಿ ಓಡಾಡಲು ಒಪ್ಪಿಗೆ ಪಡೆದರು. ಈಗ ವಿದೇಶಕ್ಕೆ ಹೋಗಲು ಅವರಿಗೆ ಅನುಮತಿ ಸಿಕ್ಕಿದೆ. ದುಬೈ ಹಾಗೂ ಯುರೋಪ್‌ನಲ್ಲಿ ‘ಡೆವಿಲ್’ ಸಿನಿಮಾ ಶೂಟ್ ನಡೆಯಲಿದೆ. ಅದರಲ್ಲಿ ದರ್ಶನ್ ಭಾಗಿ ಆಗಬೇಕಿದೆ. ಈಗ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಅವರ ಜೊತೆ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಕೂಡ ಕಾಣಿಸಿಕೊಂಡಿದ್ದಾರೆ.
ದರ್ಶನ್ ಅವರನ್ನು ವಿಮಾನ ನಿಲ್ದಾಣದಲ್ಲಿ ನೋಡಿದ ಅನೇಕರು ಅವರು ವಿದೇಶಕ್ಕೆ ತೆರಳಿದರು ಎನ್ನುತ್ತಿದ್ದಾರೆ. ಆದರೆ, ಇದು ಸುಳ್ಳು ಎನ್ನಲಾಗುತ್ತಿದೆ. ಏಕೆಂದರೆ, ದರ್ಶನ್ ಅವರಿಗೆ ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ ನೀಡಿದ್ದು ಜುಲೈ 1ರಿಂದ ಜುಲೈ 27ರವರೆಗೆ. ಜುಲೈ 1ಕ್ಕೆ ಇನ್ನೂ ಒಂದು ವಾರ ಬಾಕಿ ಇದೆ. ಹೀಗಾಗಿ ಅವರು ಹೈದರಾಬಾದ್ ಅಥವಾ ಬೇರೆ ಯಾವುದಾದರೂ ಪ್ರದೇಶಕ್ಕೆ ತೆರಳಿರಬಹುದು ಎಂದು ಊಹಿಸಲಾಗುತ್ತಿದೆ.
View this post on Instagram
ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮುಂದಿನ ವಿಚಾರಣೆಯ ದಿನಾಂಕದಲ್ಲಿ ದರ್ಶನ್ ಅವರು ತಪ್ಪದೇ ಹಾಜರಾಗಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ಈ ಷರತ್ತಿನ ಮೇರೆಗೆ ಅವರಿಗೆ ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ನೀಡಿದೆ.
ಇದನ್ನೂ ಓದಿ: ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ನಟನೆಯ ‘ಡೆವಿಲ್’ ಚಿತ್ರವನ್ನು ‘ಮಿಲನ’ ಪ್ರಕಾಶ್ ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಜೈಲಿನ ಉಡುಗೆಯಲ್ಲಿ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದರು. ಇದರಿಂದ ದರ್ಶನ್ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








