AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ವಿರುದ್ಧ ದೂರುಗಳು: ಬೆಂಬಲಕ್ಕೆ ನಿಂತ ಚೇಂಬರ್ ಅಧ್ಯಕ್ಷೆ ಜಯಮಾಲ

Toxic movie teaser: ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕವಂತೂ ಟೀಕೆ ಮಾಡುವವರು, ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಚಿತ್ರೀಕರಣದ ಸಮಯದಲ್ಲಿಯೂ ಸಹ ‘ಟಾಕ್ಸಿಕ್’ ಸಿನಿಮಾ ಬಗ್ಗೆ ದೂರುಗಳು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಇದೀಗ ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಅವರು ‘ಟಾಕ್ಸಿಕ್’ ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ.

‘ಟಾಕ್ಸಿಕ್’ ವಿರುದ್ಧ ದೂರುಗಳು: ಬೆಂಬಲಕ್ಕೆ ನಿಂತ ಚೇಂಬರ್ ಅಧ್ಯಕ್ಷೆ ಜಯಮಾಲ
Jayamala Toxic
ಮಂಜುನಾಥ ಸಿ.
|

Updated on:Feb 11, 2026 | 5:54 PM

Share

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಭಾರಿ ದೊಡ್ಡ ಪ್ರಾಜೆಕ್ಟ್ ಇದಾಗಿದ್ದು, ಸಹಜವಾಗಿಯೇ ಸಿನಿಮಾದ ವಿರುದ್ಧ ಕೆಲವರು ದೂರುಗಳು, ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕವಂತೂ ಟೀಕೆ ಮಾಡುವವರು, ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಚಿತ್ರೀಕರಣದ ಸಮಯದಲ್ಲಿಯೂ ಸಹ ‘ಟಾಕ್ಸಿಕ್’ ಸಿನಿಮಾ ಬಗ್ಗೆ ದೂರುಗಳು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಇದೀಗ ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಅವರು ‘ಟಾಕ್ಸಿಕ್’ ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಮಹಿಳಾ ಆಯೋಗಕ್ಕೆ, ಸೆನ್ಸಾರ್ ಮಂಡಳಿಗೆ ದೂರುಗಳು ದಾಖಲಾಗಿದ್ದವು. ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ‘ಟಾಕ್ಸಿಕ್’ ಸಿನಿಮಾದ ವಿರುದ್ಧ ಆರೋಪ ಮಾಡಿದ್ದು, ದೇವದೂತ ಸಂತ ಮಿಕಯೇಲ್ ಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇಂದು ಫಿಲಂ ಚೇಂಬರ್​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೂತನ ಅಧ್ಯಕ್ಷೆ ಜಯಮಾಲ ಅವರು ಈ ಬಗ್ಗೆ ಮಾತನಾಡಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಸಿನಿಮಾದ ಟೀಸರ್ ನೋಡಿ ಇಡೀ ಸಿನಿಮಾ ಹೀಗೆಯೇ ಇರಲಿದೆ ಎಂದು ಮುಂಚಿತವಾಗಿ ನಿರ್ಧರಿಸುವುದು ತಪ್ಪು. ನಿಮಗೆ ಪ್ರತಿಭಟನೆ ಮಾಡುವ ಮನಸ್ಸಿದ್ದರೆ ಸಿನಿಮಾ ನೋಡಿ ಪ್ರತಿಭಟನೆ ಮಾಡಿ. ಕನ್ನಡ ಚಿತ್ರರಂಗ ಪ್ರಾರಂಭವಾಗಿ 93 ವರ್ಷಗಳಾಯ್ತು, ಈ ವರೆಗೆ ಒಮ್ಮೆಯೂ ಸಹ ಇತರ ಧರ್ಮಕ್ಕೆ ಅವಹೇಳನ ಮಾಡಿಲ್ಲ, ಸರ್ವಧರ್ಮ ಸಹಿಷ್ಣುವಾಗಿ ಚಿತ್ರರಂಗ ನಡೆದುಕೊಂಡು ಬಂದಿದೆ. ಈಗ ಒಂದು ಟೀಸರ್ ನೋಡಿ ಸಿನಿಮಾ ಬಗ್ಗೆ, ಚಿತ್ರರಂಗದ ಬಗ್ಗೆ ಆರೋಪ ಮಾಡುವುದು ತಪ್ಪು’ ಎಂದಿದ್ದಾರೆ ಜಯಮಾಲ.

ಇದನ್ನೂ ಓದಿ:ಯಶ್, ರಣ್​​ಬೀರ್ ನಟನೆಯ ‘ರಾಮಾಯಣ’ಕ್ಕೆ ಯುವ ಸ್ಟಾರ್ ಎಂಟ್ರಿ

‘ಟಾಕ್ಸಿಕ್’ ಸಿನಿಮಾ ಇನ್ನೂ ಸೆನ್ಸಾರ್ ಆಗಿಲ್ಲ, ಸೆನ್ಸಾರ್​​ನವರು ಸಿನಿಮಾವನ್ನು ನೋಡುತ್ತಾರೆ. ಆ ರೀತಿಯ ಅಂಶಗಳು ಇದ್ದರೆ ಅವರೇ ಅದನ್ನು ತೆಗೆದು ಬಿಡುತ್ತಾರೆ. ಆದರೆ ಅಷ್ಟರಲ್ಲೆ ಮಾಧ್ಯಮಗಳನ್ನು ಕರೆದು ಸುದ್ದಿ ಮಾಡುವುದು ತಪ್ಪಾಗುತ್ತದೆ, ಇದೆಲ್ಲ ಏನು ಪ್ರಚಾರಕ್ಕಾ ಮಾಡುತ್ತಿರೋದು. ಟೀಸರ್ ಅನ್ನು ಮಾಡುವುದು ಜನರನ್ನು ಚಿತ್ರಮಂದಿರಕ್ಕೆ ಕರೆತರಲು, ಒಂದು ಫೋಟೊ ನೋಡಿ ಸಿನಿಮಾ ಹೀಗೆಯೇ ಇರಲಿದೆ ಎಂದು ಹೇಳುವುದು ತಪ್ಪು. ನಾನು ಈ ಮೂಲಕ ಎಲ್ಲ ಸಂಘದವರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ದಯವಿಟ್ಟು ಸ್ವಲ್ಪ ತಾಳ್ಮೆ ಇರಲಿ’ ಎಂದಿದ್ದಾರೆ.

ಇನ್ನು ‘ಟಾಕ್ಸಿಕ್’ ಟೀಸರ್​​ನಲ್ಲಿರುವ ಹಿಂಸೆ ಮತ್ತು ಗ್ಲಾಮರಸ್ ದೃಶ್ಯಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಜಯಮಾಲ, ‘ಈಗ ಯಾವ ಸಿನಿಮಾನಲ್ಲಿ ಹಿಂಸೆ ಇಲ್ಲ ಹೇಳಿ. ಆದರೆ ಆ ಹಿಂಸೆ ಕತೆಯಲ್ಲಿ ಯಾವ ಕಾರಣಕ್ಕೆ ಇದೆ ಎಂಬುದು ಮುಖ್ಯವಾಗುತ್ತದೆ. ಕತೆಯೇ ಗೊತ್ತಿಲ್ಲದೆ ಹಿಂಸೆಯನ್ನು ದೂರುವುದು ಸರಿಯಲ್ಲ. ಅಲ್ಲದೆ ನಾವು ಸಿನಿಮಾದ ನಿರ್ಮಾಪಕರ ಜೊತೆಗೂ ಮಾತನಾಡಿದ್ದು, ಸಿನಿಮಾನಲ್ಲಿ ವಿವಾದ ಅನಿಸಿಕೊಳ್ಳುವಂಥಹದ್ದು ಏನೂ ಇಲ್ಲ’ ಎಂದು ಅವರು ಹೇಳಿದ್ದಾರೆ. ಸಿನಿಮಾನಲ್ಲಿ ಅಶ್ಲೀಲತೆಯನ್ನು ತೋರಿಸಲಾಗಿಲ್ಲ, ಟೀಸರ್​​ನಿಂದ ಇಡೀ ಸಿನಿಮಾವನ್ನು ಜಡ್ಜ್ ಮಾಡಲು ಸಾಧ್ಯವಿಲ್ಲ. ಹಾಗೇನಾದರೂ ಸಮಸ್ಯೆ ಇದ್ದರೆ ಅದನ್ನು ಸೆನ್ಸಾರ್ ಮಂಡಳಿ ನೋಡಿಕೊಳ್ಳಲಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Wed, 11 February 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ