AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ಸಿನಿಮಾಗಳನ್ನು ಉಳಿಸಿತು ಈ ಐಡಿಯಾ; ತಪ್ಪಿತು ಫ್ಯಾನ್ಸ್ ವಾರ್

ಪೈರಸಿ, ಫ್ಯಾನ್ ವಾರ್ ಮತ್ತು ನೆಗೆಟಿವ್ ರೇಟಿಂಗ್‌ಗಳಿಂದ ಸಿನಿಮಾಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ, ಆನ್‌ಲೈನ್ ರೇಟಿಂಗ್‌ಗಳನ್ನು ನಿಷ್ಕ್ರಿಯಗೊಳಿಸುವ ಹೊಸ ಟ್ರೆಂಡ್ ಕನ್ನಡ ಚಿತ್ರರಂಗದಲ್ಲಿ ಶುರುವಾಗಿದೆ. ಬುಕ್ ಮೈ ಶೋನಂತಹ ವೇದಿಕೆಗಳಲ್ಲಿ ರೇಟಿಂಗ್ ಬಂದ್ ಮಾಡಿಸುವುದರಿಂದ, ಅನಗತ್ಯ ವಿಮರ್ಶೆ ಮತ್ತು ಫ್ಯಾನ್ ವಾರ್‌ಗಳಿಂದ ಚಿತ್ರಗಳು ರಕ್ಷಿಸಲ್ಪಟ್ಟಿವೆ.

ಹಲವು ಸಿನಿಮಾಗಳನ್ನು ಉಳಿಸಿತು ಈ ಐಡಿಯಾ; ತಪ್ಪಿತು ಫ್ಯಾನ್ಸ್ ವಾರ್
ರೇಟಿಂಗ್ ಆಫ್ ಮಾಡಿಸಿದ ಸಿನಿಮಾಗಳು
ರಾಜೇಶ್ ದುಗ್ಗುಮನೆ
|

Updated on:Apr 01, 2026 | 5:46 PM

Share

ಸಿನಿಮಾಗಳನ್ನು ನಿರ್ಮಾಣ ಮಾಡುವುದು, ಅದನ್ನು ತೆರೆಗೆ ತರುವುದು ದೊಡ್ಡ ಚಾಲೆಂಜ್. ಅದೇ ರೀತಿ ಆ ಸಿನಿಮಾನ ಥಿಯೇಟರ್​​​ನಲ್ಲಿ ಉಳಿಸಿಕೊಂಡು ಹೋಗೋದು ಇನ್ನೂ ದೊಡ್ಡ ಸವಾಲು. ಸ್ಟಾರ್ ಸಿನಿಮಾ ಆದರಂತೂ ಪೈರಸಿಗಳ ಕಾಟಕ್ಕೆ ಚಿತ್ರ ನಲುಗಿ ಹೋಗುತ್ತದೆ. ಇದರ ಜೊತೆಗೆ, ಫ್ಯಾನ್ಸ್ ವಾರ ಕೂಡ ಸಿನಿಮಾನ ಬಲಿ ಪಡೆಯುತ್ತದೆ. ಈಗ ಚಿತ್ರರಂಗದಲ್ಲಿ ಆಗುತ್ತಿರುವ ಒಂದು ಬದಲಾವಣೆಯಿಂದ ಸಾಕಷ್ಟು ಸಿನಿಮಾಗಳು ಉಳಿದುಕೊಂಡಿವೆ.

ಮೊದಲೆಲ್ಲ ಸುದ್ದಿ ಪತ್ರಿಕೆಯಲ್ಲಿ ಬರುವ ವಿಮರ್ಶೆ ನೋಡಿ ಚಿತ್ರವನ್ನು ನೋಡಬೇಕೋ ಅಥವಾ ಬೇಡವೋ ಎಂದು ಜನರು ನಿರ್ಧಾರ ಮಾಡುತ್ತಿದ್ದರು. ಆದರೆ, ಈಗ ರೇಟಿಂಗ್ ಕಾಲ. ಕೈಬೆರಳ ತುದಿಯಲ್ಲಿ ರೇಟಿಂಗ್ ಸಿಗುತ್ತದೆ. ಸಿನಿಮಾಗೆ ಎಷ್ಟು ರೇಟಿಂಗ್ ಸಿಕ್ಕಿದೆ ಎಂಬುದನ್ನು ಆಧರಿಸಿ ಸಿನಿಮಾ ನೋಡಬೇಕೋ ಅಥವಾ ಇಲ್ಲವೋ ಎಂಬುದನ್ನು ಪ್ರೇಕ್ಷಕ ನಿರ್ಧಾರ ಮಾಡುತ್ತಾನೆ. ಆದರೆ, ಫ್ಯಾನ್ಸ್ ವಾರ್​ಗಳ ಕಾರಣಕ್ಕೆ ಈ ರೇಟಿಂಗ್ ಅನ್ನು ಕೂಡ ನಂಬುವ ಹಾಗಿಲ್ಲ. ಈಗ ರೇಟಿಂಗ್​​​ನೇ ಆಫ್ ಮಾಡಿಸುವ ಟ್ರೆಂಡ್ ಜೋರಾಗಿದ್ದು, ಇದು ಅನೇಕ ಸಿನಿಮಾಗಳನ್ನು ಉಳಿಸಿದೆ.

ದರ್ಶನ್ ನಟನೆಯ ‘ದಿ: ಡೆವಿಲ್’ ಸಿನಿಮಾಗೆ ಕೆಲವರು ಉದ್ದೇಶಪೂರ್ವಕವಾಗಿ ನೆಗೆಟಿವ್ ವಿಮರ್ಶೆ ನೀಡಬಹುದು ಎಂಬ ಭಯ ಇತ್ತು. ಈ ಕಾರಣದಿಂದ ಕೋರ್ಟ್​​ನಿಂದ ಆದೇಶ ತರುವ ಮೂಲಕ ರೇಟಿಂಗ್ ಕೊಡೋದನ್ನು ತಡೆಯಲಾಯಿತು. ನಂತರ ಸುದೀಪ್ ನಟನೆಯ ‘ಮಾರ್ಕ್’, ಮಲ್ಟಿ ಸ್ಟಾರರ್ ಸಿನಿಮಾ ‘45’ ಸಿನಿಮಾ ಕೂಡ ಇದೇ ತಂತ್ರ ಉಪಯೋಗಿಸಿದವು. ಕನ್ನಡದಲ್ಲಿ ಈ ಪ್ರಯೋಗ ಯಶಸ್ಸು ಕಂಡ ಬಳಿಕ ತೆಲುಗಿನವರು ಕೂಡ ಇದೇ ಮಾದರಿಯ ಮೊರೆ ಹೋದರು. ‘ಮನ ಶಂಕರ ವರಪ್ರಸಾದ ಗಾರು’, ‘ನಾರಿ ನಾರಿ ನಡುಮ ಮುರಾರಿ’, ‘ಅನಗನಗ ಒಕರಾಜು’ ತಂಡಗಳು ಕೂಡ ಇದೇ ಮಾದರಿಯನ್ನು ಅನುಸರಿಸಿದವು. ದೊಡ್ಡ ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ಬಂದ ತೆಲುಗಿನ ‘ಫಂಕಿ’, ‘ಕಪಲ್ ಫ್ರೆಂಡ್ಲಿ’ ಕೂಡ ಇದೇ ತಂತ್ರದ ಮೊರೆ ಹೋದವು. ‘ಹಯಗ್ರೀವ’ ಸಿನಿಮಾಗೂ ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡಲು ಅವಕಾಶ ಇರಲಿಲ್ಲ.

ಈ ತಂತ್ರವನ್ನು ಮೊದಲು ಕಂಡು ಹಿಡಿದಿದ್ದು ಬೆಂಗಳೂರಿನ ಆ್ಯಂಟಿ ಪರೈಸಿ ಸಂಸ್ಥೆ ಐಪ್ಲೆಕ್ಸ್ ಅನ್ನೋದು ವಿಶೇಷ. ಫ್ಯಾನ್​ ವಾರ್​​ಗಳನ್ನು ತಪ್ಪಿಸಬೇಕು, ಸಿನಿಮಾಗಳಿಗೆ ಸಿಗಬಹುದಾದ ನೆಗೆಟಿವ್ ಪ್ರಚಾರವನ್ನು ತಡೆಯಲು ಐಪ್ಲೆಕ್ಸ್ ಸಂಸ್ಥೆ ಈ ತಂತ್ರವನ್ನು ಅನ್ವೇಷಿಸಿತು.

‘ಮೊದಲ ಮೂರು ದಿನ ಆನ್​​ಲೈನ್ ಅಲ್ಲಿ ವಿಮರ್ಶೆ ಹಂಚಿಕೊಳ್ಳಬಾರದು’, ‘ಥಿಯೇಟರ್​ ಹೊರ ಭಾಗದಲ್ಲಿ ಯೂಟ್ಯೂಬರ್​​ಗಳು ವಿಮರ್ಶೆ ಪಡೆಯದಂತೆ ಮಾಡಬೇಕು’ ಎಂಬಿತ್ಯಾದಿ ನಿಯಮ ತರಲು ಕೆಲ ಚಿತ್ರರಂಗದವರು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಿಲ್ಲ. ಟಿಕೆಟ್ ಬುಕ್ ಮಾಡಲು ಎಲ್ಲರೂ ಬಹುವಾಗಿ ಅವಲಂಬಿತವಾಗಿರುವ ‘ಬುಕ್ ಮೈ ಶೋ’ ರೇಟಿಂಗ್ ಅನ್ನೇ ಬಂದ್ ಮಾಡಿಸೋ ಮೂಲಕ ಕೆಲವು ಸಿನಿಮಾಗಳು ಬಚಾವ್ ಆಗಿವೆ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಅಭಿಪ್ರಾಯ.

ಇದನ್ನೂ ಓದಿ: ‘ಡೆವಿಲ್’ಗೆ ರೇಟಿಂಗ್ ಕೊಡಂಗಿಲ್ಲ; ಕೋರ್ಟ್​ನಿಂದ ಆರ್ಡರ್ ತಂದಿದ್ದಕ್ಕೆ ಕಾರಣ ತಿಳಿಸಿದ ದಿನಕರ್

ಇನ್ನು, ‘ನಮ್ಮ ಸಿನಿಮಾಗೆ ಆ ಹೀರೋ ಅಭಿಮಾನಿಗಳು ನಗೆಟಿವ್ ವಿಮರ್ಶೆ ಕೊಟ್ಟರು, ಈ ಹೀರೋಗಳು ನೆಗೆಟಿವ್ ವಿಮರ್ಶೆ ಕೊಟ್ಟರು’ ಎಂಬ ದೂರು ಬರೋದಿಲ್ಲ. ಹೀಗಾಗಿ, ಈ ಕ್ರಮದಿಂದ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ವಾರ ಕೂಡ ನಿಂತಿದೆ. ಮುಂದಿನ ದಿನಗಳಲ್ಲಿ ಹಲವು ಸಂಸ್ಥೆಗಳು ಇದೇ ತಂತ್ರ ಬಳಸಬಹುದು. ಅಲ್ಲದೆ, ಮಲಯಾಳಂ, ತಮಿಳು ಹಾಗೂ ಹಿಂದಿ ಚಿತ್ರರಂಗದವರೂ ಇದೇ ಮಾದರಿಯನ್ನು ಜಾರಿಗೆ ತರಲು ಹೆಚ್ಚು ಉತ್ಸುಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:05 pm, Wed, 1 April 26

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ