ಎಡಬಿಡದೆ 28 ಗಂಟೆ ಶೂಟ್; ದರ್ಶನ್ಗೆ ಮತ್ತೆ ಶುರುವಾಯ್ತು ಬೆನ್ನು ನೋವು
ದರ್ಶನ್ ಅವರು ‘ಡೆವಿಲ್’ ಸಿನಿಮಾದ 28 ಗಂಟೆಗಳ ನಿರಂತರ ಶೂಟಿಂಗ್ ನಂತರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಈ ಮೊದಲು ಇದ್ದ ಬೆನ್ನು ನೋವು ಮತ್ತೆ ಹೆಚ್ಚಾಗಿದ್ದು, ಕೋರ್ಟ್ ಹಾಜರಾತಿಯಿಂದಲೂ ಅವರು ದೂರ ಉಳಿದಿದ್ದಾರೆ. ಚಿತ್ರೀಕರಣದ ವೇಳಾಪಟ್ಟಿಯನ್ನು ಪೂರ್ಣಗೊಳಿಸುವ ಒತ್ತಡದಿಂದಾಗಿ ಈ ಘಟನೆ ನಡೆದಿದೆ.

ನಟ ದರ್ಶನ್ (Darshan) ಅವರು ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಬೆನ್ನು ನೋವಿಗೆ ಫಿಸಿಯೋ ಥೆರೆಪಿ ಮಾಡಿಸಿಕೊಳ್ಳುತ್ತಾ, ಅಗತ್ಯ ಮೆಡಿಕೇಷನ್ ಮಾಡುತ್ತಾ ದರ್ಶನ್ ಸೆಟ್ಗೆ ಮರಳಿದ್ದಾರೆ. ಈಗ 28 ಗಂಟೆ ನಿರಂತರ ಶೂಟ್ನಿಂದಾಗಿ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವು ಅತಿಯಾಗಿದೆ ಎಂಬ ವರದಿ ಹರಿದಾಡಿದೆ. ಅವರು ಇಂದು (ಏಪ್ರಿಲ್ 8) ಕೋರ್ಟ್ಗೆ ಹಾಜರಾಗಬೇಕಿತ್ತು. ಆದರೆ, ಬೆನ್ನು ನೋವಿನ ಕಾರಣ ನೀಡಿ ಅವರು ಬಂದಿಲ್ಲ. ಶೂಟಿಂಗ್ ಎಫೆಕ್ಟ್ನಿಂದಾಗಿ ದರ್ಶನ್ ಬೆನ್ನು ನೋವು ಹೆಚ್ಚಾಗಿದೆ ಎನ್ನಲಾಗಿದೆ.
ದರ್ಶನ್ ಅವರು ಮೈಸೂರಿನಲ್ಲಿ ಕೆಲವು ದಿನಗಳ ಕಾಲ ಶೂಟ್ ಮಾಡಿದರು. ಈ ವೇಳೆ ಕೇವಲ ಟಾಕಿ ಪೋರ್ಷನ್ ಮಾತ್ರ ಇತ್ತು ಎನ್ನಲಾಗಿದೆ. ದರ್ಶನ್ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಆ್ಯಕ್ಷನ್ ದೃಶ್ಯಗಳನ್ನು ನಿರ್ದೇಶಕ ಪ್ರಕಾಶ್ ಮಾಡಿಸಿರಲಿಲ್ಲ. ರಾಜಸ್ಥಾನದಲ್ಲಿ ಯಾವ ದೃಶ್ಯಗಳ ಶೂಟ್ ನಡೆದಿದೆ ಎಂಬ ಮಾಹಿತಿ ಇನ್ನೂ ರಿವೀಲ್ ಆಗಿಲ್ಲ. ಆದರೆ, ಅವರು ಅಲ್ಲಿ ಬರೋಬ್ಬರಿ 28 ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದರು ಎನ್ನಲಾಗುತ್ತಿದೆ.
ಬಾಲಿವುಡ್ ನಟ, ನಿರ್ದೇಶಕ ಮಹೇಶ್ ಮಂಜ್ರೇಕರ್ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕೆಲಸ ವಿಳಂಬ ಆಗಿದ್ದು, ಅವರ ಕಾಲ್ಶೀಟ್ ಮುಗಿಯೋ ಹಂತದಲ್ಲಿ ಇತ್ತು. ಈ ಕಾರಣಕ್ಕೆ ದರ್ಶನ್ ಅವರು ನಿರಂತರವಾಗಿ ಶೂಟ್ನಲ್ಲಿ ಭಾಗಿ ಆಗಿ, ಅವರ ಕಾಂಬಿನೇಷನ್ನಲ್ಲಿ ಬರುವ ಶೂಟ್ನ ಪೂರ್ಣಗೊಳಿಸಿಕೊಟ್ಟಿದ್ದಾರಂತೆ. ಇದಕ್ಕೆ ಅವರು ತೆಗೆದುಕೊಂಡಿದ್ದು ಬರೋಬ್ಬರಿ 28 ಗಂಟೆ.
ಬೆನ್ನು ನೋವಿನ ಸಮಸ್ಯೆ ಇದ್ದು 28 ಗಂಟೆಗಳ ಕಾಲ ಶೂಟ್ ಮಾಡುವುದು ಎಂದರೆ ಅದು ಸಣ್ಣ ಮಾತಲ್ಲ. ಅದನ್ನು ದರ್ಶನ್ ಮಾಡಿ ತೋರಿಸಿದ್ದಾರೆ. ಆದರೆ, ಅದು ಈಗ ಅವರಿಗೆ ಬ್ಯಾಕ್ ಫೈಯರ್ ಆಗಿದೆ. ಮತ್ತೆ ಬೆನ್ನು ನೋವು ಹೆಚ್ಚಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ‘ನನಗೆ ಬರೋಕಾಗಲ್ಲ, ವಿನಾಯಿತಿ ಕೊಡಿ’; ಬೆನ್ನು ನೋವಿನ ಕಾರಣ ಹೇಳಿ ಕೋರ್ಟ್ಗೆ ಗೈರಾದ ದರ್ಶನ್
ಹೈದರಾಬಾದ್ನಲ್ಲಿ ಮುಂದಿನ ಹಂತದ ಶೂಟ್
ಹೈದರಾಬಾದ್ನಲ್ಲಿ ಮುಂದಿನ ಹಂತದ ಶೂಟ್ ನಡೆಯಲಿದೆಯಂತೆ. ಅದು ಯಾವಾಗ ಎನ್ನುವ ಬಗ್ಗೆ ತಂಡದ ಕಡೆಯಿಂದ ಅಪ್ಡೇಟ್ ಬಂದಿಲ್ಲ. ಸಿನಿಮಾ ಈ ವರ್ಷವೇ ರಿಲೀಸ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.