Meena: ಮೀನಾ ಪತಿ ನಿಧನರಾಗಿ 5 ತಿಂಗಳು ಕಳೆಯುವುದರಲ್ಲಿ 2ನೇ ಮದುವೆಗೆ ಒತ್ತಾಯ?

Meena 2nd Marriage: ನಟಿ ಮೀನಾ ಅವರ 2ನೇ ಮದುವೆಯ ತಯಾರಿ ಕುರಿತು ಗುಸುಗುಸು ಹಬ್ಬಿದೆ. ವಿವಾಹಕ್ಕೆ ಪೋಷಕರಿಂದಲೇ ಒತ್ತಾಯ ಹೇರಲಾಗುತ್ತಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

Meena: ಮೀನಾ ಪತಿ ನಿಧನರಾಗಿ 5 ತಿಂಗಳು ಕಳೆಯುವುದರಲ್ಲಿ 2ನೇ ಮದುವೆಗೆ ಒತ್ತಾಯ?
ಮೀನಾ
Follow us
TV9 Web
| Updated By: ಮದನ್​ ಕುಮಾರ್​

Updated on:Nov 29, 2022 | 8:03 PM

ಬಹುಭಾಷಾ ನಟಿ ಮೀನಾ (Meena) ಅವರ ಬದುಕಿನಲ್ಲಿ ಅಂಥ ಒಂದು ಕರಾಳ ದಿನ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. 2022ರ ಜೂನ್​ 28ರಂದು ಅವರ ಪತಿ ವಿದ್ಯಾಸಾಗರ್​ (Vidyasagar) ಅನಾರೋಗ್ಯದಿಂದ ನಿಧನರಾಗಿದ್ದು ನೋವಿನ ಸಂಗತಿ. ಅವರು ಇಹಲೋಕ ತ್ಯಜಿಸಿ 5 ತಿಂಗಳು ಕಳೆಯುವುದರೊಳಗೆ ಮೀನಾ ಅವರ 2ನೇ ಮದುವೆ (Meena Second Marriage) ಬಗ್ಗೆ ಸುದ್ದಿ ಹರಿದಾಡಲು ಶುರುವಾಗಿದೆ. ಈ ವಿಚಾರದ ಕುರಿತಂತೆ ಅವರ ಕಡೆಯಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. ಭವಿಷ್ಯದ ದೃಷ್ಟಿಯಿಂದ ಇನ್ನೊಂದು ಮದುವೆ ಆಗುವಂತೆ ಸ್ವತಃ ಮೀನಾ ಪೋಷಕರೇ ಒತ್ತಾಯ ಹೇರುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಚಿತ್ರರಂಗದಲ್ಲಿ ಮೀನಾ ಅವರಿಗೆ ಸಖತ್​ ಬೇಡಿಕೆ ಇದೆ. ಬಹುಭಾಷೆಯಲ್ಲಿ ಅವರಿಗೆ ಅಭಿಮಾನಿಗಳು ಇದ್ದಾರೆ. ಪತಿಯ ನಿಧನದ ನಂತರ ಮೀನಾ ಮಂಕಾಗಿದ್ದರು. ಆದರೆ ಕುಟುಂಬದವರು ಮತ್ತು ಆಪ್ತರು ಧೈರ್ಯ ತುಂಬಿದ ಬಳಿಕ ಮತ್ತೆ ಸಹಜ ಜೀವನಕ್ಕೆ ಮರಳಲು ಅವರು ಪ್ರಯತ್ನಿಸುತ್ತಾ ಇದ್ದಾರೆ. ನಿಧಾನವಾಗಿ ಸೋಶಿಯಲ್​ ಮೀಡಿಯಾದಲ್ಲೂ ಆ್ಯಕ್ಟೀವ್​ ಆಗಲು ಪ್ರಯತ್ನಿಸುತ್ತಿದ್ದಾರೆ. ಅಷ್ಟರಲ್ಲಾಗಲೇ ಅವರ ಬಗ್ಗೆ ಈ ಹೊಸ ಗಾಸಿಪ್​ ಕೇಳಿಬರಲು ಆರಂಭಿಸಿದೆ.

ಮೀನಾ ಅವರಿಗೆ 11 ವರ್ಷದ ಪುತ್ರಿ ಇದ್ದಾಳೆ. ಆಕೆಯ ಭವಿಷ್ಯಕ್ಕಾಗಿ ಮೀನಾ ಅವರು ಇನ್ನೊಂದು ಮದುವೆ ಆಗುವುದು ಸೂಕ್ತ ಎಂದು ಪೋಷಕರು ಆಲೋಚಿಸಿದ್ದಾರೆ ಹಾಗೂ 2ನೇ ಮದುವೆಗೆ ಒತ್ತಾಯ ಕೂಡ ಹೇರುತ್ತಿದ್ದಾರೆ ಎಂದು ವರದಿ ಪ್ರಕಟ ಆಗಿದೆ. ಅಷ್ಟೇ ಅಲ್ಲದೇ, ಮೀನಾ ಕುಟುಂಬಕ್ಕೆ ಆಪ್ತವಾಗಿರುವ ವ್ಯಕ್ತಿಯೊಬ್ಬರ ಜೊತೆ ಮದುವೆ ನೆರವೇರಿಸಲು ಆಲೋಚನೆ ಮಾಡಲಾಗಿದ್ದು, ಅದಕ್ಕೆ ಮೀನಾ ಅವರ ಒಪ್ಪಿಗೆಯೂ ಇದೆ ಎಂದೆಲ್ಲ ಸುದ್ದಿ ಹಬ್ಬಿದೆ.

ಇದನ್ನೂ ಓದಿ
Image
Haripriya: ಶೀಘ್ರವೇ ಮೌನ ಮುರಿಯುತ್ತಾರಾ ಹರಿಪ್ರಿಯಾ-ವಸಿಷ್ಠ ಸಿಂಹ? ಎಲ್ಲೆಲ್ಲೂ ಇವರದ್ದೇ ಮಾತುಕತೆ
Image
ಪತಿಯನ್ನು ಕಳೆದುಕೊಂಡ ದುಃಖದಲ್ಲಿ ವಿಶೇಷ ಮನವಿ ಮಾಡಿದ ನಟಿ ಮೀನಾ
Image
Meena: ಮೀನಾ ಪತಿ ವಿದ್ಯಾಸಾಗರ್​ ಸಾವಿಗೆ ಕಾರಣ ಏನು? ಕೊವಿಡ್​ ಕುರಿತ ಅನುಮಾನಕ್ಕೆ ಖುಷ್ಬೂ ಪ್ರತಿಕ್ರಿಯೆ
Image
Meena: ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್​​ ಇನ್ನಿಲ್ಲ; ಶ್ವಾಸಕೋಶದ ಸೋಂಕಿನಿಂದ ನಿಧನ

ಇಷ್ಟೆಲ್ಲ ಅಂತೆ-ಕಂತೆಗಳು ಹರಿದಾಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಮೀನಾ ಅಥವಾ ಅವರ ಕುಟುಂಬದವರಿಂದ ಅಧಿಕೃತ ಮಾಹಿತಿ ಹೊರಬೀಳಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಸದ್ಯ ಮೀನಾ ಅವರು ಹೊಸ ಸಿನಿಮಾ ಒಪ್ಪಿಕೊಂಡು, ಅದರ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಕೆಲವು ಸಮಾರಂಭಗಳಿಗೂ ಅವರು ಹಾಜರಿ ಹಾಕುತ್ತಿದ್ದಾರೆ. ಆ ಮೂಲಕ ಪತಿಯ ಅಗಲಿಕೆಯ ನೋವನ್ನು ಮರೆಯಲು ಅವರು ಪ್ರಯತ್ನಿಸುತ್ತಿದ್ದಾರೆ.

2009ರಲ್ಲಿ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್​ ಜೊತೆ ಮೀನಾ ವಿವಾಹ ನೆರವೇರಿತ್ತು. 2011ರಲ್ಲಿ ಈ ಜೋಡಿಗೆ ಹೆಣ್ಣುಮಗು ಜನಿಸಿತು. 2022ರಲ್ಲಿ ವಿದ್ಯಾಸಾಗರ್​ ಅವರು ಶ್ವಾಸಕೋಶದ ಸೋಂಕಿಗೆ ಒಳಗಾದರು. ಚೆನ್ನೈನ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿ ಆಗದೇ ಅವರು ಇಹಲೋಕ ತ್ಯಜಿಸಿದರು. ಆ ಘಟನೆ ನಡೆದು 5 ತಿಂಗಳು ಕಳೆಯುವುದರಲ್ಲೇ ಮೀನಾ ಅವರ 2ನೇ ಮದುವೆಯ ತಯಾರಿ ಕುರಿತು ಗುಸುಗುಸು ಹಬ್ಬಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:03 pm, Tue, 29 November 22

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ