AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ; ನಿರ್ದೇಶಕ ಎಸ್.​ನಾರಾಯಣ್ ವಿರುದ್ಧ ಎಫ್​ಐಆರ್​

ನಿರ್ದೇಶಕ ಎಸ್. ನಾರಾಯಣ್ ಅವರ ಪುತ್ರ ಪವನ್ ಹಾಗೂ ಸೊಸೆ ಪವಿತ್ರಾ ನಡುವಿನ ವಿವಾಹ ಜೀವನದಲ್ಲಿ ವಿರಸ ಮೂಡಿದೆ. ಪವಿತ್ರಾ ಅವರು ಪವನ್ ಮತ್ತು ಅವರ ತಾಯಿ ಭಾಗ್ಯವತಿ ಹಾಗೂ ನಾರಾಯಣ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ನಾರಾಯಣ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ; ನಿರ್ದೇಶಕ ಎಸ್.​ನಾರಾಯಣ್ ವಿರುದ್ಧ ಎಫ್​ಐಆರ್​
S Narayan (1)
ರಾಜೇಶ್ ದುಗ್ಗುಮನೆ
|

Updated on: Sep 11, 2025 | 10:38 AM

Share

ನಿರ್ದೇಶಕ ಎಸ್​. ನಾರಾಯಣ್ (S Narayan) ಅವರು ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ‘ನನ್ನ ಹೆಸರಲ್ಲಿ ಫೇಕ್ ಟ್ವಿಟರ್ ಖಾತೆ ಮಾಡಲಾಗಿದೆ. ಇದರ ಮೂಲಕ ತಪ್ಪು ಸಂದೇಶ ರವಾನೆ ಮಾಡಲಾಗುತ್ತಿದೆ’ ಎಂದು ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈಗ ಅವರು ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಬಂದಿದೆ. ಅದೂ ಆರೋಪಿಯಾಗಿ. ಸೊಸೆ ಪವಿತ್ರಾ ಅವರು ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ದೂರು ದಾಖಲು ಮಾಡಿದ್ದು, ಎಫ್​ಐಆರ್ ದಾಖಲಾಗಿದೆ.

2021ರಲ್ಲಿ ಎಸ್.ನಾರಾಯಣ್​ ಪುತ್ರ ಪವನ್ ಹಾಗೂ ಪವಿತ್ರಾ ಮದುವೆ ನಡೆದಿತ್ತು. ಅದ್ದೂರಿಯಾಗಿ ಮದುವೆ ಮಾಡಿದ್ದರು. ಆದರೆ, ನಾಲ್ಕು ವರ್ಷ ಕಳೆಯುವುದರೊಳಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ನಾರಾಯಣ್ ಅವರ ಪತ್ನಿ ಭಾಗ್ಯವತಿ ಹಾಗೂ ಮಗ ಪವನ್ ವಿರುದ್ಧ ಪವಿತ್ರಾ ದೂರು ನೀಡಿದ್ದಾರೆ. ಮದುವೆಯಲ್ಲಿ ವರದಕ್ಷಿಣೆ ಕೊಟ್ಟರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದರೆ ಎಂದು ಪವಿತ್ರಾ ದೂರು ನೀಡಿದ್ದಾರೆ.

ಮನೆಯನ್ನು ತಾವೇ ನಡೆಸುತ್ತಿದ್ದದಾಗಿ ಪವಿತ್ರಾ ಹೇಳಿದ್ದಾರೆ. ‘ಪವನ್​ಗೆ ಕೆಲಸ ಇಲ್ಲ. ಹೀಗಾಗಿ, ನಾನೇ ಕೆಲಸ ಮಾಡಿ ಮನೆ ನಡೆಸುತ್ತಿದ್ದೆ. ಈ ವೇಳೆ ‘ಕಲಾಸಾಮ್ರಾಟ್ ಟೀಂ ಅಕಾಡೆಮಿ’ ಆರಂಭಿಸಲು ಹಣಕ್ಕೆ ಬೇಡಿಕೆ ಇಡಲಾಯಿತು. ಆಗ ನಾನು ತಾಯಿಯ ಒಡವೆಯನ್ನು ಅಡವಿಟ್ಟು ಹಣ ಕೊಟ್ಟಿದ್ದೆ. ಆದರೆ ಕಲಾಸಾಮ್ರಾಟ್ ಟೀಂ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಯಿತು’ ಎಂದು ಪವಿತ್ರಾ ಹೇಳಿದ್ದಾರೆ.

ಇದನ್ನೂ ಓದಿ
Image
ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ನಟ ಅಕ್ಷಯ್ ಕುಮಾರ್
Image
ಲೂಸಿಯಾದಲ್ಲಿ ರಿಷಬ್ ಶೆಟ್ಟಿ ಮಾಡಿದ ಪಾತ್ರ ನೆನಪಿದೆಯೇ? ಅದೆಷ್ಟು ಬದಲಾವಣೆ
Image
‘ಹಳ್ಳಿ ಪವರ್​’ನಲ್ಲಿ 1 ವಾರಕ್ಕೆ 4 ಮಂದಿ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ
Image
ಸು ಫ್ರಮ್ ಸೋಗೆ OTTಯಲ್ಲಿ ಬೇರೆಯದೇ ರೀತಿಯ ವಿಮರ್ಶೆ; ಸಮಸ್ಯೆ ಆಗಿದ್ದೆಲ್ಲಿ?

ಇಷ್ಟೆಲ್ಲ ಆದ ಬಳಿಕ ಪವಿತ್ರಾ ಅವರು ತಮ್ಮ ಹೆಸರಲ್ಲೇ 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್​ಗೆ ನೀಡಿದ್ದರಂತೆ. ಆದರೆ, ಆದರೆ ಈಗ ಪವಿತ್ರಾ ಅವರನ್ನೇ ಮನೆಯಿಂದ ಹೊರಹಾಕಿದ್ದಾರಂತೆ.

ಇದನ್ನೂ ಓದಿ: ‘ಈ ನನ್ ಮಕ್ಳಿಗೆ..’; ಫೇಕ್ ಅಕೌಂಟ್ ಮಾಡಿದವರಿಗೆ ‘ಸೂರ್ಯವಂಶ’ ಸ್ಟೈಲ್​ನಲ್ಲಿ ಎಸ್. ನಾರಾಯಣ್ ಕೌಂಟರ್

ನಾರಾಯಣ್ ಹೇಳೋದೇನು?

‘ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಯಿತು. ವಯಸ್ಸು, ವ್ಯಕ್ತಿತ್ವಕ್ಕೂ ಎರಡಕ್ಕೂ ಪವಿತ್ರಾ ಬೆಲೆ ಕೊಡುತ್ತಿರಲಿಲ್ಲ’ ಎಂದಿದ್ದಾರೆ ಎಸ್​ ನಾರಾಯಣ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ
Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ