AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ರಾಜ್​ಕುಮಾರ್ ಪುಣ್ಯಸ್ಮರಣೆ: ಅಣ್ಣಾವ್ರು ನಿಧನರಾಗಿ ಕಳೆಯಿತು 20 ವರ್ಷ

Dr Rajkumar Death Anniversary: ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್​ಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ 20 ವರ್ಷಗಳು ಕಳೆದಿವೆ. ಎಷ್ಟೇ ವರ್ಷಗಳು ಉರುಳಿದರೂ ಅವರ ಮೇಲೆ ಜನರಿಗೆ ಇರುವ ಅಭಿಮಾನ ಹೆಚ್ಚಾಗುತ್ತಲೇ ಇದೆ. ಹೊಸ ತಲೆಮಾರಿನ ಮಂದಿ ಕೂಡ ಅಣ್ಣಾವ್ರ ಸಿನಿಮಾಗಳನ್ನು ನೋಡಿ ಮನಸೋಲುತ್ತಿದ್ದಾರೆ.

ಡಾ. ರಾಜ್​ಕುಮಾರ್ ಪುಣ್ಯಸ್ಮರಣೆ: ಅಣ್ಣಾವ್ರು ನಿಧನರಾಗಿ ಕಳೆಯಿತು 20 ವರ್ಷ
Dr. RajkumarImage Credit source: Instagram/RaghavendraRajkumar
ಮದನ್​ ಕುಮಾರ್​
|

Updated on:Apr 12, 2026 | 8:12 AM

Share

ಏಪ್ರಿಲ್ 12 ಎಂದರೆ ಡಾ. ರಾಜ್​ಕುಮಾರ್ (Dr. Rajkumar) ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಕರಾಳ ದಿನ. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಅಣ್ಣಾವ್ರು ಕೊನೆಯುಸಿರು ಎಳೆದ ದಿನವಿದು. ಡಾ. ರಾಜ್​ಕುಮಾರ್ ಅವರು ನಿಧನರಾಗಿದ್ದು 2006ರ ಏಪ್ರಿಲ್ 12ರಂದು. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲಿದೇ ಈಗ 20 ವರ್ಷಗಳು ಕಳೆದಿವೆ. ಎಷ್ಟೇ ವರ್ಷ ಉರುಳಿದರೂ ಮೇರುನಟನ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಹಳೇ ಕಾಲದ ಮಂದಿ ಮಾತ್ರವಲ್ಲದೇ ಈಗ ಕಾಲದ ಜೆನ್-ಜಿ ಪ್ರೇಕ್ಷಕರು ಕೂಡ ಡಾ. ರಾಜ್ ಸಿನಿಮಾಗಳನ್ನು (Dr. Rajkumar Movies) ನೋಡಿ ಫಿದಾ ಆಗುತ್ತಿದ್ದಾರೆ.

ಚಿತ್ರರಂಗದಲ್ಲಿ ನೂರಾರು ಮಂದಿ ಸ್ಟಾರ್ ಕಲಾವಿದರು ಬಂದು ಹೋಗಿದ್ದಾರೆ. ಆದರೆ ಡಾ. ರಾಜ್​ಕುಮಾರ್ ರೀತಿ ಇನ್ನೊಬ್ಬ ವ್ಯಕ್ತಿ ಇಲ್ಲ. ಸಿನಿಮಾಗಳ ಆಯ್ಕೆ, ಅಭಿನಯ, ಗಾಯನ, ನಡವಳಿಕೆ, ಸರಳತೆ ಇತ್ಯಾದಿ ವಿಷಯಗಳಲ್ಲಿ ಅಣ್ಣಾವ್ರರನ್ನು ಮೀರಿಸುವಂತಹ ಸ್ಟಾರ್ ಯಾರೂ ಇಲ್ಲ. ಅವರಿಗೆ ಅವರೇ ಸಾಟಿ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಜಿನ್-ಜಿ ಪ್ರೇಕ್ಷಕರು ಕೂಡ ಅಣ್ಣಾವ್ರ ಗುಣಗಾನ ಮಾಡುತ್ತಿದ್ದಾರೆ. ಡಾ. ರಾಜ್​ಕುಮಾರ್ ಎಂದೆಂದಿಗೂ ಪ್ರಸ್ತುತ ಎಂಬುದಕ್ಕೆ ಇದೇ ಸಾಕ್ಷಿ.

View this post on Instagram

A post shared by Nyra Shetty (@nyrashetty15)

ಸಾಮಾಜಿಕ, ಪೌರಾಣಿಕ, ಐತಿಹಾಸಿಕ.. ಹೀಗೆ ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಡಾ. ರಾಜ್. ತಮ್ಮ ಸಿನಿಮಾಗಳ ಮೂಲಕ ಜೀವನ ಮೌಲ್ಯವನ್ನು ತಿಳಿಸಿಕೊಟ್ಟರು. ಗಾಯನದಲ್ಲೂ ರಾಷ್ಟ್ರ ಪ್ರಶಸ್ತಿ ಪಡೆದರು. ಎಷ್ಟೇ ಜನಪ್ರಿಯತೆ ಬಂದರೂ ಕೊನೇ ತನಕ ಕನ್ನಡ ಚಿತ್ರರಂಗಲ್ಲೇ ಉಳಿದುಕೊಂಡರು. ಕನ್ನಡಪರ ಹೋರಾಟಕ್ಕೆ ಬಲ ತಂದರು. ಲಕ್ಷಾಂತರ ನಟ-ನಟಿಯರಿಗೆ ಸ್ಫೂರ್ತಿಯಾದರು. ನೇತ್ರದಾನ ಮಾಡಿ ಎಲ್ಲರಿಗೂ ಮಾದರಿಯಾದರು. ಇಂಥ ಗುಣಗಳ ಕಾರಣದಿಂದ ಅಣ್ಣಾವ್ರನ್ನು ಪ್ರತಿ ದಿನ ಸ್ಮರಿಸಲಾಗುತ್ತದೆ.

ಪುಣ್ಯಸ್ಪರಣೆ ಅಥವಾ ಹುಟ್ಟುಹಬ್ಬದ ದಿನ ಮಾತ್ರವಲ್ಲದೇ, ಪ್ರತಿದಿನ ಅಭಿಮಾನಿಗಳು ಅಣ್ಣಾವ್ರ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಹೊಸ ತಲೆಮಾರಿದ ಪ್ರೇಕ್ಷಕರು ಬಂದು ನಮಸ್ಕರಿಸುತ್ತಾರೆ. ಅಭಿಮಾನಿಗಳು ಹೊಸ ಕೆಲಸಗಳನ್ನು ಆರಂಭಿಸುವುದಕ್ಕೂ ಮುನ್ನ ಸಮಾಧಿ ಎದುರು ನಿಂತು ಆಶೀರ್ವಾದ ಪಡೆಯುತ್ತಾರೆ. ಜನರಿಗೆ ಆ ರೀತಿಯ ಭಾವನಾತ್ಮಕ ನಂಟು ಅಣ್ಣಾವ್ರೊಂದಿಗೆ ಬೆಸೆದಿದೆ.

ಇದನ್ನೂ ಓದಿ: ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣ: ವೀರಪ್ಪನ್ ಸಹಚರರ ಖುಲಾಸೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಇಂದು ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳು ಡಾ. ರಾಜ್​ಕುಮಾರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಕುಟುಂಬದವರು ಬಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮೌಲ್ಯ, ಆದರ್ಶಗಳ ಮೂಲಕ, ಸಿನಿಮಾಗಳ ಮೂಲಕ ರಾಜ್​ಕುಮಾರ್ ಅವರು ಎಂದೆಂದಿಗೂ ಅಮರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 am, Sun, 12 April 26

Follow Us