AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರಿ ನಿರೀಕ್ಷೆ ಮೂಡಿಸಿ ಬಿಡುಗಡೆ ಆದ ‘ಮಾರ್ಟಿನ್​’ ಸಿನಿಮಾ; ಹೇಗಿದೆ ಫಸ್ಟ್​ ಹಾಫ್​?

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಮಾರ್ಟಿನ್​’ ಸಿನಿಮಾ ಇಂದು (ಅಕ್ಟೋಬರ್​ 11) ತೆರೆಕಂಡಿದೆ. ದಸರಾ ಪ್ರಯುಕ್ತ ರಿಲೀಸ್​ ಆಗಿರುವ ಈ ಸಿನಿಮಾಗೆ ಪರಭಾಷೆಯ ಚಿತ್ರಗಳು ಪೈಪೋಟಿ ನೀಡುತ್ತಿವೆ. ಧ್ರುವ ಸರ್ಜಾ ಮುಖ್ಯ ಭೂಮಿಕೆ ನಿಭಾಯಿಸಿದ್ದು, ಎ.ಪಿ. ಅರ್ಜುನ್​ ನಿರ್ದೇಶನ, ಉದಯ್​ ಮೆಹ್ತಾ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾದ ಫಸ್ಟ್​ ಹಾಫ್​ ಹೇಗಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.

ಭಾರಿ ನಿರೀಕ್ಷೆ ಮೂಡಿಸಿ ಬಿಡುಗಡೆ ಆದ ‘ಮಾರ್ಟಿನ್​’ ಸಿನಿಮಾ; ಹೇಗಿದೆ ಫಸ್ಟ್​ ಹಾಫ್​?
ಧ್ರುವ ಸರ್ಜಾ
ಮದನ್​ ಕುಮಾರ್​
| Edited By: |

Updated on: Oct 11, 2024 | 11:48 AM

Share

ಅದ್ದೂರಿ ಬಜೆಟ್​ನಲ್ಲಿ ಮಾರ್ಟಿನ್​ ಸಿನಿಮಾ ನಿರ್ಮಾಣ ಆಗಿದೆ. ಬೇರೆ ಬೇರೆ ದೇಶಗಳಲ್ಲಿ ಶೂಟಿಂಗ್​ ನಡೆದಿದೆ. ಸಿಕ್ಕಾಪಟ್ಟೆ ಮಾಸ್​ ಅವತಾರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಸಿನಿಮಾ ಎಂದರೆ ಅಭಿಮಾನಿಗಳು ಸಿಕ್ಕಾಪಟ್ಟೆ ಆ್ಯಕ್ಷನ್​ ಬಯಸುತ್ತಾರೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ನಿರ್ದೇಶಕ ಎ.ಪಿ. ಅರ್ಜುನ್​ ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ ಮುಂತಾದವರು ನಟಿಸಿರುವ ಈ ಸಿನಿಮಾಗೆ ಮೊದಲ ದಿನ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ‘ಮಾರ್ಟಿನ್​’ ಸಿನಿಮಾದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಇಲ್ಲಿದೆ ನೋಡಿ ವಿವರ..

  1. ಅಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ಆ್ಯಕ್ಷನ್ ಮೂಲಕವೇ ಶುರುವಾಗುತ್ತದೆ ‘ಮಾರ್ಟಿನ್’ ಸಿನಿಮಾ.
  2. ಪಾಕಿಸ್ತಾನದ ಇಸ್ಲಾಮಾಬಾದ್‌‌ ಪ್ರಿಸನ್‌ನಿಂದ ತೆರೆದುಕೊಳ್ಳುತ್ತದೆ ‘ಮಾರ್ಟಿನ್’ ಕಥೆ. ಜೈಲಿನ ಫೈಟ್ ಮೂಲಕ ಥ್ರಿಲ್ ನೀಡುವ ಧ್ರುವ ಸರ್ಜಾ.
  3. ಮಾರ್ಟಿನ್ ಯಾರು ಎಂಬ ಹುಡುಕಾಟದಲ್ಲಿ ಪಾಕಿಸ್ತಾನ, ಬಾಂಬೆ, ಮಂಗಳೂರು ಸುತ್ತುವ ಕಥಾನಾಯಕ ಅರ್ಜುನ್ (ಧ್ರುವ). ಫಸ್ಟ್ ಹಾಫ್ ಪೂರ್ತಿ ಈ ಹುಡುಕಾಟವೇ ತುಂಬಿದೆ.
  4. ಎಂದಿನಂತೆ ಇಂಟರ್‌ವಲ್‌ನಲ್ಲಿ ಎದುರಾಗುತ್ತೆ ಒಂದು ಟ್ವಿಸ್ಟ್. ಮಾರ್ಟಿನ್ ಯಾರು ಎಂಬ ಉತ್ತರವೂ ಇಂಟರ್‌‌ವಲ್‌ನಲ್ಲಿ ಸಿಗುತ್ತದೆ.
  5. ಎರಡು ಶೇಡ್‌ನ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಎರಡರಲ್ಲೂ ಸಂಪೂರ್ಣ ಬೇರೆ ರೀತಿಯ ಶೇಡ್ ಇದೆ. ಒಂದರಲ್ಲಿ ಲವರ್ ಬಾಯ್, ಇನ್ನೊಂದರಲ್ಲಿ ನಟೋರಿಯಸ್.
  6. ಫಸ್ಟ್ ಹಾಫ್‌ನಲ್ಲೇ ಇದೆ ‘ಜೀವ ನೀನೇ ರೊಮ್ಯಾಂಟಿಕ್ ಹಾಡು. ಪಡ್ಡೆಗಳಿಗೆ ಕಿಕ್ ಕೊಡುವ ಐಟಂ ಸಾಂಗ್ ಸಹ ಮೊದಲಾರ್ಧದಲ್ಲಿ ಇದೆ.
  7. ಸಿಕ್ಕಾಪಟ್ಟೆ ಆ್ಯಕ್ಷನ್, ಒಂದಷ್ಟು ಸಸ್ಪೆನ್ಸ್ ಮತ್ತು ಸ್ವಲ್ಪ ಲವ್ ಮೂಲಕ ನಿರ್ದೇಶಕ ಎ.ಪಿ.‌ಅರ್ಜುನ್ ಅವರು ‘ಮಾರ್ಟಿನ್’ ಸಿನಿಮಾದ ಫಸ್ಟ್ ಹಾಫ್ ಕಟ್ಟಿಕೊಟ್ಟಿದ್ದಾರೆ.
  8. ನಿಜಕ್ಕೂ ಮಾರ್ಟಿನ್ ಯಾರು ಎಂಬುದು ಫಸ್ಟ್ ಹಾಫ್‌ನಲ್ಲಿ ಗೊತ್ತಾಗಲ್ಲ. ಆ ಪ್ರಶ್ನೆಗೆ ಉತ್ತರ ಬೇಕಿದ್ದರೆ ಸೆಕೆಂಡ್ ಹಾಫ್ ನೋಡಬೇಕು.
  9. ಪ್ರತಿ ಫ್ರೇಮ್‌ನಲ್ಲೂ ಶ್ರೀಮಂತಿಕೆ ಕಾಣಿಸಿದೆ. ಧ್ರುವ ಸರ್ಜಾ ಅವರನ್ನು ಮಾಸ್ ಆಗಿ ನೋಡಬೇಕು ಅಂತ ಬಯಸುವ ಪ್ರೇಕ್ಷಕರಿಗೆ ಮಾರ್ಟಿನ್ ಫಸ್ಟ್ ಹಾಫ್ ಮನರಂಜನೆ‌ ನೀಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ