AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಕ್ಕ’ ನಿರ್ಮಾಪಕರ ಹೊಸ ಸಿನಿಮಾದಲ್ಲಿ ಯುವ, ರಿತನ್ಯಾ ಜೋಡಿ; ಸೂರಿ ನಿರ್ದೇಶನ

ಅಕ್ಷಯ ತೃತೀಯ ಪ್ರಯುಕ್ತ ಯುವ ರಾಜ್​ಕುಮಾರ್ ಅವರ ಹೊಸ ಸಿನಿಮಾಗೆ ಚಾಲನೆ ನೀಡಲಾಗಿದೆ. ಈ ಸಿನಿಮಾದಲ್ಲಿ ಅವರಿಗೆ ರಿತನ್ಯಾ ವಿಜಯ್ ಕುಮಾರ್ ಜೋಡಿ ಆಗುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನ ಮಾಡಲಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಫಿಲ್ಮ್ಸ್​ ಬ್ಯಾನರ್​ಗಳ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

‘ಎಕ್ಕ’ ನಿರ್ಮಾಪಕರ ಹೊಸ ಸಿನಿಮಾದಲ್ಲಿ ಯುವ, ರಿತನ್ಯಾ ಜೋಡಿ; ಸೂರಿ ನಿರ್ದೇಶನ
Yuva Rajkumar New Movie Muhurtha
ಮದನ್​ ಕುಮಾರ್​
|

Updated on: Apr 30, 2025 | 5:06 PM

Share

ನಟ ಯುವ ರಾಜ್‌ಕುಮಾರ್‌ (Yuva Rajkumar) ಮತ್ತು ನಿರ್ದೇಶಕ ಸೂರಿ (Duniya Suri) ಕಾಂಬಿನೇಷನ್​ನ ಹೊಸ ಸಿನಿಮಾಗೆ ಇಂದು (ಏಪ್ರಿಲ್ 30) ಅಧಿಕೃತ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯ ಪ್ರಯುಕ್ತ ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಮಾಡಲಾಗಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ‘ಪಿಆರ್‌ಕೆ ಪ್ರೊಡಕ್ಷನ್ಸ್’, ಕಾರ್ತಿಕ್‌ ಗೌಡ-ಯೋಗಿ ಜಿ. ರಾಜ್‌ ಒಡೆತನದ ‘ಕೆಆರ್‌ಜಿ ಸ್ಟುಡಿಯೋಸ್’ ಮತ್ತು ಜಯಣ್ಣ-ಭೋಗೇಂದ್ರ ಒಡೆತನದ ‘ಜಯಣ್ಣ ಫಿಲ್ಮ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಈಗಾಗಲೇ ಇದೇ ನಿರ್ಮಾಣ ಸಂಸ್ಥೆಗಳು ‘ಎಕ್ಕ’ ಚಿತ್ರಕ್ಕೆ ಕೂಡ ಬಂಡವಾಳ ಹೂಡುತ್ತಿವೆ.

ಯುವ ರಾಜ್‌ಕುಮಾರ್‌ ಹಾಗೂ ಸೂರಿ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಹೊಸ ಚಿತ್ರಕ್ಕೆ ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ವಿಜಯ್ ಕುಮಾರ್ ನಾಯಕಿ ಆಗಿದ್ದಾರೆ. ಇಂದು ಮುಹೂರ್ತ ಸಮಾರಂಭಕ್ಕೆ ದುನಿಯಾ ವಿಜಯ್‌ ಬಂದು ಕ್ಲ್ಯಾಪ್‌ ಮಾಡಿದರು. ಪುನೀತ್ ರಾಜ್​ಕುಮಾರ್​ ಪುತ್ರಿ ಧೃತಿ ಅವರು ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು. ಈ ವೇಳೆ ಯುವ ರಾಜ್​ಕುಮಾರ್ ಕುಟುಂಬದ ಸದಸ್ಯರು, ಕಾರ್ತಿಕ್‌ ಗೌಡ, ಯೋಗಿ ಜಿ. ರಾಜ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಸೂರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಸೂರಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ಯುವ ರಾಜ್​ಕುಮಾರ್ ಜೊತೆ ಕೈ ಜೋಡಿಸಿರುವ ಕಾರಣದಿಂದ ಈ ಸಿನಿಮಾ ಮೇಲೆ ಕುತೂಹಲ ಜಾಸ್ತಿ ಆಗಿದೆ. ಯುವ ಹಾಗೂ ರಿತನ್ಯಾ ಜೋಡಿ ಬಗ್ಗೆಯೂ ನಿರೀಕ್ಷೆ ಇದೆ. ಈಗಾಗಲೇ ‘ಲ್ಯಾಂಡ್‌ ಲಾರ್ಡ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ರಿತನ್ಯಾ ಅವರಿಗೆ ಇದು 2ನೇ ಸಿನಿಮಾ.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಇದನ್ನೂ ಓದಿ: ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್

ಈ ಚಿತ್ರಕ್ಕೆ ದೀಪು ಎಸ್‌. ಕುಮಾರ್‌ ಸಂಕಲನ ಮಾಡಲಿದ್ದಾರೆ. ಚರಣ್‌ ರಾಜ್‌ ಅವರು ಸಂಗೀತ ನೀಡುತ್ತಿದ್ದಾರೆ. ಸಂತೋಷ್‌ ಅವರ ಕಲಾ ನಿರ್ದೇಶನ, ಶೇಖರ್‌ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಮೇ ತಿಂಗಳ ಕೊನೆಯಲ್ಲಿ ಶೂಟಿಂಗ್‌ ಆರಂಭ ಆಗಲಿದೆ. ಯುವ ರಾಜ್​ಕುಮಾರ್​ ನಟನೆಯ 3ನೇ ಚಿತ್ರವಾಗಿ ಈ ಸಿನಿಮಾ ಮೂಡಿಬರುತ್ತಿದೆ. ಮೂರು ನಿರ್ಮಾಣ ಸಂಸ್ಥೆಗಳು ಒಟ್ಟಿಗೆ ಬಂಡವಾಳ ಹೂಡುತ್ತಿರುವುದರಿಂದ ಮೇಕಿಂಗ್​ನಲ್ಲಿ ಅದ್ದೂರಿತನವನ್ನು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್