Sriimurali Birthday: ಶ್ರೀಮುರಳಿಗೆ 39ನೇ ವರ್ಷದ ಜನ್ಮದಿನ; ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ ಫ್ಯಾನ್ಸ್
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಶ್ರೀಮುರಳಿಗೆ ವಿಶ್ ಮಾಡುತ್ತಿದ್ದಾರೆ. ಅವರ ಫೋಟೋಗಳನ್ನು ಹಂಚಿಕೊಂಡು ಪ್ರೀತಿಯಿಂದ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ.

ನಟ ಶ್ರೀಮುರಳಿ (Sriimurali Birthday) ಅವರು ಇಂದು (ಡಿಸೆಂಬರ್ 17) 39ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಖ್ಯಾತ ನಟ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನ ಹೊಂದದೇ ಇದ್ದಿದ್ದರೆ ಶ್ರೀಮುರಳಿ ಅದ್ದೂರಿಯಾಗಿ ಬರ್ತ್ಡೇ ಆಚರಣೆ ಮಾಡಿಕೊಳ್ಳುತ್ತಿದ್ದರು. ಅವರ ಸಾವಿನ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಶ್ರೀಮುರಳಿ ಹೇಳಿದ್ದಾರೆ. ಆ ಕಾರಣದಿಂದ ಈ ಬಾರಿ ಅವರ ಅಭಿಮಾನಿಗಳು ಜನ್ಮದಿನವನ್ನು ಅದ್ದೂರಿಯಾಗಿ ಸಂಭ್ರಮಿಸುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬರುತ್ತಿವೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಶ್ರೀಮುರಳಿಗೆ ವಿಶ್ ಮಾಡಿ ಶುಭ ಹಾರೈಸುತ್ತಿದ್ದಾರೆ.
ಶ್ರೀಮುರಳಿ ಬರ್ತ್ಡೇ ದಿನ ಅವರ ಅಭಿಮಾನಿಗಳು ಮನೆಯ ಮುಂದೆ ಜಮಾಯಿಸುತ್ತಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಅವರು ಕೂಡ ಅಭಿಮಾನಿಗಳ ಜತೆಗೂಡಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರು. ಆದರೆ, ಪುನೀತ್ ಸಾವಿನಿಂದ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ಆವರಿಸಿದೆ. ಹೀಗಾಗಿ, ಶ್ರೀಮುರಳಿ ಬರ್ತ್ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಶ್ರೀಮುರಳಿಗೆ ವಿಶ್ ಮಾಡುತ್ತಿದ್ದಾರೆ. ಅವರ ಫೋಟೋಗಳನ್ನು ಹಂಚಿಕೊಂಡು ಪ್ರೀತಿಯಿಂದ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ‘ಭಗೀರ’ ಚಿತ್ರದಲ್ಲಿ ಶ್ರೀಮುರಳಿ ನಟಿಸುತ್ತಿದ್ದಾರೆ. ಈ ಚಿತ್ರತಂಡದ ಕಡೆಯಿಂದ ಶ್ರೀಮುರಳಿಗೆ ಗಿಫ್ಟ್ ಸಿಗಲಿದೆಯೇ ಎನ್ನುವ ಕುತೂಹಲ ಕಾಡಿದೆ.
ಅಭಿಮಾನಿಗಳು ಹಂಚಿಕೊಂಡಿರುವ ಸಿಡಿಪಿ (ಕಾಮನ್ ಡಿಸ್ಪ್ಲೆ ಪ್ರೊಫೈಲ್):
Here is the much awaited 40th Birthday CDP of our beloved #Roaringstar @SRIMURALIII BOSS !!! Happy Birthday Demigod…❤️#HBDSriiMurali pic.twitter.com/uV3ERPYBjB
— Srii Murali Trends ® (@SriMuraliTrends) December 16, 2021
ಪುನೀತ್ ರಾಜ್ಕುಮಾರ್ ಅವರು ಅಕಾಲಿಕ ಮರಣ ಹೊಂದುತ್ತಾರೆ ಎಂದು ಯಾರೆಂದರೆ ಯಾರೂ ಭಾವಿಸಿರಲಿಲ್ಲ. ಅವರ ಆಪ್ತ ವರ್ಗದವರಿಗೆ, ಅಭಿಮಾನಿಗಳಿಗೆ ಈ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಬರ್ತ್ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ಶ್ರೀಮುರಳಿ ಬರೆದುಕೊಂಡಿದ್ದರು. ‘ನನ್ನ ಪ್ರೀತಿಯ ಅಭಿಮಾನಿಗಳೇ. ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ. ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗು ಆಶೀರ್ವಾದವನ್ನು ಬಯಸುವ ನಿಮ್ಮ, ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ)’ ಎಂದು ಶ್ರೀಮುರಳಿ ಟ್ವಿಟರ್ನಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಶ್ರೀಮುರಳಿಗೆ 80 ಸಾವಿರ ರೂಪಾಯಿ ಮೌಲ್ಯದ ಸೇಬಿನ ಹಾರ; ಇಲ್ಲಿದೆ ವಿಡಿಯೋ
ಮುಂದುವರಿದ ‘ಮದಗಜ’ ಆರ್ಭಟ; 2ನೇ ದಿನಕ್ಕೆ ಶ್ರೀಮುರಳಿ ಚಿತ್ರದ ಕಲೆಕ್ಷನ್ ಎಷ್ಟು?
Published On - 7:28 am, Fri, 17 December 21




